ಉಡುಪಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಫಿ ಯೋಜನೆ ಬಿ ಸಿ ಟ್ರಸ್ಟ್ ರಿ. ಉಡುಪಿ, ಜನಜಾಗ್ರತಿ ವೇದಿಕೆ ಟ್ರಸ್ಟ್ ಉಡುಪಿ ತಾಲೂಕು ಮತ್ತು ಡಾ. ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ 2000 ನೇ ಮದ್ಯವರ್ಜನ ಶಿಬಿರದ 6ನೇ ದಿನವಾದ ಇಂದು ಅಖಿಲ ಕರ್ನಾಟಕ ಜನಜಾಗ್ರತಿ ವೇದಿಕೆಯ ರಾಜ್ಯ ಕಾರ್ಯದರ್ಶಿ ಶ್ರೀ ವಿವೇಕ್ ವಿನ್ಸೆoಟ್ ಪಾಯಸ್ ರವರು ಭಾಗವಹಿಸಿ ಮದ್ಯಪಾನ ದಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಉದಾಹರಣೆ ಮೂಲಕ ವಿವರಿಸುತ್ತ, ಮದ್ಯಪಾನವು ಮಾನವನ ದೇಹವನ್ನು ಮಾನಸಿಕ ಮತ್ತು ಇತರ ಗುಣಪಡಿಸಲಾಗದ ಕಾಯಿಲೆ ಗಳಿಂದ ಜರ್ಜರಿತಗೊಳಿಸಿ ಆತನ ಕುಟುಂಬವನ್ನು ಸರ್ವನಾಶ ಮಾಡುತ್ತದೆ ಎಂದು ತಿಳಿಸಿದರು.

ಮದ್ಯದಾಸರಾಗಿರುವ ಜನರನ್ನು ಮನಪರಿವರ್ತನೆ ಮಾಡಿ ಹಲವಾರು ಕುಟುಂಬಗಳನ್ನು ಸಮಾಜದಲ್ಲಿ ಉತ್ತಮವಾಗಿ ಗೌರವಯುತವಾಗಿ ಬಾಳಿ ಬದುಕಲು ಧರ್ಮಸ್ಥಳ ಯೋಜನೆಯ ಇಂತಹ ಶಿಬಿರಗಳು ಸಹಕಾರಿಯಾಗಿವೆ ಎಂದು ತಿಳಿಸಿದರು.
ಶಿಬಿರದಲ್ಲಿ ಸಹಕರಿಸುತ್ತಿರುವ ಡಾ ಎ ವಿ ಬಾಳಿಗ ಸಂಸ್ಥೆ ಮತ್ತು ವ್ಯವಸ್ಥಾಪನ ಸಮಿತಿ ಮತ್ತು ಯೋಜನೆಯ ಕಾರ್ಯಕರ್ತರಿಗೆ ಜನಜಾಗ್ರತಿ ಸಮಿತಿಯ ಕಾರ್ಯವೈಖರಿ ಯನ್ನು ಶ್ಲಾಘಿಸಿದರು.

ನವೆಂಬರ್ 7 ರಂದು ಧರ್ಮಸ್ಥಳದಲ್ಲಿ ಜರಗುವ ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲಾ 13 ಶಿಬಿರಗಳ ಸಮಾರೋಪ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ವೇದಿಕೆಯಲ್ಲಿ ಉಪಸ್ಥಿತರಿರುವ ಗಣ್ಯರಿಗೆ ನೀಡಿ ಕಾರ್ಯಕ್ರದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಶಿಬಿರದ ಶಿಕ್ಷಾರ್ಥಿ ಗಳು ಮತ್ತು ಕಾರ್ಯಕರ್ತರೊಂದಿಗೆ ಫೋಟೋ ಕ್ಲಿಕ್ಕಿಸಿ ಕೊಂಡರು.

ಈ ಸಂದರ್ಭದಲ್ಲಿ ಜನಜಾಗ್ರತಿ ವೇದಿಕೆಯ ಉಡುಪಿ ತಾಲೂಕು ಅಧ್ಯಕ್ಷರಾದ ಸತ್ಯಾನಂದ ನಾಯಕ್ ಆತ್ರಾಡಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು, ಸಾಮಾಜಿಕ ಕಾರ್ಯಕರ್ತೆ ಶ್ರೀಮತಿ ಗೀತಾಂಜಲಿ ಸುವರ್ಣ, ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಶಂಕರ್ ಕುಲಾಲ್, ವೇದಿಕೆ ಸದಸ್ಯರಾದ ಹರೀಶ್ ಕೋಟ್ಯಾನ್, ಅಚ್ಯುತ್ ಪೂಜಾರಿ, ಸುಧಾಕರ್ ಕರ್ಕೇರ, ಕೃಷ್ಣ ಶೆಟ್ಟಿ, ಪ್ರಶಾಂತ್ ಸಾಲ್ಯಾನ್, ಉದಯ ಕುಮಾರ್, ಅಶೋಕ್ ಹೇರೂರು, ಲಕ್ಷ್ಮಿನಾರಾಯಣ್ ಪ್ರಭು, ವಲಯ ಒಕ್ಕೂಟ ಅಧ್ಯಕ್ಷರಾದ ಶ್ರೀಮತಿ ಶೀಲಾ ನಾಯಕ್, ಶಿಬಿರಾಧಿಕಾರಿ ಗಣೇಶ್ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.
ಆರಂಭದಲ್ಲಿ ಶ್ರೀಮತಿ ನೇತ್ರಾವತಿ ಯವರು ದೇವರ ಪ್ರಾರ್ಥನೆ ಮಾಡಿದರು. ವಲಯ ಮೇಲ್ವಿಚಾರಕರಾದ ಶ್ರೀಮತಿ ಎಲ್ಲರನ್ನೂ ಸ್ವಾಗತಿಸಿದರು. ವಲಯ ಮೇಲ್ವಿಚಾರಕರಾದ ಶ್ರೀ ದಿವಾಕರ್ ಆಚಾರ್ಯ ರವರು ಸರ್ವರಿಗೂ ಧನ್ಯವಾದವನ್ನಿತ್ತರು.
















