ಗೋಹತ್ಯೆ ನಿಷೇಧಿಸಲು ಮೋದಿ ಸರಕಾರ ಸೂಕ್ತ ಕಾನೂನು ರೂಪಿಸಬೇಕು: ಪೇಜಾವರ ಶ್ರೀ
ಉಡುಪಿ: ಗೋಹತ್ಯೆ, ಗೋಮಾಂಸದ ಭಕ್ಷಣೆ ಹೇಯ ಕೃತ್ಯ. ಮಾನವೀಯ ನೆಲೆಯಲ್ಲಿ ಗೋವಿನ ರಕ್ಷಣೆಯಾಗಬೇಕು. ಕೇಂದ್ರದಲ್ಲಿ ಬಿಜೆಪಿ ಬಹುಮತದಿಂದ ಆಯ್ಕೆಯಾಗಿದೆ. ಹೀಗಾಗಿ ನರೇಂದ್ರ ಮೋದಿ ನೇತೃತ್ವದ ಸರಕಾರ ಗೋವಿನ ರಕ್ಷಣೆಗೆ ಸೂಕ್ತ ಕಾನೂನು ರೂಪಿಸಬೇಕು ಎಂದು ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಹೇಳಿದ್ದಾರೆ. ಉಡುಪಿ ಶ್ರೀಕೃಷ್ಣ ಮಠದಲ್ಲಿ ಭಾನುವಾರ ದೇಸಿ ಗೋ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ಪಶು ಸಂಪತ್ತು ಬೆಳೆಯಬೇಕು. ಅಮೃತ ಕೊಡುವ ಗೋವುಗಳ ಬಗ್ಗೆ ಕಾಳಜಿ ವಹಿಸಬೇಕಿದೆ. ಗೋವುಗಳನ್ನು ಉಳಿಸುವ ಕಾಳಜಿ ಯಾರು […]
ಕಾರ್ಕಳ: ಜಾನುವಾರು ಅಕ್ರಮ ಸಾಗಟ ಐವರ ಬಂಧನ, ಪಿಕಾಪ್ ವಾಹನದಲ್ಲಿ ಹಿಂಸಾತ್ಮಕ ವಾಗಿ ಗೋಸಾಗಾಟ
ಕಾರ್ಕಳ: ತಾಲೂಕಿನ ಮುಡಾರು ಗ್ರಾಮದ ಕೆಳಭಟ್ರ ಅಂಗಡಿ ಸಮೀಪದಲ್ಲಿ ಅಕ್ರಮವಾಗಿ ಗೋಸಾಗಟ ಮಾಡುತ್ತಿದ್ದ ಐವರನ್ನು ಕಾರ್ಕಳ ಗ್ರಾಮಾಂತ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಕಾರ್ಕಳ ಕಸ್ಬಾ ಗ್ರಾಮದ ಅಶ್ಮತ್ (25), ಮಂಗಳೂರು ಅಡ್ಡೂರು ಸಮೀಪದ ಬಶೀರ್ (29), ಫರಂಗಿಪೇಟೆ ಪಡು ಗ್ರಾಮದ ಇಮ್ತಿಯಾಜ್ (33), ಮಂಗಳೂರು ಅಡ್ಡೂರಿನ ಮನ್ಸೂರ್ ಹುಸೇನ್ (33), ಹಾಗೂ ಜಾನುವಾರುಗಳನ್ನು ಕಳವುಗೈದು ದಂಧೆಕೋರರಿಗೆ ನೀಡಿದ ಶಿರ್ಲಾಲು ಕೊಡಂಜೆ ನಿವಾಸಿ ಅನಿಲ್ ಪೂಜಾರಿ (28) ಬಂಧಿತ ಆರೋಪಿಗಳು. ಇವರು ಪಿಕಾಪ್ ವಾಹನದಲ್ಲಿ ಹಿಂಸಾತ್ಮಕ ವಾಗಿ ಜಾನುವಾರುಗಳನ್ನು […]