ಮೇ 31: ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ ನೂತನ ಶಾಖೆ, ಕಟ್ಟಡ ಶುಭಾರಂಭ
ಬೈಂದೂರು: ಇಲ್ಲಿನ ನಾವುಂದದಲ್ಲಿ ಮುಖ್ಯ ಕಛೇರಿ ಹೊಂದಿರುವ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಬಡಾಕೆರೆಯ ನೂತನ ಶಾಖೆ ಮತ್ತು ಕಟ್ಟಡದ ಉದ್ಘಾಟನಾ ಸಮಾರಂಭ ಮೇ. 31ರಂದು ಬೆಳಿಗ್ಗೆ 10.30ಕ್ಕೆ ನೆರವೇರಲಿದೆ. ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರಕುಮಾರ್ ನೂತನ ಶಾಖೆ ಮತ್ತು ಕಟ್ಟಡವನ್ನು ಉದ್ಘಾಟಿಸುವರು. ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಗೋದಾಮು ಉದ್ಘಾಟಿಸಲಿದ್ದಾರೆ. ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ ಶುಭಾಶಂಸನೆ ಮಾಡುವರು. […]
ಒಮ್ಮೆ ನೋಡಿ ಬ್ರೆಡ್ ಟೋಸ್ಟ್ ನ ಟೇಸ್ಟ್: ಈ ವಿಡಿಯೋ ನೋಡಿ ಬ್ರೆಡ್ ಟೋಸ್ಟ್ ಮಾಡಿ
ಸಿಂಪಲ್ಲಾಗೊಂದು ಬ್ರೆಡ್ ಬೋಂಡ ಮನೇಲೇ ಮಾಡಿ ತಿನ್ನುವ ಸುಖವೇ ಬೇರೆ. ಇಲ್ಲಿ ಕಾರ್ಕಳದ ಡಾ. ಹರ್ಷಾ ಕಾಮತ್ ಬ್ರೆಡ್ ಬೋಂಡ ಮಾಡೋ ವಿಧಾನವನ್ನು ವಿಡಿಯೋ ಮೂಲಕ ತಿಳಿಸಿಕೊಟ್ಟಿದ್ದಾರೆ. ಬ್ರೆಡ್ ಟೋಸ್ಟ್: ಏನೇನ್ ಬೇಕು? ಒಂದು ಇರುಳ್ಳಿ, ಒಂದು ಟೊಮೆಟೊ ಒಂದು ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಸ್ವಲ್ಪ, ಕಡ್ಲೆಹಿಟ್ಟು ಒಂದು ಕಪ್ ಬ್ರೆಡ್-ಎಂಟು. ಮಾಡುವ ವಿದಾನ: ಬ್ರೆಡ್ಡನ್ನು ಹೊರತುಪಡಿಸಿ ಮಿಕ್ಕೆಲ್ಲಾ ಸಾಮಗ್ರಿಯನ್ನು ಸ್ವಲ್ಪ ನೀರು ಹಾಕಿ ಬೆರೆಸಿ, ತೆಳು ಹಿಟ್ಟನ್ನು ತಯಾರಿಸಿ ಬ್ರೆಡ್ ಸ್ಲೈಸ್ […]