ಜುಲೈ 4 ರಿಂದ ತ್ರಿಶಾ ಕ್ಲಾಸಸ್ ನಲ್ಲಿ ದ್ವಿತೀಯ ಪಿಯುಸಿ ಕಾಮರ್ಸ್ ತರಗತಿಗಳು ಪ್ರಾರಂಭ

ಉಡುಪಿ: ಕೋರ್ಟ್ ಮುಂಭಾಗದ ಅನಂತ ಟವರ್ಸ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ತ್ರಿಶಾ ಸಂಸ್ಥೆ ಕಳೆದ 24 ವರ್ಷಗಳಿಂದ ಚಾರ್ಟರ್ಡ್ ಅಕೌಂಟೆನ್ಸಿ, ಕಂಪನಿ ಸೆಕ್ರೆಟರಿ, ಎಂ.ಬಿ.ಎ, ಪದವಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ನುರಿತ ಶಿಕ್ಷಕರಿಂದ ತರಬೇತಿ ನೀಡಿ, ಉತ್ತಮ ಫಲಿತಾಂಶ ದಾಖಲಿಸುತ್ತಾ ಹಂತಹಂತವಾಗಿ ಬೆಳೆದು ಗುಣಮಟ್ಟದ ಶಿಕ್ಷಣ ಸಂಸ್ಥೆಯಾಗಿ ರೂಪುಗೊಂಡಿದೆ.

ಜುಲೈ 4 ರಿಂದ ಸಾಯಂಕಾಲ 5 ಗಂಟೆಗೆ ದ್ವಿತೀಯ ಪಿಯುಸಿ ಕಾಮರ್ಸ್ ವಿದ್ಯಾರ್ಥಿಗಳಿಗೆ ತರಬೇತಿ ಪ್ರಾರಂಭವಾಗಲಿದೆ. ದ್ವಿತೀಯ ಪಿಯು ಪರೀಕ್ಷೆಗೆ ಸಂಬಂಧಿಸಿದ ಅಕೌಂಟೆನ್ಸಿ, ಬೇಸಿಕ್ ಮ್ಯಾತ್ಸ್ ಮತ್ತು ಸ್ಟ್ಯಾಟಿಸ್ಟಿಕ್ಸ್ ನ ವಿಷಯಗಳ ಕುರಿತಾಗಿ ಉಡುಪಿಯ ಪ್ರಸಿದ್ಧ ಪ್ರಾಧ್ಯಾಪಕ ವೃಂದದವರ ನೇತೃತ್ವದಲ್ಲಿತರಬೇತಿ ನಡೆಯಲಿದೆ.

ಇಲ್ಲಿ ಪ್ರತಿನಿತ್ಯ ಪಿಯುಸಿ ತರಗತಿಗಳೊಂದಿಗೆ ಪ್ರತ್ಯೇಕ ಪಠ್ಯಪುಸ್ತಕಗಳು, ಮಾದರಿ ಪರೀಕ್ಷಾ ಪತ್ರಿಕೆಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗುವುದು. ಉತ್ತಮ ಫಲಿತಾಂಶಕ್ಕಾಗಿ ವಿನೂತನ ಮಾದರಿಯೊಂದಿಗೆ ಜರಗಲಿರುವ ತರಗತಿಯನ್ನು ಪಡೆಯಲು ಇಚ್ಚಿಸುವ ವಿದ್ಯಾರ್ಥಿಗಳು ತ್ರಿಶಾ ಕ್ಲಾಸಸ್‌ನ್ನು ಸಂಪರ್ಕಿಸಬಹುದು.