ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ: ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿಗೆ ಸತತ 5ನೇ ಬಾರಿ ಶೇ.100 ಫಲಿತಾಂಶ

ಕುಂದಾಪುರ: 2022-23 ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿಗೆ ಶೇ 100 ಫಲಿತಾಂಶ ದಾಖಲಾಗುವುದರ ಜೊತೆಗೆ ರಾಜ್ಯ ಮಟ್ಟದಲ್ಲಿ ತೃತೀಯ ರ‍್ಯಾಂಕ್‌ನೊಂದಿಗೆ ಒಟ್ಟು 11 ರ‍್ಯಾಂಕ್‌ ಪಡೆದುಕೊಂಡಿದೆ. ಯಾವುದೇ ಅಂಕದ ಷರತ್ತುಗಳು ಇಲ್ಲದೆ ವಿದ್ಯಾರ್ಥಿಗಳನ್ನು ಕಾಲೇಜಿಗೆ ದಾಖಲಿಸಿಕೊಂಡು ಸತತವಾಗಿ 5 ವರ್ಷಗಳಿಂದ ಶೇ.100 ಫಲಿತಾಂಶ ದಾಖಲಿಸುತ್ತಿರುವ ಕುಂದಾಪುರದ ಏಕೈಕ ಕಾಲೇಜು ಆಗಿ ಹೊರಹೊಮ್ಮಿರುವುದು ಶ್ಲಾಘನೀಯ.