ನವದೆಹಲಿ: ಫೇಮ್ ಇಂಡಿಯಾ ಯೋಜನೆಯ ಹಂತ-2 ಅಡಿಯಲ್ಲಿ ದೇಶಾದ್ಯಂತ 2,877 ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್‌ಗಳನ್ನು ಮಂಜೂರು ಮಾಡಲಾಗಿದೆ. ಸರ್ಕಾರವು 25 ರಾಜ್ಯ ಹಾಗೂ ಎಲ್ಲಾ ಕೇಂದ್ರಾಡಳಿತ ಪ್ರದೇಶಗಳ 68 ನಗರಗಳಲ್ಲಿ 2,877 ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್‌ಗಳನ್ನು ಮಂಜೂರು ಮಾಡಿದೆ. ಎಲೆಕ್ಟ್ರಿಕ್ ವಾಹನಗಳ ವೇಗದ ಅಳವಡಿಕೆ ಮತ್ತು ತಯಾರಿಕೆ(ಫೇಮ್) ಯೋಜನೆಯಡಿ ಇವುಗಳನ್ನು ಮಂಜೂರು ಮಾಡಲಾಗಿದೆ.
ಭಾರೀ ಕೈಗಾರಿಕೆಗಳ ರಾಜ್ಯ ಸಚಿವ ಕ್ರಿಶನ್ ಪಾಲ್ ಗುರ್ಜರ್ ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ಈ ವಿಷಯ ತಿಳಿಸಿದ್ದಾರೆ. ಫೇಮ್ ಇಂಡಿಯಾ ಯೋಜನೆಯಡಿ 9 ಎಕ್ಸ್‌ಪ್ರೆಸ್‌ವೇಗಳು ಮತ್ತು 16 ಹೆದ್ದಾರಿಗಳಲ್ಲಿ 1,576 ಚಾರ್ಜಿಂಗ್ ಸ್ಟೇಷನ್‌ಗಳನ್ನು ಸಹ ಮಂಜೂರು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಫೇಮ್ ಇಂಡಿಯಾ ಸ್ಕೀಮ್‌ನ ಹಂತ-1 ರ ಅಡಿಯಲ್ಲಿ, ಈ ವರ್ಷ ಜುಲೈ 1 ರಂದು 479 ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲಾಗಿದೆ. 2019 ರ ಏಪ್ರಿಲ್ 1 ರಿಂದ ಐದು ವರ್ಷಗಳ ಅವಧಿಗೆ ಫೇಮ್-ಇಂಡಿಯಾ ಯೋಜನೆಯ ಹಂತ-2 ರ ಅಡಿಯಲ್ಲಿ ಒಂದು ಸಾವಿರ ಕೋಟಿ ರೂಪಾಯಿಗಳನ್ನು ಚಾರ್ಜಿಂಗ್ ಮೂಲಸೌಕರ್ಯಗಳ ಅಭಿವೃದ್ಧಿಗೆ ವಿನಿಯೋಗಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.