ಪರಿಸರ ವಿರೋಧಿ ಆಗುಂಬೆ-ಮೇಗರವಳ್ಳಿ ರಸ್ತೆ ಕಾಮಗಾರಿ ವಿರೋಧಿ ಅಭಿಯಾನ: ಮುಗ್ದ ಮರಗಳ ಜೀವ ಉಳಿಸೋಣ ಬನ್ನಿ :ಇದು ಉಡುಪಿ xpress ಪರಿಸರ ಅಭಿಯಾನ
ಆಗುಂಬೆಯ ಪ್ರೇಮ ಸಂಜೆಯ ಅಂತೆಲ್ಲಾ ನಾವು ಆಗುಂಬೆಯ ಸೂರ್ಯಾಸ್ತ ಸವಿಯುತ್ತಿದ್ದರೆ, ಆಗುಂಬೆಯ ಮಳೆಯಲ್ಲಿ ಪ್ರತೀ ಮುಂಗಾರಿನಲ್ಲೂ ನೆನೆದು ಖುಷಿಪಡುತ್ತಿದ್ದರೆ, ನಮಗೆ ಜೀವ ರಕ್ಷೆಯಾದ ಉಸಿರಾಧ ಆಗುಂಬೆಯ ಮಳೆಕಾಡಿನ ಸುಮಾರು 256 ಮರಗಳನ್ನು ಕಡಿದು ಅಗಲೀಕರಣ ಮಾಡಲು ಹೊರಟಿದೆ ಸರಕಾರ. ಏನಿದು ಯೋಜನೆ? ಮೇಗರವಳ್ಳಿ ವಲಯದ ಪರಿಮಿತಿಯಲ್ಲಿನ 2ನೇ ಕಿಲೋಮೀಟರ್ನಿಂದ. 15.98 ಕಿಲೋಮೀಟರ್ವರೆಗಿನ ತೀರ್ಥಹಳ್ಳಿಯಿಂದ ಮೇಗರವಳ್ಳಿವರೆಗಿನ ರಸ್ತೆಯ ದ್ವಿಪಥೀಕರಣಕ್ಕಾಗಿ 256 ಮರಗಳನ್ನ ಕಡಿದು ತೆರವುಗೊಳಿಸುವ ಪರಿಸರ ವಿರೋಧಿ ಯೋಜನೆ ಇದು.ಈ ಯೋಜನೆಯಿಂದ ಆಗುಂಬೆ-ಮೇಗರವಳ್ಳಿ-ತೀರ್ಥಹಳ್ಳಿ ಪ್ರದೇಶದಲ್ಲಿರುವ ಅಮೂಲ್ಯ ಮರಗಳೇ ನಾಶವಾಗಲಿದೆ.ಇಷ್ಟು […]