ಮಂಗಳೂರು: ಫೆಬ್ರವರಿ 4 ರಂದು 16 ನೇ ಸ್ಟ್ಯಾನ್ ನೈಟ್ ಸಂಗೀತ ರಸಮಂಜರಿ ಕಾರ್ಯಕ್ರಮ

ಮಂಗಳೂರು: ಸಂತ ಲಾರೆನ್ಸರ ದೇವಾಲಯ ಮತ್ತು ಪುಣ್ಯಕ್ಷೇತ್ರ ಮತ್ತು ಅಲ್ಫ್ರೆಡ್ ಬೆನ್ನಿಸ್ ಕ್ರಿಯೇಶನ್ಸ್ ಮಂಗಳೂರು ಇವರ ಸಹಯೋಗದೊಂದಿಗೆ 16 ನೇ ಸ್ಟ್ಯಾನ್ ನೈಟ್ ಸಂಗೀತ ರಸಮಂಜರಿ ಫೆಬ್ರವರಿ 4 ರಂದು ಸಂಜೆ 4 ಗಂಟೆಗೆ ಬೋಂದೆಲ್ ಆಂಗ್ಲ ಮಾಧ್ಯಮ ಶಾಲಾ ವಠಾರದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಹೆಸರಾಂತ ಸಂಗೀತಗಾರರು, ನೃತ್ಯಗಾರರು, ಹಾಸ್ಯಗಾರರು ಪ್ರದರ್ಶನ ನೀಡಲಿರುವರು. ಬೋಂದೆಲ್ ದೇವಾಲಯದ ನವೀಕೃತ ಯೋಜನೆಗೆ ಸಹಾಯಾರ್ಥವಾಗಿ ಉಚಿತ ಪ್ರವೇಶದೊಂದಿಗೆ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.