ಶೋಭಾ ಕರಂದ್ಲಾಜೆ ಪರ ಕುಂದಾಪುರದಲ್ಲಿ ಕೋಟ, ಹಾಲಾಡಿ ರೋಡ್ ಶೋ

ಕುಂದಾಪುರ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪರ ಮತಯಾಚನೆ ನಡೆಸುವ ಸಲುವಾಗಿ ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ರೋಡ್ ಶೋ ಗೆ ಚಾಲನೆ ನೀಡಿದರು. ಕುಂದಾಪುರದ ಹೃದಯಭಾಗವಾದ ಶಾಸ್ತ್ರೀ ವೃತ್ತದಿಂದ ಆರಂಭಗೊಂಡ ಪಾದಯಾತ್ರೆ ಹೊಸ ಬಸ್ ನಿಲ್ದಾಣದ ಮಾರ್ಗವಾಗಿ ಮತ್ತೆ ಶಾಸ್ತ್ರೀ ವೃತ್ತದಲ್ಲಿ ಸಮಾಪನಗೊಂಡಿತು. ಪಾದಯಾತ್ರೆಗೆ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಪೋದಿ ಪರ ಘೋಷಣೆಗಳನ್ನು ಕೂಗಿ ಜೈಕಾರ ಹಾಕಿದರು. […]

ತನ್ನ ವೈಫಲ್ಯದಿಂದಾಗಿ ಈಗ ಮೋದಿಗೆ ಮತ ಹಾಕಿ ಅಂತಿದ್ದಾರೆ ಶೋಭಾ ಕರಂದ್ಲಾಜೆ :ಗೋಪಾಲ ಪೂಜಾರಿ

ಕುಂದಾಪುರ: ಕರಾವಳಿಯಲ್ಲಿ ಹಿಂದುಳಿದ ವರ್ಗದ ಮತದಾರರನ್ನು ಓಲೈಸುತ್ತಿರುವ ಬಿಜೆಪಿ ಪಕ್ಷ ಹಿಂದುಳಿದ ವರ್ಗದವರನ್ನು ಅಭ್ಯರ್ಥಿಯನ್ನಾಗಿಸಿಲ್ಲ. ಓಟಿಗಾಗಿ ಮಾತ್ರ ಹಿಂದುಳಿದ ವರ್ಗದವರನ್ನು ದಾಳವಾಗಿಸಿಕೊಂಡು ಇಡೀ ಸಮುದಾಯಕ್ಕೆ ಬಿಜೆಪಿ ಅನ್ಯಾಯ ಎಸಗುತ್ತಿದೆ. ಭಾವನಾತ್ಮಕ ವಿಚಾರವನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿರುವ ಬಿಜೆಪಿ ಅಭ್ಯರ್ಥಿಗಳು ಸ್ವಂತ ವರ್ಚಸ್ಸಿಲ್ಲದೇ ಹೆಣಗಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಆರೋಪಿಸಿದರು. ಅವರು ಸೋಮವಾರ ಕುಂದಾಪುರದ ಖಾಸಗಿ ಹೋಟೇಲ್‌ನಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು. ನರೇಂದ್ರ ಮೋದಿ ವಾರಣಾಸಿಯಲ್ಲಿ ಸ್ವರ್ಧೆ ಮಾಡುತ್ತಿದ್ದಾರೆ. ಆದರೆ ಉಡುಪಿ ಚಿಕ್ಕಮಂಗಳೂರು ಕ್ಷೇತ್ರದ […]

ಬೈಕ್ ಗೆ ಡಿಕ್ಕಿಯಾದ ಟೆಂಪೋ: ಕುಂದಾಪುರದ ಹೆಡ್ ಕಾನ್‌ಸ್ಟೇಬಲ್ ದಾರುಣ ಸಾವು

ಕುಂದಾಪುರ: ಭಾನುವಾರ ರಾತ್ರಿ ನಡೆದ ಅಪಘಾತವೊಂದರಲ್ಲಿ ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕುಂದಾಪುರ ಪೊಲೀಸ್ ಠಾಣೆಯ ಹೆಡ್‌ಕಾನ್ಸ್‌ಟೇಬಲ್ ಚಂದ್ರಶೇಖರ್(೪೨) ಸೋiವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.  ಕರ್ತವ್ಯದ ನಿಮಿತ್ತ ಬ್ರಹ್ಮಾವರದಿಂದ ಕುಂದಾಪುರದತ್ತ ಚಂದ್ರಶೇಖರ್ ಬೈಕ್‌ನಲ್ಲಿ ಸಾಗುತ್ತಿದ್ದ ವೇಳೆಯಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯ ಮಾಬುಕಳ ಸೇತುವೆ ಬಳಿ ಹಿಂಬದಿಯಿಂದ ಟೆಂಪೋ ಡಿಕ್ಕಿ ಹೊಡೆದಿತ್ತು. ಓವರ್‌ಟೇಕ್ ಭರದಲ್ಲಿ ಟೆಂಪೋ ಚಾಲಕ ಚಂದ್ರಶೇಖರ್ ಚಲಾಯಿಸುತ್ತಿದ್ದ ಬೈಕಿಗೆ ಗುದ್ದಿ ಪರಾರಿಯಾಗಿದ್ದನು. ಅಪಘಾತದಿಂದ ಚಂದ್ರಶೇಖರ್ ರಸ್ತೆಗೆ ಬಿದ್ದು ಕುತ್ತಿಗೆ ಹಾಗೂ ತಲೆಗೆ ಗಂಭೀರ […]

ಈ ಬಾರಿ ಅಂಧ ಮತದಾರರಿಗೆ ಮತದಾನ ಸುಲಭ

ಚುನಾವಣೆಯಲ್ಲಿ ಎಲ್ಲರನ್ನೂ ಒಳಗೊಳ್ಳುವ ಚುನಾವಣಾ ಆಯೋಗದ ಆಶಯದಂತೆ, ಈ ಬಾರಿ ಅಂಧ ಮತದಾರರಿಗೆ ಅನುಕೂಲವಾಗುವಂತೆ ಬ್ರೈಲ್ ಮತಪತ್ರವನ್ನು ಸಿದ್ದಪಡಿಸಲಾಗಿದ್ದು, ಅಂಧ ಮತದಾರರು ಸ್ವತ: ತಾವೇ ಕಣದಲ್ಲಿರುವ ಅಭ್ಯರ್ಥಿಗಳನ್ನು ಗುರುತಿಸಿ ಮತ ಚಲಾಯಿಸಬಹುದಾಗಿದೆ. ಅಂಧ ಮತದಾರರು ಮತ ಚಲಾಯಿಸಲು ಸಹಾಯಕರೊಬ್ಬರನ್ನು ಕರೆತರುವ ಅವಕಾಶ ಇದ್ದರೂ ಸಹ , ಸಹಾಯಕರ ಸೂಚಿಸಿದ ಕ್ರಮ ಸಂಖ್ಯೆಯ ಬಟನ್ ಒತ್ತಿ, ತಮ್ಮ ಮತ ಚಲಾಯಿಸುತ್ತಿದ್ದರು.  ಆದರೆ  ತಮ್ಮ ಮತ ತಾವು ಇಚ್ಚಿಸಿದ ಪಕ್ಷ ಅಥವಾ ಅಭ್ಯರ್ಥಿಗೆ ಬಿದ್ದಿರುವ ಕುರಿತು ಸ್ವಯಂ ದೃಢೀಕರಿಸಿಕೊಳ್ಳಲು ಸಾಧ್ಯವಿರಲಿಲ್ಲ, […]

ರೈಲ್ವೇ ಪ್ಲಾಟ್‍ಫಾರಂನಲ್ಲಿ ಟಿಕ್ ಟಾಕ್ ಶೋ: ಇಬ್ಬರ ಬಂಧನ

ಉಡುಪಿ: ಉಡುಪಿ ರೈಲ್ವೆ ನಿಲ್ದಾಣದ ಫ್ಲಾಟ್ ಫಾರಂನಲ್ಲಿ ರೈಲು ಬರುವ ಸಂದರ್ಭದಲ್ಲಿ  ಫ್ಲಾಟ್ ಫಾರಂ ಮೇಲೆ ನೃತ್ಯ ಮಾಡುತ್ತಾ ಟಿಕ್ ಟಾಕ್ ವೀಡಿಯೋ ಮಾಡುತ್ತಿದ್ದ ಇಬ್ಬರನ್ನು ಎಫ್ರಿಲ್ 14 ರಂದು ರೈಲ್ವೆ ಪೊಲೀಸರು ಬಂದಿಸಿದ್ದಾರೆ. ಬಂಧಿತರನ್ನು ಸೋಮವಾರ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು, ಆರೋಪಿಗಳಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಿ ತೀರ್ಪು ನೀಡಲಾಯಿತು.