ಬಸ್ಸು-ಬೈಕ್ ಮುಖಾಮುಖಿ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಹೆಬ್ರಿ : ಹೆಬ್ರಿ ಬಳಿಯ ಮುದ್ರಾಡಿಯ ಸುಬ್ಬಣ್ಣ ಕಟ್ಟೆ ಕ್ರಾಸ್ ನಲ್ಲಿ ಖಾಸಗಿ ಬಸ್ ಮತ್ತು ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ‌‌ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಏ. 21 ರಂದು‌ ಸಂಭವಿಸಿದೆ. ಬೈಕ್ ಸವಾರ ಮುದ್ರಾಡಿಯ ರಕ್ಷಣ್ ಆಚಾರ್ಯ (21) ಮೃತಪಟ್ಟವರು. ಮುದ್ರಾಡಿಯ ನಿತ್ಯಾನಂದ ಆಚಾರ್ಯ ಅವರ ಪುತ್ರ. ರಕ್ಷಣ್‌ ಆಚಾರ್ಯ ಅವರು ಮರದ ಕೆಲಸ ನಿರ್ವಹಿಸುತ್ತಿದ್ದರು. ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.      

ಈಸ್ಟರ್ ಹಬ್ಬದಂದೇ ಲಂಕಾದ 3 ಚರ್ಚ್‌, ಹೋಟೆಲ್‌ ಸೇರಿ 8 ಕಡೆ ಸರಣಿ ಸ್ಫೋಟ: ಸಾವಿನ ಸಂಖ್ಯೆ 185ಕ್ಕೆ ಏರಿಕೆ

ನವದೆಹಲಿ: ಶ್ರೀಲಂಕಾ ಕೊಲಂಬೋದಲ್ಲಿ 8ನೇ ಬಾಂಬ್ ಸ್ಫೋಟವಾಗಿದೆ. ಇಲ್ಲಿಯವರೆಗೂ ಸುಮಾರು 8 ಕಡೆ ಬಾಂಬ್ ಸ್ಫೋಟ ಸಂಭವಿಸಿದ್ದು, 185ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. ಹಾಗಾಗಿ ಶ್ರೀಲಂಕಾ ಸರ್ಕಾರ ದೇಶಾದ್ಯಂತ ಕರ್ಫ್ಯೂ ಜಾರಿಗೊಳಿಸಿ ಆದೇಶ ಹೊರಡಿಸಿದೆ.  ಸಂಜೆ 6 ರಿಂದ ನಾಳೆ ಬೆಳಗ್ಗೆ 6 ಗಂಟೆವರೆಗೆ ಕರ್ಫ್ಯೂ ಜಾರಿಯಲ್ಲಿದ್ದು, ಸದ್ಯ ಆತಂಕದ ವಾತಾವರಣ ನಿರ್ಮಾಣವಾಗಿದೆ. ಇಂದು ಭಾನುವಾರ ಬೆಳಗ್ಗೆಯಿಂದಲೇ ಶ್ರೀಲಂಕಾ ರಾಜಧಾನಿ ಕೊಲಂಬೋದಲ್ಲಿ ಸರಣಿ ಬಾಂಬ್ ಸ್ಫೋಟ ನಡೆಯುತ್ತಿದೆ. ಈಸ್ಟರ್ ದಿನ ಪ್ರಾರ್ಥನೆ ನಡೆಯುತ್ತಿರುವಾಗ ಚರ್ಚ್‌ನಲ್ಲಿ ಮೊದಲು ಬಾಂಬ್ ಸ್ಫೋಟವಾಯಿತು. ಬಳಿಕ ಹೋಟೆಲ್‌ನಲ್ಲಿ ಸ್ಫೋಟ […]

‘ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ, ಪಾಂಡ್ಯ, ರಾಹುಲ್‌ಗೆ ₹ 20 ಲಕ್ಷ ದಂಡ

ನವದೆಹಲಿ: ಟಿವಿ ರಿಯಾಲಿಟಿ ಶೋನಲ್ಲಿ ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಭಾರತ ಕ್ರಿಕೆಟ್‌ ತಂಡದ ಆಟಗಾರರಾದ ಹಾರ್ದಿಕ್‌ ಪಾಂಡ್ಯ ಹಾಗೂ ಕೆ.ಎಲ್‌.ರಾಹುಲ್‌ ಅವರಿಗೆ ಬಿಸಿಸಿಐ ತಲಾ ₹ 20 ಲಕ್ಷ ದಂಡ ವಿಧಿಸಿದೆ. ಒಂಬುಡ್ಸ್‌ಮನ್ ಡಿ.ಕೆ.ಜೈನ್‌ ಅವರು ಈ ಆದೇಶ ಹೊರಡಿಸಿದ್ದು, ₹ 10 ಲಕ್ಷವನ್ನು ಅರೆ ಸೇನಾಪಡೆಯ ಹುತಾತ್ಮ ಯೋಧರ ಪತ್ನಿಯರ ಕಲ್ಯಾಣಕ್ಕಾಗಿ ನೀಡಬೇಕು. ಉಳಿದ ₹ 10 ಲಕ್ಷವನ್ನು ಅಂಧರ ಕ್ರಿಕೆಟ್‌ ಸಂಸ್ಥೆಯ ನಿಧಿಗೆ ನೀಡಬೇಕು ಎಂದು ಸೂಚಿಸಿದ್ದು,  ನಾಲ್ಕು ವಾರದೊಳಗಾಗಿ ದಂಡ […]

ಎ.22: ಪುತ್ತಿಗೆ ಮಠದ ಶಿಷ್ಯಸ್ವೀಕಾರ ಸಮಾರಂಭ   

ಉಡುಪಿ: ಜಗದ್ಗುರು ಶ್ರೀ ಮನ್ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಉಡುಪಿ ಶ್ರೀ ಪುತ್ತಿಗೆ ಮಠದ ಶ್ರೀ ಮದುಪೇಂದ್ರ ತೀರ್ಥ ಶ್ರೀ ಪಾದರ 750 ವರ್ಷಗಳ ಗುರುಪರಂಪರೆಯಲ್ಲಿ ಮೂವತ್ತನೇ ಯತಿಗಳಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ತಮ್ಮ ಹನ್ನೆರಡನೇ ವಯಸ್ಸಿನಲ್ಲಿ ಬಾಲಸನ್ಯಾಸವನ್ನು ಸ್ವೀಕರಿಸಿ ವಿಶ್ವದಾದ್ಯಂತ ಧರ್ಮಪ್ರಸಾರ ಮಾಡುವ ಮೂಲಕ ಏ. 22ರಂದು 45 ಸಂವತ್ಸರಗಳನ್ನು ಪೂರೈಸಲಿದ್ದಾರೆ. ಈ ಶುಭ ಸಂದರ್ಭದಲ್ಲಿ ಶ್ರೀಗಳು ಶ್ರೀ ಪ್ರಶಾಂತ ಆಚಾರ್ಯ ಎಂಬ ವಟುವನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಸ್ವೀಕರಿಸಲು ಸಂಕಲ್ಪಿಸಿದ್ದು, ಈ ಸಂಬಂಧ ಹಿರಿಯಡ್ಕ […]