ನೀರಿನ ಸಮಸ್ಯೆಗೆ ಸ್ಪಂದಿಸಿದ ಸಿಎಂ ಎಚ್ಡಿಕೆಗೆ ಧನ್ಯವಾದ ತಿಳಿಸಿದ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ
ಬೆಳ್ತಂಗಡಿ ಮೇ29: ಧರ್ಮಸ್ಥಳದಲ್ಲಿ ನೀರಿನ ಅಭಾವಕ್ಕೆ ಸ್ಪಂಧಿಸಿರುವ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರಿಗೆ ಧರ್ಮಸ್ಥಳ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರು ಪತ್ರದ ಮೂಲಕ ಕೃತಜ್ಞತೆ ತಿಳಿಸಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನೀರಿನ ಅಭಾವ ಕಂಡು ಬಂದ ತಕ್ಷಣ ನಿಮ್ಮ ಆದೇಶದಂತೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮತ್ತು ಜಲವಾಹಿನಿ ಮಂಡಳಿ ಮತ್ತು ಸಣ್ಣ ನೀರಾವರಿ ಯೋಜನೆಯ ಅಧಿಕಾರಿಗಳು ಧರ್ಮಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಗಮನಿಸಿ ಸರ್ಕಾರಕ್ಕೆ ವರದಿ ನೀಡಿದ್ದಾರೆ. ನಮ್ಮ ಕೋರಿಕೆಯಂತೆ ಕುಡಿಯುವ ನೀರಿನ ಕೊರತೆ ಸಮಸ್ಯೆಗೆ ಪರಿಹಾರವಾಗಿ ನೇತ್ರಾವತಿ ಮತ್ತು […]
ರಾಜ್ಯ ಮಟ್ಟದ ವಿಜ್ಞಾನ ಲೇಖಕರ ಸ್ಪರ್ಧೆ
ಉಡುಪಿ, ಮೇ 29: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಹಾಗೂ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ 32 ನೇ ರಾಜ್ಯ ಮಟ್ಟದ ಕನ್ನಡ ವಿಜ್ಞಾನ ಬರಹಗಾರರ ತರಬೇತಿ ಶಿಬಿರವನ್ನು ಜೂನ್ 21 ರಿಂದ 24 ರ ವರೆಗೆ ಬೆಂಗಳೂರಿನ ಎಚ್.ಕೆ.ಇ.ಎಸ್ ಶ್ರೀ ವೀರೇಂದ್ರ ಪಾಟೀಲ್ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನಲ್ಲಿ ಆಯೋಜಿಸಲಾಗುತ್ತಿದೆ. 4 ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ವಿಜ್ಞಾನ ಲೇಖನಗಳ ಬರಹ, ಲೇಖನ ಪ್ರಕಾರಗಳು, ಮಾಧ್ಯಮಕ್ಕೆ ಬರಹ, ವಿಜ್ಞಾನ ಬರಹದಲ್ಲಿನ […]
ಪ್ರಾರ್ಥನಾ ಮಂದಿರಗಳ ಪಾವಿತ್ರ್ಯಕ್ಕಿಂತ ಮನುಷ್ಯನ ಘನತೆ ಮುಖ್ಯ:ಅಕ್ಬರ್ ಅಲಿ
ಉಡುಪಿ: ಪ್ರಾರ್ಥನಾ ಮಂದಿರಗಳ ಪಾವಿತ್ರ್ಯಕ್ಕಿಂತ ಮನುಷ್ಯನ ಘನತೆ ಮುಖ್ಯವಾಗಿರುತ್ತದೆ. ಪ್ರಾರ್ಥನಾ ಮಂದಿರಗಳನ್ನು ಮನುಷ್ಯರು ಸೃಷ್ಠಿಸಿದರೆ, ಮನುಷ್ಯರನ್ನು ದೇವರು ಸೃಷ್ಠಿಸಿದ್ದಾರೆ. ಆದ್ದರಿಂದ ಮಂದಿರಗಳಿಗಿಂತ ಮನುಷ್ಯನ ಪ್ರಾವಿತ್ಯತೆ ತುಂಬಾ ಪ್ರಾಮುಖ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಸದ್ಭಾವನಾ ಮಂಚ್ನ ಪ್ರಧಾನ ಕಾರ್ಯದರ್ಶಿ ಅಕ್ಬರ್ ಅಲಿ ಹೇಳಿದರು. ಅವರು ಸ್ಟೂಡೆಂಟ್ಸ ಇಸ್ಲಾಮಿಕ್ ಆರ್ಗನೈಸೇಶನ್ ಆ-ಫ್ ಇಂಡಿಯಾ ಉಡುಪಿ ಜಿಲ್ಲೆಯ ವತಿಯಿಂದ ಉಡುಪಿಯ ಮುಸ್ಲಿಮ್ ವೆಲ್ಫೆರ್ ಅಸೋಸಿಯೇಶನ್ ಕಚೇರಿಯಲ್ಲಿ ಮಂಗಳವಾರ ಆಯೋಜಿಸಲಾದ ಸೌಹಾರ್ದ ಇ-ಫ್ತಾರ್ ಕೂಟದಲ್ಲಿ ಮಾತನಾಡಿದರು. ದೇವರು ಹಾಗೂ ಧರ್ಮ ಒಂದೇ ಎಂಬುದನ್ನು ಕುರಾನ್ […]
ಕುಟುಂಬ ವ್ಯವಸ್ಥೆಯಲ್ಲಿ ಬದಲಾವಣೆ ಆಗಬೇಕು:ಡಾ. ಮಹಾಬಲೇಶ್ವರ ರಾವ್
ಉಡುಪಿ: ಉದ್ಯೋಗ ಒದಗಿಸುವ ಮೂಲಕ ಮಹಿಳೆಯರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡಬೇಕು. ಇದು ಅವರ ಸಬಲೀಕರಣಕ್ಕೆ ಹಾದಿಯಾಗುತ್ತದೆ. ಅದೇ ರೀತಿ ಕುಟುಂಬ ವ್ಯವಸ್ಥೆಯಲ್ಲಿ ಬದಲಾವಣೆ ಆಗಬೇಕು. ಪುರುಷರಿಗೆ ಸರಿಸಮಾನವಾಗಿ ಹೆಣ್ಣನ್ನು ಗೌರವಿಸುವ ಹಾಗೂ ಅವರ ಹಕ್ಕುಗಳನ್ನು ನೀಡುವ ವ್ಯವಸ್ಥೆ ಜಾರಿಯಾಗಬೇಕು ಎಂದು ಶಿಕ್ಷಣ ತಜ್ಞ ಡಾ. ಮಹಾಬಲೇಶ್ವರ ರಾವ್ ಹೇಳಿದರು.ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ (ಬಿವಿಟಿ) ಹಾಗೂ ಮಣಿಪಾಲ ಅಕಾಡೆಮಿ ಆ-ಫ್ಜನರಲ್ ಎಜುಕೇಶನ್ ವತಿಯಿಂದ ನಗರದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಬುಧವಾರ ಏರ್ಪಡಿಸಿದ್ದ ಡಾ. ಟಿಎಂಎ […]
ಮೇ 31: ವಿಶ್ವ ತಂಬಾಕು ರಹಿತ ದಿನ
ಉಡುಪಿ, ಮೇ 29: ಜಿಲ್ಲಾಡಳಿತ ಉಡುಪಿ, ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಜಿಲ್ಲೆ, ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಉಡುಪಿ ಜಿಲ್ಲೆ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಕಾರ್ಕಳ, ಸರ್ಕಾರಿ ಪದವಿ ಪೂರ್ವ ಕಾಲೇಜು ಬಜಗೋಳಿ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ವಿಶ್ವ ತಂಬಾಕು ರಹಿತ ದಿನವನ್ನು ತಂಬಾಕು ಮತ್ತು ಶ್ವಾಸಕೋಶದ ಆರೋಗ್ಯ ಎಂಬ ಘೋಷವಾಕ್ಯದಡಿಯಲ್ಲಿ ಮೇ 31 ರಂದು ಬೆಳಗ್ಗೆ 10 ಕ್ಕೆ ಕಾರ್ಕಳ ತಾಲೂಕಿನ ಬಜಗೋಳಿ […]