11ನೇ ಕಿಯಾ ಸ್ಕಿಲ್ ವರ್ಲ್ಡ್ ಕಪ್ ಸಮಾರಂಭ: ಬಾರ್ಕೂರು ನ್ಯಾಷನಲ್ ಕೈಗಾರಿಕಾ ತರಬೇತಿ ಸಂಸ್ಥೆಯ ಸಂಚಿತ್ ಕುಮಾರ್ ಗೆ ಚಿನ್ನದ ಪದಕ.

ಬ್ರಹ್ಮಾವರ: ದಿ ಬಾರ್ಕೂರು ಎಜ್ಯುಕೇಶನಲ್ ಸೊಸೈಟಿ (ರಿ) ಇದರ ಆಡಳಿತಕ್ಕೊಳಪಟ್ಟ ನ್ಯಾಷನಲ್ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2014-16ರ ಸಾಲಿನಲ್ಲಿ ಎಂ.ಎಂ.ವಿ (ಆಟೊಮೊಬೈಲ್) ವಿಭಾಗದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿ ಶ್ರೀ ಸಂಚಿತ್ ಕುಮಾರ್ ಇವರು ಪ್ರಸಿದ್ಧ ಕಾರು ಉತ್ಪಾದನಾ ಸಂಸ್ಥೆ ‘ಕಿಯಾ’ ದ ಇತ್ತೀಚೆಗೆ ಸೌತ್ ಕೊರಿಯಾದಲ್ಲಿ ನಡೆದ ದಿ ಲೆವೆಂತ್ ಕಿಯಾ ಸ್ಕಿಲ್ ವರ್ಲ್ಡ್ ಕಪ್ (The 11th KIA Skill World Cup) ಸಮಾರಂಭದಲ್ಲಿ ಭಾರತವನ್ನು ಪ್ರತಿನಿಧಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ವೈಲ್ಡ್ ಬೆಸ್ಟ್ ಟೆಕ್ನಿಷಿಯನ್ (World Best Technician) ಎಂದು ಗುರುತಿಸಿ ಗೋಲ್ಡ್ ಮೆಡಲ್ ಅನ್ನು ಪಡೆದಿದ್ದಾರೆ.

ಅಲ್ಲದೆ 2017-2021 ವರೆಗೆ ಹ್ಯುಂಡೈ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವಾಗ ಸೌತ್ ಕೊರಿಯಾದಲ್ಲಿ ನಡೆದ ತರ್ಟಿನ್ ವರ್ಲ್ಡ್ ಸ್ಕಿಲ್ ಒಲಂಪಿಕ್ (13th World Skill Olympic) ನಲ್ಲಿ ಭಾರತವನ್ನು ಪ್ರತಿನಿಧಿಸಿ ಗೋಲ್ಡ್ ಮೆಡಲ್ ಗೆ ಭಾಜನರಾಗಿದ್ದಾರೆ.

ವಿದ್ಯಾರ್ಥಿಯ ಈ ಸಾಧನೆಯನ್ನು ನ್ಯಾಷನಲ್ ಕೈಗಾರಿಕಾ ತರಬೇತಿ ಸಂಸ್ಥೆ ಹಾಗೂ ಆಡಳಿತ ಮಂಡಳಿಯ ಕೀರ್ತಿಯನ್ನು ಉತ್ತುಂಗಕ್ಕೇರಿಸಿರುತ್ತಾರೆ. ಹಾಗೂ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಚಾರ್ಯರು, ಸಿಬ್ಬಂದಿವರ್ಗ, ವಿದ್ಯಾರ್ಥಿಗಳು ಶುಭ ಹಾರೈಸಿದ್ದಾರೆ.