ಸಾಗರ: ಸಾಗರದ ಆವಿನಹಳ್ಳಿಯ ಗಣೇಶ್ ಹಾರ್ಡ್ವೇರ್ ಮತ್ತು ಜೈಗಣೇಶ್ ವುಡ್ವರ್ಕ್ ಮಾಲೀಕ, ಕುಶಲಕರ್ಮಿ ಕೃಷ್ಣಮೂರ್ತಿ ಆಚಾರ್ ಅವರು ತಯಾರಿಸಿರುವ ಈ ಪೆನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಪ್ರವೇಶಗಿಟ್ಟಿಸಿದೆ.
ಹತ್ತು ವರ್ಷಗಳ ಹಿಂದೆ ತಯಾರಿಸಿರುವ ಈ ಪೆನ್ನು 20 ಅಡಿ ಉದ್ದವಿದೆ.
ಈ ಲೇಖನಿ ಭಾರತದಲ್ಲೇ ದಾಖಲೆ ಬರೆದಿದೆ. ಅರ್ಥಾತ್, ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ತಯಾರಾದ ಈ 20 ಅಡಿ ಉದ್ದದ ಲೇಖನಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸ್ಥಾನ ಸಿಕ್ಕಿದೆ.
ನವದೆಹಲಿಯಲ್ಲಿ ಶನಿವಾರ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಇದನ್ನು ದಾಖಲಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಲೇಖನಿಯನ್ನು ಸಾಹಿತ್ಯ ಸಮ್ಮೇಳನ ಹಾಗೂ ಇತರ ಕಾರ್ಯಕ್ರಮಗಳಲ್ಲಿ ಪ್ರದರ್ಶನಕ್ಕೆ ಇಡಲಾಗುತ್ತಿತ್ತು.
ವಿಶ್ವಕರ್ಮಾ ಎನ್ನುವ ಹೆಸರಿನಲ್ಲಿ ಈ ಬೃಹತ್ ಪೆನ್ ಅನ್ನು ಕೃಷ್ಣಮೂರ್ತಿ ಆಚಾರ್ ಅವರು ಹೈಬ್ರೀಡ್ ಅಕೇಶಿಯಾ ಕಟ್ಟಿಗೆಯನ್ನು ಉಪಯೋಗಿಸಿ ಸುಮಾರು 15 ದಿನಗಳ ನಿರಂತರ ಶ್ರಮದಿಂದ ಸಿದ್ಧಪಡಿಸಿದ್ದಾರೆ. ಈ ವಿಶೇಷವಾದ ಲೇಖನಿಯನ್ನು ಗಿನ್ನೆಸ್ ಮತ್ತು ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ಗೆ ಕಳಿಸಲಾಗಿತ್ತು. ಇದೀಗ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಪೆನ್ಗೆ ಸ್ಥಾನ ಸಿಕ್ಕಿದೆ.