ಅಂಬಲಪಾಡಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಸತತ 15ನೇ ವರ್ಷದ‌‌ ಪಾದಯಾತ್ರೆ

ಉಡುಪಿ: ಅಂಬಲಪಾಡಿ ಗ್ರಾಮ ಪಂಚಾಯತ್ ನ ಕ್ರಿಯಾಶೀಲ ಸದಸ್ಯ ಮತ್ತು ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಂಬಲಪಾಡಿ ಇದರ ಅಧ್ಯಕ್ಷ ಸುನಿಲ್ ಕುಮಾರ್ ಕಪ್ಪೆಟ್ಟು ಅವರ ನೇತೃತ್ವದಲ್ಲಿ ಸತತ 15ನೇ ವರ್ಷದ‌‌ ಪಾದಯಾತ್ರೆಯು ಅಂಬಲಪಾಡಿ ಶ್ರೀ ಲಕ್ಷ್ಮೀ ಜನಾರ್ಧನ ಮತ್ತು ಮಹಾಕಾಳಿ ಅಮ್ಮನವರ ಸನ್ನಿಧಿಯಿಂದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನದವರೆಗೆ, ಶುಕ್ರವಾರ ಮುಂಜಾನೆ 3 ಗಂಟೆಗೆ ವರುಣ ದೇವನ ಕೃಪೆಯೊಂದಿಗೆ ಶುಭಾರಂಭವಾಯಿತು.

ಈ ಪಾದಯಾತ್ರೆ ಹೊರಡುವ ಶುಭ ಸಂಧರ್ಭದಲ್ಲಿ ಊರಿನ ಹಿರಿಯರು, ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಂಬಲಪಾಡಿ ಇದರ ಕ್ರಿಯಾಶೀಲ ಹಿರಿಯ ಸದಸ್ಯ ಮತ್ತು ಊರಿನ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಹಕಾರ ನೀಡಿ ಉತ್ಸಾಹದಿಂದ ಪಾಲ್ಗೊಳ್ಳುವ ಮೀರ್ ಮೊಹಮ್ಮದ್ ಅಸ್ಲಾಂ ಮತ್ತು ಅಂಬಲಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸೋಮನಾಥ ಬಿ ಕೆ, ಪಂಚಾಯತ್ ಸದಸ್ಯ ರಾಜೇಶ್ ಸುವರ್ಣ, ಸ್ಥಳೀಯ ಸಮಾಜ ಸೇವಕ ಅಜಿತ್ ಕಪ್ಪೆಟ್ಟು ಉಪಸ್ಥಿತರಿದ್ದು ಪಾದಯಾತ್ರೆಗೆ ಶುಭ ಹಾರೈಸಿದರು‌.

ಪಾದಯಾತ್ರೆಯಲ್ಲಿ ಸುನಿಲ್ ಕುಮಾರ್ ಕಪ್ಪೆಟ್ಟು ಅವರೊಂದಿಗೆ ರಂಜಿತ್ ಆಚಾರ್ಯ ಕಪ್ಪೆಟ್ಟು, ಭರತ್ ಕುಮಾರ್, ಕಿರಣ್ ಕುಮಾರ್, ಶಂಕರ ಪೂಜಾರಿ, ರಚಿತ್, ನಿತಿನ್, ಸತೀಶ್, ಲೋಕೇಶ್ ಆಚಾರ್ಯ, ಸತೀಶ್ ಕುತ್ಪಾಡಿ, ವಿಶ್ವನಾಥ್ ಪಾಲ್ಗೊಂಡಿದ್ದರು.