11 ದಿನದಲ್ಲಿ ಬೆಂಗಳೂರಿನಲ್ಲಿ 178 ಡೆಂಘೀ ಪ್ರಕರಣ ದಾಖಲು

ಬೆಂಗಳೂರು: ಬೆಂಗಳೂರಿನಲ್ಲಿ ಮಳೆ ಆರಂಭವಾಗಿದ್ದು, ಈ ನಡುವೆ ಡೆಂಘೀ ಪ್ರಕರಣಗಳ ಸಂಖ್ಯೆ ಏರಿಕೆ ಕಂಡಿದೆ. ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆ ಜನರು ಈ ಬಗ್ಗೆ ಎಚ್ಚರಿಕೆವಹಿಸುವಂತೆ ಸೂಚಿಸಿದೆ. ನಿಂತ ನೀರಿನಲ್ಲಿ ಸೊಳ್ಳೆಗಳ ಸಂತಾನಾಭಿವೃದ್ಧಿ ಹೆಚ್ಚುವ ಹಿನ್ನೆಲೆಯಲ್ಲಿ ಮನೆ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು ಅವಶ್ಯಕವಾಗಿದೆ ಎಂದಿದ್ದಾರೆ.ಸಿಲಿಕಾನ್​ ಸಿಟಿಯಲ್ಲಿ ಡೆಂಘೀ ಪ್ರಕರಣಗಳ ಏರಿಕೆ ಕಂಡಿದ್ದು, ಕಳೆದ 11 ದಿನಗಳಲ್ಲಿ ಒಟ್ಟು 178 ಹೊಸ ಪ್ರಕರಣಗಳು ವರದಿಯಾಗಿದೆ.ಕರ್ನಾಟಕದಲ್ಲಿ 900 ಡೆಂಘೀ ಪ್ರಕರಣಗಳು ದೃಢ ಪಟ್ಟಿದೆ. ಬೆಂಗಳೂರಿನಲ್ಲಿ ಇದುವರೆಗೆ 919 ಪ್ರಕರಣಗಳು ವರದಿಯಾಗಿವೆ.

ಹೀಗಿದೆ ಅಂಕಿ – ಅಂಶ: ಆರೋಗ್ಯ ಇಲಾಖೆ ಮೂಲಗಳ ಪ್ರಕಾರ, ಬೃಹತ್​ ಬೆಂಗಳೂರು ಮಹಾನಗಗರ ಪಾಲಿಕೆಯಲ್ಲಿ ಮಿತಿಯಲ್ಲಿ ಒಟ್ಟಾರೆ 3,565 ವ್ಯಕ್ತಿಗಳಲ್ಲಿ ಡೆಂಘೀ ಸಂಬಂಧಿತ ಲಕ್ಷಣಗಳು ಅಭಿವೃದ್ಧಿಕೊಂಡಿದ್ದು, 1,009 ಜನರ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್​ ಆಸ್ಪತ್ರೆಯಲ್ಲಿ ವೈದ್ಯರಾದ ಡಾ ಶೀಲಾ ಮುರಳಿ ಚಕ್ರವರ್ತಿ ಈ ಕುರಿತು ಮಾತನಾಡಿದ್ದು, ನಿಂತ ನೀರಿನಲ್ಲಿ ಸೊಳ್ಳೆಗಳ ಸಂತಾನಾಭಿವೃದ್ಧಿ ಹೆಚ್ಚುತ್ತದೆ. ಈ ಹಿನ್ನಲೆ ಸುತ್ತಮುತ್ತಲಿನ ಪರಿಸರ ಶುದ್ಧತೆ ಕಾಪಾಡಿಕೊಳ್ಳುವುದು ಮುಖ್ಯವಾಗುತ್ತದೆ. ಬಹುತೇಕ ಡೆಂಘೀ ಪ್ರಕರಣಗಳು ಸಂಕೀರ್ಣವಾಗಿದೆ. ಆದರೆ, ಈ ಪ್ರಕರಣಗಳು ತಡೆಗಟ್ಟಬಹುದಾಗಿದ್ದು, ಚಿಕಿತ್ಸೆ ನೀಡಬಹುದಾಗಿದೆ ಎಂದಿದ್ದಾರೆ.ಕರ್ನಾಟಕದಲ್ಲಿ 900 ಡೆಂಘೀ ಪ್ರಕರಣಗಳು ದೃಢ ಪಟ್ಟಿದೆ. ಬೆಂಗಳೂರಿನಲ್ಲಿ ಇದುವರೆಗೆ 919 ಪ್ರಕರಣಗಳು ವರದಿಯಾಗಿದೆ. ಆದಾಗ್ಯೂ, ಡೆಂಘೀ ಸಂಬಂಧಿತ ಗಂಭೀರತೆ ವರದಿಯಾಗಿದೆ. 2022ರಲ್ಲಿ, ಬಿಬಿಎಂಪಿಯಲ್ಲಿ 585 ಡೆಂಗ್ಯೂ ಪ್ರಕರಣಗಳು ವರದಿಯಾಗಿದೆ ಎಂದು ವರದಿ ತಿಳಿಸಿತು.

ನಿಮ್ಮನ್ನು ನೀವು ಡೆಂಘೀ ಸೋಂಕಿನಿಂದ ರಕ್ಷಿಸಿಕೊಳ್ಳಲು ನಿಮ್ಮ ಪರಿಸರವನ್ನು ಶುದ್ದವಾಗಿಟ್ಟುಕೊಳ್ಳುವುದು ಅವಶ್ಯವಾಗಿದೆ. ಜೊತೆಗೆ ಸಣ್ಣ ಸಣ್ಣ ಕಂಟೈನರ್​ಗಳಲ್ಲಿ ನೀರು ಸಂಗ್ರಹಗೊಳ್ಳದಂತೆ ನೋಡಿಕೊಳ್ಳಿ. ಡೆಂಘೀ ರೋಗಕ್ಕೆ ಪ್ರಮುಖ ಕಾರಣ ಸೊಳ್ಳೆಗಳಾಗಿದ್ದು, ಈ ಬಗ್ಗೆ ಎಚ್ಚರವಹಿಸಬೇಕು. ಡೆಂಗ್ಯೂ ಸೋಂಕಿನ ಚಿಕಿತ್ಸೆಗಳು ಸರಳವಾಗಿದ್ದು, ಜನರು ಹೆಚ್ಚಿನ ದ್ರವದ ಆಹಾರವನ್ನು ಸೇವಿಸುವುದು ಅವಶ್ಯವಾಗಿದೆ. ಕೆಲವು ಜನರು ಅಗತ್ಯ ಬಿದ್ದಲ್ಲಿ ಆಸ್ಪತ್ರೆಗೆ ದಾಖಲಾಗಬೇಕಿದೆ. ಆದಾಗ್ಯೂ, ಹೆಚ್ಚಿನ ಜ್ವರ ಮತ್ತು ದೇಹದ ನೋವು ಮತ್ತಿತ್ತರ ಸಮಸ್ಯೆ ಎದುರಿಸುತ್ತಿದ್ದರೆ, ತಕ್ಷಣಕ್ಕೆ ವೈದ್ಯರನ್ನು ಭೇಟಿಯಾಗುವುದು ಅವಶ್ಯ.

ಡೆಂಗ್ಯೂಗೆ ಬೆಂಗಳೂರು ಕಾನ್ಸ್​​ಟೇಬಲ್​​ ಬಲಿ: ಡೆಂಘೀ ಜ್ವರದಿಂದಾಗಿ ಇತ್ತೀಚೆಗೆ ಬೆಂಗಳೂರು ನಗರ ಪೊಲೀಸ್ ಇಲಾಖೆಯ ಕಾನ್ಸ್‌ಟೇಬಲ್ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಬೆಂಗಳೂರು ಪೊಲೀಸ್ ಸಾಮಾಜಿಕ ಜಾಲತಾಣ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪವನ್ ಕುಮಾರ್ (30) ಎಂಬುವರು ಚಿಕಿತ್ಸೆ ಫಲಕಾರಿಯಾಗದೇ, ಕಳೆದೆರಡು ದಿನಗಳ ಹಿಂದೆ ಸಾವನ್ನಪ್ಪಿದ್ದರು.
ಮಳೆಗಾಲದಲ್ಲಿ ಹೆಚ್ಚುವ ಸೋಂಕು: ವಾಹಕದಿಂದ ಹರಡುವ ರೋಗಗಳು ಮಾನ್ಸೂನ್​ನಲ್ಲಿ ಹೆಚ್ಚು. ಮಳೆಗಾಲದಲ್ಲಿ ಮಲೇರಿಯಾ ಮತ್ತು ಡೆಂಘೀ ಪ್ರಕರಣಗಳು ಹೆಚ್ಚಾಗುತ್ತವೆ. ಇದು ಮೇ ಆರಂಭದಲ್ಲಿ ಶುರುವಾದ ಅಕಾಲಿಕ ಮಳೆಯ ಪರಿಣಾಮವಾಗಿ ಇದೀಗ ಸೊಳ್ಳೆಗಳ ಸೋಂಕು ಹೆಚ್ಚಾಗಿದೆ. ಡೆಂಘೀ ಹೊರತಾಗಿ ಚಿಕುನ್​ಗುನ್ಯಾ ಮತ್ತು ಕಾಂಜಂಕ್ಟಿವಿಟಿಸ್‌ನಂತಹ ಋತುಮಾನದ ಜ್ವರಗಳು ಹೆಚ್ಚುತ್ತದೆ.