ಥೈಲ್ಯಾಂಡ್ ನಲ್ಲಿ ಹೃದಯಾಘಾತ: ಕುಂದಾಪುರದ ಯುವಕ ಸಾವು
ಕುಂದಾಪುರ: ಕೋಟೇಶ್ವರ ಸಮೀಪದ ಗೋಪಾಡಿ ಗ್ರಾಮ ಪಂಚಾಯಿತಿ ನಿವಾಸಿ ಕಿರಣ್ ಬೆರೆಟ್ಟೋ (35) ಸೋಮವಾರ ಹೃದಯಾಘಾದಿಂದ ಥೈಲ್ಯಾಂಡ್ ನಲ್ಲಿ ಮೃತಪಟ್ಟಿದ್ದಾರೆ. ನಿವೃತ್ತ ಶಿಕ್ಷಕ ಜೇಮ್ಸ್ ಬೆರೆಟ್ಟೋ ಪುತ್ರ ಕಿರಣ್ ಥೈಲ್ಯಾಂಡ್ ನಲ್ಲಿ ಟೂಲ್ ಡಿಸೈನ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ಕಾರಿನಲ್ಲಿ ಕರ್ತವ್ಯಕ್ಕೆ ತೆರಳುತ್ತಿದ್ದಾಗ ಹೃದಯಾಘಾತವಾಗಿದೆ ಎಂದು ತಿಳಿದುಬಂದಿದೆ. ಕಿರಣ್ ಇತ್ತೀಚೆಗೆ ವಿವಾಹವಾಗಿದ್ದು, ಕಳೆದ ವರ್ಷ ಡಿಸೆಂಬರ್ನಲ್ಲಿ ನಡೆದ ತಮ್ಮ ಹುಟ್ಟ ಹಬ್ಬಕ್ಕೆ ಊರಿಗೆ ಬಂದು ಹಿಂದುರಿಗಿದ್ದರು. ಮೃತ ಕಿರಣ್ ಅಂತ್ಯಕ್ರಿಯೆ ಬುಧವಾರ ನಡೆಯಲಿದೆ.
ಎಸ್ಎಸ್ಎಲ್ಸಿ ಪರೀಕ್ಷೆ: ನಿಗಮದ ಬಸ್ಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ
ಉಡುಪಿ: ಎಸ್ಎಸ್ಎಲ್ಸಿ ಪರೀಕ್ಷೆಗಳು ಮಾರ್ಚ್ 21 ರಿಂದ ಪ್ರಾರಂಭವಾಗುತ್ತಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ, ಕ.ರಾ.ರ.ಸಾ. ನಿಗಮವು, ಎಸ್ಎಸ್ಎಲ್ಸಿ ಪರೀಕ್ಷೆ ನಡೆಯುವ ದಿನಗಳಲ್ಲಿ ಅಂದರೆ ಮಾರ್ಚ್ 21 ರಿಂದ ಏಪ್ರಿಲ್ 4 ರವರೆಗೆ ಪರೀಕ್ಷೆಗೆ ಹಾಜರಾಗುವ, ನಿಗಮದ ವತಿಯಿಂದ ವಿತರಿಸಿರುವ ವಿದ್ಯಾರ್ಥಿ ರಿಯಾಯಿತಿ ಬಸ್ಪಾಸ್ ಹೊಂದಿರುವ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಪರೀಕ್ಷಾ ಅವಧಿಯಲ್ಲಿ ತಮ್ಮ ವಾಸಸ್ಥಳದಿಂದ ಪರೀಕ್ಷಾ ಕೇಂದ್ರದವರೆಗೆ ಮತ್ತು ವಾಸಸ್ಥಳಕ್ಕೆ ಹಿಂದಿರುಗುವಾಗ ಬಸ್ ಪಾಸ್ ಹಾಗು ಪರೀಕ್ಷಾ ಪ್ರವೇಶ ಪತ್ರವನ್ನು ತೋರಿಸಿ ನಿಗಮದ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ […]
ಮೋದಿ ಪ್ರಧಾನಿಯಾಗುತ್ತಾರೆ ಎನ್ನುವ ಅತೀ ವಿಶ್ವಾಸವೂ ಒಳ್ಳೆಯದಲ್ಲ: ಕುಂದಾಪುರದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿಕೆ
ಕುಂದಾಪುರ: ಮೋದಿ ಮತ್ತೆ ಪ್ರಧಾನಿಯಾಗುತ್ತಾರೆಂಬ ವಿಶ್ವಾಸ ಎಲ್ಲರಲ್ಲೂ ಇದೆ. ಆದರೆ ಅತಿಯಾದ ಆತ್ಮ ವಿಶ್ವಾಸ ಒಳ್ಳೇದಲ್ಲ. ಹಿಂದೆ ಅತಿಯಾದ ಆತ್ಮವಿಶ್ವಾಸದಿಂದಾಗಿ ವಾಜಪೇಯಿಯವರು ಮತ್ತೆ ಪ್ರಧಾನಿಯಾಗುತ್ತಾರೆ ಎಂದು ನಾವು ನಿರೀಕ್ಷಿಸಿ ಸುಮ್ಮನಿದ್ದೆವು. ಆದರೆ ವಾಜಪೇಯಿಯವರ ಸಾಧನೆಗಳನ್ನು ಜನರಿಗೆ ಸರಿಯಾಗಿ ತಿಳಿಸಲು ಎಡವಿದೆವು. ಆದರೆ ಈಗ ಹಾಗಾಗಬಾರದು. ನಾವೆಲ್ಲರೂ ಸೇರಿ ಮೋದಿಯವರ ಜನಪರ ಕಾರ್ಯಕ್ರಮಗಳನ್ನು ಪ್ರತೀ ಹಳ್ಳಿಗೂ ತಲುಪಿಸುವ ಕೆಲಸ ಮಾಡಬೇಕು ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. ಕಾಂಗ್ರೆಸ್ ಅರವತ್ತು ವರ್ಷ ಮಾಡದ ಸಾಧನೆಯನ್ನು ನರೇಂದ್ರ ಮೋದಿಯವರು ಐದೇ ವರ್ಷದಲ್ಲಿ […]
ಮಾ.21: ನಂದಳಿಕೆ ಸಿರಿ ಜಾತ್ರೆ, ಆಯನೋತ್ಸವ
ಬೆಳ್ಮಣ್: ತುಳುನಾಡಿ ನಾದ್ಯಂತ ನೆಲೆಗೊಂಡಿರುವ ಸಕಲ ಸಿರಿ ಕ್ಷೇತ್ರಗಳಿಗೆ ಪುರಾತನ ಮತ್ತು ಮಿಗಿಲೆನಿ ಸಿರುವ ಸತ್ಯದ ಸಿರಿಗಳ ಪುಣ್ಯಕ್ಷೇತ್ರ ಕಾರ್ಕಳ ತಾಲೂಕಿನ ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಳದ ಸನ್ನಿಧಾನದಲ್ಲಿ ಸಿರಿ ಜಾತ್ರೆ ಮಾ. 21ರಂದು ಸಡಗರದಿಂದ ನಡೆಯಲಿದೆ. ತುಳುನಾಡು, ಮಲೆನಾಡು, ಕರ್ನಾಟಕದಾದ್ಯಂತ ಮಹಾರಾಷ್ಟ್ರದಂತಹ ಹೊರನಾಡುಗಳಿಂದ ವಿದೇಶಗಳಿಂದಲೂ ಲಕ್ಷಾಂತರ ಭಕ್ತರು ಕ್ಷೇತ್ರಕ್ಕೆ ಸಾಗರೋಪಾದಿಯಲ್ಲಿ ಹರಿದು ಬರುತ್ತಿದ್ದು, ಭಕ್ತರ ಸೇವೆಗಾಗಿ ಸಮಗ್ರ ನಂದಳಿಕೆ ತಯಾರಾಗಿದೆ. ಮಾ. 21ರಂದು ಬೆಳಗ್ಗೆ 8ರಿಂದ ಶ್ರೀ ಉರಿಬ್ರಹ್ಮ ರಜತ ಪಾದುಕೆ, ಶ್ರೀ ಅಬ್ಬಗ-ದಾರಗರ ಚೆನ್ನೆಮಣಿಗಳ […]
ಅಪರೂಪದ ಖಾಯಿಲೆಗೆ ತುತ್ತಾಗಿದ್ದಾರೆ ಈ ಭರವಸೆಯ ಕವಿ: ಭಾವ ಜೀವಿಗೆ ಬೇಕಿದೆ ನಿಮ್ಮ ನೆರವು:
ಆಸ್ಟಿಯೋ ಜೆನಿಸಿಸ್ ಇಂಪರ್ಪೆಕ್ಟಾ ಎಂಬ ಅತಿ ಅಪರೂಪದ ಖಾಯಿಲೆಯಿಂದ ಬಳಲುತ್ತಿರುವ ರಮೇಶ ಹೆಗಡೆ ಜೀವನೋತ್ಸಾಹದ ಚಿಲುಮೆ. ಬಾಲ್ಯದಿಂದ ಇದುವರೆಗೂ (35- 40 ವಯಸ್ಸು)ಪುಟ್ಟ ಕೋಣೆಯೇ ಅವರ ಪ್ರಪಂಚ. ಎದ್ದು ಓಡಾಡಲೂ ಆಗದ ಸ್ಥಿತಿ. ಪ್ರತಿಯೊಂದಕ್ಕೂ ಬೇರೆಯವರನ್ನೇ ಅವಲಂಭಿಸಬೇಕಾದ ಜೀವನ ಅವರದು. ಆದರೆ ಇದಕ್ಕೆಲ್ಲ ಕುಗ್ಗದೆ ಓದು, ಬರವಣಿಗೆಯಲ್ಲೆ ಬದುಕು ಕಾಣುತ್ತಿದ್ದಾರೆ. ಇದುವರೆಗೆ ಆರು ಕವನ ಸಂಕಲನ ಪ್ರಕಟವಾಗಿದೆ. ಜಯಂತ್ ಕಾಯ್ಕಿಣಿಯವರಂತಹ ಹಿರಿಯರು ಶಿರಸಿಗೆ ಬಂದರೆ ರಮೇಶ ಹೆಗಡೆಯವರ ಭೇಟಿ ಮಾಡಿ ಕುಶಲ ವಿಚಾರಿಸಲು ಮರೆಯುವುದಿಲ್ಲ. ಇವರ ಮತ್ತೊಂದು […]