11 ನೇ ಸೀಸನ್ ಗೆ ಕಾಲಿಟ್ಟ ಪ್ರೊ ಕಬಡ್ಡಿ ಲೀಗ್ (PKL)ಪಂದ್ಯಾವಳಿ

ಯಶಸ್ವಿ 10 ಋತುಗಳನ್ನು ಕಂಡಿರುವ “ಪ್ರೊ ಕಬಡ್ಡಿ ಲೀಗ್‌'(ಪಿಕೆಎಲ್‌), ಇದೀಗ 11ನೇ ಋತುವಿಗೆ ಕಾಲಿಟ್ಟಿದೆ. ದೇಸಿ ಕ್ರೀಡೆಗೆ ಮತ್ತಷ್ಟು ಅಂತಾರಾಷ್ಟ್ರೀಯ ಮನ್ನಣೆ ದೊರಕಿಸಿಕೊಡಲು 2014ರಲ್ಲಿ “ಐಪಿಎಲ್‌ ಮಾದರಿ’ಯಲ್ಲಿ ಆರಂಭವಾದ ಪಿಕೆಎಲ್‌ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದೆ. 11ನೇ ಸೀಸನ್‌ ಆರಂಭದ ಹಿನ್ನೆಲೆಯಲ್ಲಿ ಹಿಂದಿನ ಚಾಂಪಿಯನ್‌ಗಳು, ಈ ಬಾರಿ ಭಾಗಿಯಾಗುತ್ತಿರುವ ತಂಡಗಳ ಬಲಾಬಲ, ಪಂದ್ಯಾವಳಿ ನಡೆಯುವ ಸ್ಥಳಗಳ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ…

ರೈಡರ್‌ಗಳನ್ನಷ್ಟೇ ನಂಬಿರುವ ಬೆಂಗಳೂರು ಬುಲ್ಸ್‌
ಕಳೆದ ಸೀಸನ್‌ನಲ್ಲಿ ಡಿಫೆನ್ಸ್‌ ಇಲ್ಲದೇ ಪ್ಲೇಆಫ್ಗೇರಲು ವಿಫಲವಾದ ಬೆಂಗಳೂರು ಬುಲ್ಸ್‌, ಈ ಬಾರಿ ಮತ್ತೆ ರೈಡಿಂಗ್‌ ಬಲವನ್ನು ಹೆಚ್ಚಿಸಿಕೊಂಡಿದೆ. ಪದೀìಪ್‌ ನರ್ವಾಲ್‌ ತಂಡ ಸೇರಿಕೊಂಡಿರುವುದು ಇದಕ್ಕೆ ಸಾಕ್ಷಿ. ಸೌರಭ್‌ ನಂದಲ್‌ ಹೊರತು ತಂಡದಲ್ಲಿ ಟಾಪ್‌ ಡಿಫೆಂಡರ್ಸ್‌ ಇಲ್ಲದಿರುವುದು ತಂಡಕ್ಕೆ ಹಿನ್ನಡೆಯಾಗಬಹುದು.

ಸ್ಟಾರ್ಸ್‌: ಪರ್ದೀಪ್ ನರ್ವಾಲ್‌, ಅಜಿಂಕ್ಯಾ ಪವಾರ್‌, ಸೌರಭ್‌
ಸಾಧನೆ: 2018ರ ಋತುವಿನ ಚಾಂಪಿಯನ್‌ . ಡಿಫೆಂಡಿಂಗ್‌ ಯೋಧರಿಲ್ಲದ ಯುಪಿ ಯೋಧಾಸ್‌
ಯುಪಿ ಯೋಧಾಸ್‌ ಬಳಿ ಪಂದ್ಯವನ್ನು ಬದಲಿಸಬಲ್ಲ ಡಿಫೆಂಡರ್‌ಗಳಿಲ್ಲ. 254 ಅಂಕ ಪಡೆದಿರುವ ಸುಮಿತ್‌ ಏಕೈಕ ಡಿಫೆಂಡರ್‌. ಕೇವಲ ರೈಡರ್‌ಗಳನ್ನಷ್ಟೇ ನಂಬಿಕೊಂಡಿರುವುದು ಪಂದ್ಯಾವಳಿಯ ಅಂತಿಮ ಹಂತದಲ್ಲಿ ತಂಡಕ್ಕೆ ಮುಳುವಾಗಬಹುದು. ಪರ್ದೀಪ್ ನರ್ವಾಲ್‌ ಸಹ ಇಲ್ಲದಿರುವುದು ತಂಡಕ್ಕೆ ನಷ್ಟ.
ಸ್ಟಾರ್ಸ್‌:ಸುರೇಂದರ್‌ ಗಿಲ್, ಭರತ್‌, ಮಹೇಂದರ್‌ ಸಿಂಗ್‌
ಸಾಧನೆ: 2017, 2018, 2019, 2021, 2022ರಲ್ಲಿ ಪ್ಲೇಆಫ್ ಪ್ರವೇಶ

ಹಿರಿ-ಕಿರಿ ಆಟಗಾರರ ಸಮ ಮಿಶ್ರಣದ ಯು ಮುಂಬಾ
ಯು ಮುಂಬಾ ತಂಡ ಕಳೆದ ಕೆಲವು ವರ್ಷಗಳಿಂದ ಯುವ ಆಟಗಾರರನ್ನೇ ನಂಬಿ­ಕೊಂ ಡಿತ್ತು. ಇದು ತಂಡಕ್ಕೆ ಮುಳುವಾದ ಕಾರಣ ಈ ಆವೃತ್ತಿಯಲ್ಲಿ ಹಿರಿಯ ಆಟಗಾರರನ್ನು ಸೇರಿಸಿಕೊಂಡಿದೆ. ಬಲಿಷ್ಠ ಡಿಫೆಂಡರ್‌ಗಳನ್ನು ಹೊಂದಿರುವ ಮುಂಬಾ ಬಳಿ ರೈಡರ್‌ಗಳು ನಿರಂತರವಾಗಿ ಪಾಯಿಂಟ್‌ ತರದಿರುವುದು ಸಮಸ್ಯೆಯಾಗುವ ಸಾಧ್ಯತೆ ಇದೆ.
ಸ್ಟಾರ್ಸ್‌: ಮಂಜಿತ್‌, ಪರ್ವೇಶ್‌ ಬೈನ್ಸಾಲ್, ಜಾಫರ್ದನೀಶ್‌
ಸಾಧನೆ: 2015 ಋತುವಿನಲ್ಲಿ ಚಾಂಪಿಯನ್‌ ಪಟ್ಟ ಗಳಿಸಿದ ತಂಡ.

ಬಲಿಷ್ಠ ಡಿಫೆಂಡರ್‌ಗಳ ತವರು ಹರ್ಯಾಣ ತಂಡ
ಕಳೆದ ಆವೃತ್ತಿಯ ರನ್ನರ್‌ಅಪ್ಸ್‌ ಹರ್ಯಾಣ ಸ್ಟೀಲರ್ಸ್‌ನ ಬಲವೆಂದರೆ ಆ ತಂಡದ ಡಿಫೆಂಡರ್ಸ್‌. ಕಳೆದ ವರ್ಷ ಈ ತಂಡದ ಮೂವರು ಡಿಫೆಂಡರ್ಸ್‌ ಅಗ್ರ 10ರಲ್ಲಿ ಸ್ಥಾನ ಪಡೆದುಕೊಂಡಿದ್ದರು. ಈ ಬಾರಿ ಮಹ್ಮದ್ರಜಾ ಶಾದೂÉಯಿ ಸಹ ಹರ್ಯಾಣ ಪಾಲಾಗಿರುವುದು ತಂಡದ ಬಲ ಹೆಚ್ಚಿಸಿದೆ. ಆದರೆ ಇಲ್ಲಿ ಅನುಭವಿ ರೈಡರ್‌ಗಳಿಲ್ಲ.
ಸ್ಟಾರ್ಸ್‌: ವಿನಯ್, ಚಿಯಾನ್‌, ಜೈದೀಪ್‌ ದಹಿಯಾ, ಹದೀಪ್‌
ಸಾಧನೆ: 2023 ರಲ್ಲಿ ರನ್ನರ್‌ಅಪ್‌ . 2017, 2019ರಲ್ಲಿ ಪ್ಲೇಆಫ್

ದೆಹಲಿ ದಬಾಂಗ್‌ ತಂಡಕ್ಕೆ ರೈಡರ್‌ಗಳೇ ಆಸ್ತಿ!
ದಬಾಂಗ್‌ ದೆಹಲಿ ತಂಡ ನಂಬಿರುವುದು ಕೇವಲ ನವೀನ್‌ ಕುಮಾರ್‌ ಹಾಗೂ ಅಂಶು ಮಲಿಕ್‌ ಅವರನ್ನು. ದೆಹಲಿ ತಂಡದ ರೈಡರ್‌ಗಳು ಎಷ್ಟು ಬಲಿಷ್ಠ ಎಂಬುದನ್ನು ಕಳೆದೆರಡು ಆವೃತ್ತಿಗಳು ತೋರಿಸಿಕೊಟ್ಟಿವೆ. ಆದರೆ ಪ್ರತಿ ಬಾರಿಯೂ ದೆಹಲಿಗೆ ಮುಳುವಾಗಿರುವುದು ಅವರ ಡಿಫೆಂಡರ್ಸ್‌.
ಸ್ಟಾರ್ಸ್‌: ನವೀನ್‌ ಕುಮಾರ್‌, ರಿಂಕು ನರ್ವಾಲ್ , ಅಂಶು
ಸಾಧನೆ: 2022ರ ಋತುವಿನ ಚಾಂಪಿಯನ್‌

ಗುಜರಾತ್‌ ಜೈಂಟ್ಸ್‌ಗೆ ಆಲ್‌ರೌಂಡರ್‌ ಚಿಂತೆ
ಗುಜರಾತ್‌ ಜೈಂಟ್ಸ್‌ ತಂಡಕ್ಕೆ ರೈಡರ್‌ಗಳ ಬಲವಿದ್ದರೆ, ಡಿಫೆಂಡರ್ಸ್‌ ಕೊರತೆ ಇದೆ. ಆದರೆ ತಂಡವನ್ನು ಕಾಡುತ್ತಿರುವುದು ಮಾತ್ರ ಆಲ್‌ರೌಂಡರ್‌ಗಳಿಲ್ಲ ಎಂಬ ಚಿಂತೆ. ಮೂವರು ರೈಡರ್‌ಗಳಿದ್ದರೂ ಅವರು ಔಟಾದರೆ ಮರಳಿ ಕರೆತರಲು ಬೇಕಾದ ಡಿಫೆಂಡರ್ಸ್‌ ತಂಡದಲ್ಲಿಲ್ಲ.
ಸ್ಟಾರ್ಸ್‌: ರಾಕೇಶ್‌, ಗುಮಾನ್‌ ಸಿಂಗ್‌, ಮೋನು ಗೋಯಟ್‌
ಸಾಧನೆ: 2017, 2018 ಸೀಸನ್‌ ರನ್ನರ್‌ ಅಪ್‌.

ಮತ್ತೆ ಲಯಕ್ಕೆ ಮರಳಲಿದೆಯೇ ತಮಿಳ್‌ ತಲೈವಾಸ್‌?
ಕಳೆದ ಸೀಸನ್‌ನಲ್ಲಿ ಭಾರೀ ನೀರಸ ಪ್ರದರ್ಶನದ ಬಳಿಕವೂ ಹಳೆಯ ಆಟಗಾರರಲ್ಲಿ ಬಹುತೇ­ಕರನ್ನು ತಮಿಳ್‌ ತಲೈವಾಸ್‌ ಉಳಿಸಿಕೊಂಡಿದೆ. ಅಲ್ಲದೇ ಕೋಚಾಗಿ ಈಬಾರಿ ಇಬ್ಬರನ್ನು ನೇಮಿಸಲಾಗಿದೆ. ನಿಯಮಿತವಾಗಿ ಪ್ರದರ್ಶನ ತೋರದಿರುವುದು ಈ ತಂಡದ ದೌರ್ಬಲ್ಯ. ಲಯಕ್ಕೆ ಮರಳಲು ಸಕಲ ಸಿದ್ದತೆ ನಡೆಸಿದೆ ತಂಡ.
ಸ್ಟಾರ್ಸ್‌: ಸಚಿನ್‌, ಸಾಗರ್‌, ಸಾಹಿಲ್‌ ಗುಲಿಯಾ
ಸಾಧನೆ: 2022ರಲ್ಲಿ ಪ್ಲೇಆಫ್ ಪ್ರವೇಶ

ಪಾಟ್ನಾ ಪೈರೇಟ್ಸ್‌ಗೆ ಆಲ್‌ರೌಂಡರ್‌ಗಳದ್ದೇ ಬಲ!
ಪಾಟ್ನಾ ಪೈರೇಟ್ಸ್‌ಗೆ ಈ ಬಾರಿ ಆಲ್‌ರೌಂಡರ್‌ಗಳ ಬಲ ದೊರೆತಿದೆ. ಶುಭಂ ಶಿಂಧೆ ಮತ್ತು ಗುದೀìಪ್‌ ಅವರನ್ನು ಪಾಟ್ನಾ ಈ ಬಾರಿ ಖರೀದಿಸಿದೆ. ಅಲ್ಲದೇ ಸಾಕಷ್ಟು ಅನುಭವಿ ಆಟಗಾರರು ತಂಡದಲ್ಲಿರುವುದು ಅದರ ಬಲವನ್ನು ಹೆಚ್ಚಿಸಿದೆ. ಹಿಂದಿನ ಆವೃತ್ತಿಗಳಲ್ಲಿ ರೈಡರ್‌ಗಳು ನಿರಂತರವಾಗಿ ಪ್ರದರ್ಶನವನ್ನು ತೋರಿಲ್ಲ.
ಸ್ಟಾರ್ಸ್‌: ಶುಭಂ ಶಿಂಧೆ, ಜಾಂಗ್‌ ಲೀ, ತ್ಯಾಗರಾಜನ್‌
ಸಾಧನೆ: 2016ರ 2 ಋತು ಹಾಗೂ 2017ರಲ್ಲಿ ಚಾಂಪಿಯನ್‌

ರೈಡರ್‌ಗಳು, ಡಿಫೆಂಡರ್‌ಗಳ ಮಿಶ್ರಣದ ಬಂಗಾಳ ತಂಡ
ಸರಿಯಾದ ಪ್ರಮಾಣದಲ್ಲಿ ರೈಡರ್‌, ಡಿಫೆಂಡರ್ಸ್‌ ಹೊಂದಿರುವ ಬೆಂಗಾಲ್‌ ವಾರಿಯರ್ಸ್‌ ಈ ಬಾರಿ ಕಪ್‌ ಮೇಲೆ ಕಣ್ಣಿಟ್ಟಿದೆ. ಡಿಫೆಂಡರ್‌ಗಳಿಗೆ ಸವಾಲು ಒಡ್ಡುವ ಮಣಿಂದರ್‌ ಸಿಂಗ್‌, ರೈಡರ್‌ಗಳನ್ನೇ ಕಾಡುವ ಫಜಲ್‌ ಅತ್ರಾಚಲಿ ಈ ತಂಡದಲ್ಲಿ¨ªಾರೆ. ಆದರೆ ತಂಡದಲ್ಲಿ ಆಲ್ ರೌಂಡರ್ ಗಳು ಇಲ್ಲದಿರುವುದು ಪ್ರಮುಖ ಹಿನ್ನಡೆ.
ಸ್ಟಾರ್ಸ್‌: ಮಣಿಂದರ್‌ ಸಿಂಗ್‌, ಫಜಲ್‌ ಅತ್ರಾಚಲಿ, ಮಯೂರ್‌
ಸಾಧನೆ: 2019ರ ಋತುವಿನ ಚಾಂಪಿಯನ್ಸ್‌ ತಂಡ.

ಟ್ರೋಫಿ ಮೇಲೆ ಜೈಪುರ್‌ ಪಿಂಕ್‌ ಪ್ಯಾಂಥರ್‌ ಕಣ್ಣು
ಎರಡು ಬಾರಿ ಚಾಂಪಿಯನ್‌ ಆಗಿರುವ ಜೈಪುರ ಪಿಂಕ್‌ ಪ್ಯಾಂಥರ್ಸ್‌ ಈ ಬಾರಿ ಹಿರಿಯ ಮತ್ತು ಹೊಸ ಆಟಗಾರರಿಂದ ತುಂಬಿದೆ. ಕಳೆದ ಕೆಲವು ಆವೃತ್ತಿಗಳಲ್ಲಿ ನಿಯಮಿತವಾಗಿ ಪ್ರದರ್ಶನ ನೀಡುತ್ತಿರುವುದು ಈ ತಂಡದ ಬಲ. ಸುನೀಲ್‌ ಕುಮಾರ್‌ರಿಂದ ತೆರವಾಗಿದ್ದ ಸ್ಥಾನವನ್ನು ಸುರ್ಜೀತ್‌ ತುಂಬಿರುವುದು ತಂಡದ ಬಲ ಹೆಚ್ಚಿಸಿದೆ.
ಸ್ಟಾರ್ಸ್‌: ಸುರ್ಜೀತ್‌ ಸಿಂಗ್‌, ಕಂಡೋಲಾ, ಅರ್ಜುನ್‌
ಸಾಧನೆ: 2014, 2023 ಋತುವಿನ ಚಾಂಪಿಯನ್ಸ್‌

ಬಲಿಷ್ಠ ದಾಳಿ ಸಂಘಟಿಸುವ ಸಾಮರ್ಥ್ಯದ ಪುಣೇರಿ
ಕನ್ನಡಿಗ ಕೋಚ್‌ ಬಿ.ಸಿ.ರಮೇಶ್‌ ಅವರ ಮಾರ್ಗದರ್ಶನದಲ್ಲಿರುವ ಪುಣೇರಿ ಪಲ್ಟಾನ್ಸ್‌ನ ಬಲವೆಂದರೆ ಅವರ ಅಟ್ಯಾಕ್‌. ಕಳೆದ ಆವೃತ್ತಿಯಲ್ಲಿ 19 ಪಂದ್ಯ ಗೆಲ್ಲುವ ಮೂಲಕ ಅತಿ ಹೆಚ್ಚು ಪಂದ್ಯ ಗೆದ್ದ ತಂಡ ಎನಿಸಿಕೊಂಡಿತ್ತು. ಆದರೆ ಆಲ್ ರೌಂಡರ್ ಚಿಯಾನ್‌ ಇಲ್ಲದಿರುವುದು ತಂಡಕ್ಕೆ ಹಿನ್ನಡೆಯನ್ನೊಡ್ಡಬಹುದು.
ಸ್ಟಾರ್ಸ್‌: ಅಜಿತ್‌ ಕುಮಾರ್‌, ವೈಭವ್‌, ಅಮನ್‌
ಸಾಧನೆ: 2023ರ ಋತು ವಿನಲ್ಲಿ ಟ್ರೋಫಿ ಗೆಲವು

ಏಕೈಕ ರೈಡರ್‌ ಬಲದ ತೆಲುಗು ಟೈಟಾನ್ಸ್‌ !
ಕಳೆದ ಆವೃತ್ತಿಯಲ್ಲಿ ಹಿನ್ನಡೆ ಅನುಭವಿಸಿದ ಬಳಿಕ ಕೋಚ್‌ ಸೇರಿದಂತೆ ಹಲವು ಆಟಗಾರರನ್ನು ತೆಲುಗು ಟೈಟಾನ್ಸ್‌ ಬದಲಾಯಿಸಿದ್ದರೂ ಪವನ್‌ ಸೆಹ್ರಾವತ್‌ ಹೊರತು ಮತ್ತೂಬ್ಬ ಆಕ್ರಮಣಕಾರಿ ರೈಡರ್‌ ತಂಡದಲ್ಲಿಲ್ಲ. ಆರ್‌ರೌಂಡರ್‌ಗಳು ಹೆಚ್ಚಿರುವುದು ತಂಡಕ್ಕೆ ಬಲ ತಂದುಕೊಟ್ಟಿದೆ.
ಸ್ಟಾರ್ಸ್‌: ಪವನ್‌ ಸೆಹ್ರಾವತ್‌, ಮಂಜೀತ್‌, ಮಿಲಿಂದ್‌
ಸಾಧನೆ: 2015 ಮತ್ತು 2016 ಋತುವಿನ‌ಲ್ಲಿ ಪ್ಲೇಆಫ್‌ ಪ್ರವೇಶ

1.ಗಚ್ಚಿಬೌಲಿ ಸ್ಟೇಡಿಯಂ, ಹೈದ್ರಾಬಾದ್‌, ತೆಲಂಗಾಣ
ಅ.18ರಿಂದ ನವೆಂಬರ್‌ 9ರವರೆಗೆ ಇಲ್ಲಿ ಕಬಡ್ಡಿ ಪಂದ್ಯಗಳು ನಡೆಯಲಿವೆ. ಸುಮಾರು 5 ಸಾವಿರ ಮಂದಿ ಕೂರಲು ಇಲ್ಲಿ ಸ್ಥಳಾವಕಾಶವಿದೆ. 2002ರಲ್ಲಿ ಈ ಒಳಾಂಗಣ ಮೈದಾನವನ್ನು ನಿರ್ಮಾಣ ಮಾಡಲಾಯಿತು.

2.ವಿಜಯ್‌ ಸಿಂಗ್‌ ಮೈದಾನ, ನೋಯ್ಡಾ, ಉತ್ತರ ಪ್ರದೇಶ
ನ.10ರಿಂದ ಡಿ.1ರವರೆಗೆ ಇಲ್ಲಿ ಕಬಡ್ಡಿ ಪಂದ್ಯಗಳು ನಡೆಯಲಿವೆ. ಈ ಮೈದಾನವೂ 5 ಸಾವಿರ ಮಂದಿ ಕೂರುವಷ್ಟು ಸ್ಥಳಾವಕಾಶವನ್ನು ಹೊಂದಿದೆ. 2013ರಲ್ಲಿ ಈ ಮೈದಾನವನ್ನು ನಿರ್ಮಾಣ ಮಾಡಲಾಯಿತು.

3.ಛತ್ರಪತಿ ಕ್ರೀಡಾಂಗಣ, ಪುಣೆ ನಗರ, ಮಹಾರಾಷ್ಟ್ರ
ಡಿ.3ರಿಂದ 24ರವರೆಗೆ ಇಲ್ಲಿ ಪಂದ್ಯಾವಳಿ ನಡೆಯಲಿದ್ದು, ಪ್ರೊ ಕಬಡ್ಡಿ ಪಂದ್ಯಾವಳಿ ಇಲ್ಲಿಗೆ ಅಂತ್ಯಗೊಳ್ಳಲಿದೆ. ಇಲ್ಲಿ 4200 ಮಂದಿಗೆ ಕೂರಲು ಸ್ಥಳಾವಕಾಶ ಇದೆ. 1994ರಲ್ಲಿ ಇದನ್ನು ನಿರ್ಮಾಣ ಮಾಡಲಾಗಿದೆ.

068
11ನೇ ಆವೃತ್ತಿಯ ಪ್ರೊಕಬಡ್ಡಿ ಲೀಗ್‌
ಒಟ್ಟು 68 ದಿನಗಳ ಕಾಲ ನಡೆಯಲಿದೆ.

03 ಕೋಟಿ ರೂ.:ಪ್ರಸಕ್ತ ಋತುವಿನ ಪ್ರೊ ಕಬಡ್ಡಿ ಲೀಗ್‌ ಚಾಂಪಿಯನ್‌ ಆಗುವ ತಂಡಕ್ಕೆ ಸಿಗುವ ಒಟ್ಟು ಬಹುಮಾನದ ಮೊತ್ತ

1.80 ಕೋಟಿ ರೂ.: ಪ್ರಸಕ್ತ ಋತುವಿನ ಪ್ರೊಕಬಡ್ಡಿ ಲೀಗ್‌ ರನ್ನರ್ ತಂಡಕ್ಕೆ ಸಿಗುವ ಬಹುಮಾನ

12: 11ನೇ ಆವೃತ್ತಿ ಪಿಕೆಎಲ್‌ನಲ್ಲಿ ಭಾಗಿಯಾಗುತ್ತಿರುವ ಒಟ್ಟು ತಂಡ

137: ಈ ಬಾರಿ ನಡೆಯುವ ಒಟ್ಟು ಪಂದ್ಯಗಳು

03:ಈ ಬಾರಿ ಪಂದ್ಯಾವಳಿ ನಡೆಯುತ್ತಿರುವ ತಾಣಗಳು

486:ಫಜಲ್‌ ಅತ್ರಾಚಲಿ ಗಳಿಸಿರುವ ಟ್ಯಾಕಲ್‌ ಅಂಕಗಳು