ಉಡುಪಿ: ಹರಿಖಂಡಿಗೆ ಸಮೀಪದ ಕಾರ್ಣಿಕ ಕೇತ್ರ ದೊಂಡೇರಂಗಡಿ ಶ್ರೀ ರಾಮ ಮಂದಿರದಲ್ಲಿ 33 ನೇ ಪುನರ್ ಪ್ರತಿಷ್ಠಾ ವರ್ಧಂತಿ ಹಾಗೂ 128ನೇ ಭಜನಾ ಮಂಗಲೋತ್ಸವ ಶನಿವಾರ ಮುಂಜಾನೆ ಆರಂಭಗೊಂಡಿದ್ದು ಊರ ಪರಊರ ಸಂತ ಮಂಡಳಿಗಳಿಂದ ಅಹೋ ರಾತ್ರಿ ಏಕಾಹ ಭಜನೆ ನೆಡೆಸಿ, ರಾತ್ರಿ ರಂಗಪೂಜೆ, ದೀಪಾರಾಧನೆ ನಡೆಯಿತು.ಆದಿತ್ಯವಾರ 128ನೇ ಭಜನಾ ಮಂಗಲೋತ್ಸವ ಅಂಗವಾಗಿ ಶ್ರೀ ರಾಮ ದೇವರಿಗೆ ವಿಶೇಷ ಹೂವಿನ ಅಲಂಕಾರ, ನೂರಾರು ಭಕ್ತರಿಂದ ವಿವಿಧ ಬಗೆಯ ಹರಕೆ ರೂಪವಾಗಿ ಸಂತಾನ ಭಾಗ್ಯ, ವಿವಾಹ, ಗ್ರಹ ನಿರ್ಮಾಣ, ಕಷ್ಟ – ನಷ್ಟಗಳಿಂದ ದೇವರಿಗೆ ಹರಕೆ ಸಲ್ಲಿಸಿ, ಬಳಿಕ ನೂರಾರು ಭಕ್ತರಿಂದ ಸಾವಿರಾರು ಲಾಡುಗಳನ್ನು ಶ್ರೀರಾಮ ದೇವರಿಗೆ ಅರ್ಪಿಸಲಾಯಿತು.
ಮಧ್ಯಾಹ್ನ ಮಹಾ ಪೂಜೆ ಬಳಿಕ ಭೋಜನ ಸಮಯದಲ್ಲಿ 5 ಸಾವಿರಕ್ಕೂ ಹೆಚ್ಚಿನ ಭಕ್ತರಿಗೆ ಪ್ರಸಾದ ರೂಪದಲ್ಲಿ ಲಾಡು ವಿತರಣೆ ಮಾಡಲಾಯಿತು. ದೇವಳದ ಪ್ರಧಾನ ಅರ್ಚಕರಾದ ಕಾಶೀನಾಥ್ ಭಟ್ ಕಲ್ಯಾಣಪುರ ಧಾರ್ಮಿಕ ಪೂಜಾ ವಿಧಾನಗಳನ್ನು ನೆಡೆಸಿಕೊಟ್ಟರು, ರಾಮ ಮಂದಿರದ ಅಧ್ಯಕ್ಷರಾದ ಜಯರಾಮ ನಾಯಕ್, ಮಹೇಶ ಭಟ್, ರಾಘವೇಂದ್ರ ಕಿಣೆ, ಗಣೇಶ ಶೆಣೈ, ಸಂದೀಪ ಶೆಣೈ, ಜಿ ಎಸ್ ಬಿ ಯುವಕ, ಮತ್ತು ಮಹಿಳಾ ಮಂಡಳಿಯ ಸದ್ಯಸರು ಉಪಸ್ಥರಿದ್ದರು.












