ಜೂ. 1: ಉಡುಪಿಯಲ್ಲಿ ಸಂಚಾರ ಬದಲಾವಣೆ

ಉಡುಪಿ, ಮೇ 30: ಶ್ರೀಕೃಷ್ಣ ಮಠದಲ್ಲಿ ಸುವರ್ಣ ಗೋಪುರ ಸಮರ್ಪಣೋತ್ಸವ ಪ್ರಯುಕ್ತ ಜೂ.1ರಂದು ಜೋಡುಕಟ್ಟೆಯಿಂದ ಶ್ರೀಕೃಷ್ಣ ಮಠದವರೆಗೆ ಶೋಭಾಯಾತ್ರೆ ನಡೆಯಲಿರುವುದರಿಂದ ಅಂದು ಉಡುಪಿ ನಗರದಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ. ಅಂದು ಸಂಜೆ 4ರಿಂದ ರಾತ್ರಿ ಸುಮಾರು 9 ಗಂಟೆಯವರೆಗೆ ಸಂಚಾರ ಬದಲಾವಣೆ ಇರುತ್ತದೆ ಎಂದು ಎಸ್‌ಪಿ ನಿಶಾ ಜೇಮ್ಸ್‌ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ••ಶೋಭಾಯಾತ್ರೆ ಜೋಡುಕಟ್ಟೆಯಿಂದ ಹೊರಡುವ ವೇಳೆ ಸರ್ವಿಸ್‌ ಮತ್ತು ಸಿಟಿ ಬಸ್‌ ನಿಲ್ದಾಣದಿಂದ ಮಂಗಳೂರು, ಕಟಪಾಡಿ, ಅಂಬಲಪಾಡಿ ಕಡೆಗೆ ಹೋಗುವ ಎಲ್ಲ ಬಸ್ಸುಗಳು ಶಿರಿಬೀಡು, […]

ನನಗೆ ಎಲ್ಲಾ ಪಕ್ಷಗಳು ಸಮಾನ :ಪೇಜಾವರ ಶ್ರೀ

ಉಡುಪಿ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಎಲ್ಲಾ ಪಕ್ಷಗಳು ಸ್ವತಂತ್ರವಾಗಿ ಹೋರಾಟ ಮಾಡಬೇಕಿತ್ತು.  ಇದರಿಂದ ವಿಪಕ್ಷಗಳು ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಪಡೆಯಲು  ಸಾಧ್ಯವಾಗುತ್ತಿತ್ತು.  ಆದರೆ ಅದು ಆಗಿಲ್ಲ. ಬಿಜೆಪಿ ಕೋಮುವಾದಿ ಪಕ್ಷ,  ಅದನ್ನು ಸೋಲಿಸಬೇಕೆಂದು ಎಲ್ಲಾ ಪಕ್ಷಗಳು ಒಂದಾದವು. ನನಗೆ ದೇಶದ ಎಲ್ಲಾ ಪಕ್ಷಗಳು ಸಮಾನ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು. ಉಡುಪಿ ಶ್ರೀಕೃಷ್ಣಮಠದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ  ಅವರು ಮಾತನಾಡಿದರು.  ವೇದವ್ಯಾಸರೇ ರಾಷ್ಟ್ರಪಿತರು ಎಂಬುವುದು ನನ್ನ ಅಭಿಪ್ರಾಯ.ಭಾರತ ಮಹಾತ್ಮ ಗಾಂಧೀಜಿ ಅವರಿಂದ ಆರಂಭ ಆದದ್ದಲ್ಲ. ವೇದವ್ಯಾಸರು […]

ಮಿಸ್‌ ಬಿಲ್ಲವ – 2019 ಸೌಂದರ್ಯ ಸ್ಪರ್ಧೆ: ಕಾಪುವಿನ ಕಾವ್ಯ ಅಂಚನ್‌ ಪ್ರಥಮ ಸ್ಥಾನ

ಕಾಪು : ಬಿರುವೆರ್‌ ಕುಡ್ಲ ಇವರ ಸಹಯೋಗದಲ್ಲಿ ಸುಧೀಕ್ಷಾ ಕಿರಣ್‌ ಸುವರ್ಣ ಇವರ ನೇತೃತ್ವದಲ್ಲಿ ಮಂಗಳೂರಿನಲ್ಲಿ ನಡೆದ ಮಿಸ್‌ ಬಿಲ್ಲವ – 2019 ಸೌಂದರ್ಯ ಸ್ಪರ್ಧೆಯಲ್ಲಿ ಕಾಪುವಿನ ಕಾವ್ಯ ಅಂಚನ್‌ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ಗ್ರಾವಿಟಿ ಡಾನ್ಸ್‌ ಗ್ರೂಪ್‌ನ ಸದಸ್ಯೆಯಾಗಿದ್ದಾರೆ.

ಕಲ್ಯಾಣಪುರ ‘ಶ್ರೀ ಬಾಲ ಮಾರುತಿ ಮಂದಿರ’:  ಶಿಖರ ಕಲಶ ಪ್ರತಿಷ್ಠೆ, ಬ್ರಹ್ಮ ಕುಂಭಾಭಿಷೇಕ ನೂತನ ಆಲಯ ಸಮರ್ಪಣೆ, ವಾರ್ಷಿಕ ಸಮಾರಂಭಕ್ಕೆ ಭರದ ಸಿದ್ಧತೆ

ಉಡುಪಿ: ಉಡುಪಿ‌ ಕಲ್ಯಾಣಪುರ ಶ್ರೀ ಬಾಲ ಮಾರುತಿ ವ್ಯಾಯಾಮ ಶಾಲೆಯ ನೂತನ ಆಲಯ ಸಮರ್ಪಣೆ ಪುನಃ ಪ್ರತಿಷ್ಠೆ, ಶಿಖರ ಕಲಶ ಪ್ರತಿಷ್ಠೆ, ಬ್ರಹ್ಮ ಕುಂಭಾಭಿಷೇಕ ಮತ್ತು ವಾರ್ಷಿಕ ಸಮಾರಂಭ ಜೂ. 4ರಿಂದ ಜೂ. 7ರ ವರೆಗೆ ಜರಗಲಿದೆ.‌ ಜೂ. 4ರಂದು ಸಂಜೆ 3.30ಕ್ಕೆ ಕಲ್ಯಾಣಪುರ ಶ್ರೀ ವೀರಭದ್ರ ದೇವಸ್ಥಾನದಿಂದ ಹೊರೆಕಾಣಿಕೆ ಮೆರವಣಿಗೆ ಹೊರಟು ವ್ಯಾಯಮ ಶಾಲೆಗೆ ತಲುಪಲಿದೆ ದೇವಸ್ಥಾನದ ಧರ್ಮದರ್ಶಿ ಜ್ಯೋತಿಪ್ರಸಾದ ವಿ.ಶೆಟ್ಟಿಗಾರ ಚಾಲನೆ ನೀಡಲಿದ್ದಾರೆ. ಅಂದು ಸಂಜೆ 6.30ಕ್ಕೆ ಸಾಮೂಹಿಕ ಪ್ರಾರ್ಥನೆ, ತೋರಣ,ಉಗ್ರಾಣ ಮುಹೂರ್ತ, ವಾಸ್ತುಹೋಮ, […]