ಲಾಸ್ ಎಂಜಲೀಸ್: ಸೀಡರ್ಸ್-ಸಿನೈ ಗೆರಿನ್ ಮಕ್ಕಳ ಆಸ್ಪತ್ರೆಯಲ್ಲಿ “ಅವಳಿ ಮಕ್ಕಳ ಡಬಲ್ ಧಮಾಕಾ” ನೋಡಿ ಪಾಲಕರು, ವೈದ್ಯರು ಮತ್ತು ದಾದಿಯರು ಬೆಕ್ಕಸ ಬೆರಗಾಗಿದ್ದಾರೆ. ಹತ್ತು ಜೋಡಿ ಅವಳಿ ಮಕ್ಕಳು ಒಂದೇ ದಿನ ಒಂದೇ ಆಸ್ಪತ್ರೆಯಲ್ಲಿ ಜನಿಸಿರುವುದು ಎಲ್ಲರನ್ನೂ ಆಶ್ಚರ್ಯ ಚಕಿತರನ್ನಾಗಿಸಿದೆ. ಈ ಎಲ್ಲಾ ಮಕ್ಕಳನ್ನು ನಿಯೋನಾಟಲ್ ಇಂಟೆನ್ಸಿವ್ ಕೇರ್ ಯುನಿಟ್ (NICU) ನಲ್ಲಿ ಆರೈಕೆ ಮಾಡಲಾಗುತ್ತಿದೆ. ಸೀಡರ್ಸ್-ಸಿನೈ ಪ್ರಕಾರ, ಹೆಚ್ಚಿನ ಅವಳಿ ಜೋಡಿಗಳು ಹುಡುಗರಾಗಿದ್ದು, ಮಕ್ಕಳು 2 ಪೌಂಡ್ಗಳಿಂದ 6 ಪೌಂಡ್ಗಳವರೆಗೆ ತೂಗುತ್ತಿದ್ದಾರೆ
ನಾವು ಬಹಳಷ್ಟು ಅವಳಿ ಮಕ್ಕಳನ್ನು ಕಂಡಿದ್ದೇವೆ ಮತ್ತು ಆರೈಕೆ ಮಾಡಿದ್ದೇವೆ. ಆದರೆ ಒಂದೇ ದಿನ ಹತ್ತು ಜೋಡಿ ಅವಳಿ ಮಕ್ಕಳನ್ನು ಸಂಭಾಳಿಸುವುದು ಸಾಧನೆಯಾಗಿದೆ. ಹಿಂದಿನ ದಾಖಲೆ ಎಷ್ಟು ಎಂದು ತಿಳಿದಿಲ್ಲ, ಆದರೆ ಹತ್ತು ಅದಕ್ಕೆ ಬಹಳ ಹತ್ತಿರವಿದೆ ಎಂದು ಇಂಟೆನ್ಸಿವ್ ಕೇರ್ ಯುನಿಟ್ ನ ಸಹಾಯಕ ನರ್ಸ್ ಮ್ಯಾನೇಜರ್ ಆಶ್ಲೇ ರಿಚರ್ಡ್ಸನ್ ಮಾಧ್ಯಮಗಳಿಗೆ ಹೇಳಿದ್ದಾರೆ.
ಅವಳಿ ಮಕ್ಕಳನ್ನು ಪಡೆದಿರುವ ಪಾಲಕರು ಕೂಡಾ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ ಮತ್ತು ಇದು ಇಮ್ಮಡಿ ಆಶೀರ್ವಾದ ಎಂದಿದ್ದಾರೆ.
ಮಕ್ಕಳ ಬೆಳವಣಿಗೆಯನ್ನು ನೋಡಲು ನಾವು ಕಾತುರರಾಗಿದ್ದೇವೆ. ಮುಂದಿನ ವರ್ಷ 20 ಅವಳಿ ಮಕ್ಕಳುಗಳು ತಮ್ಮ ಮೊದಲನೆ ವರ್ಷದ ಜನ್ಮ ದಿನ ಆಚರಿಸುವುದನ್ನು ನೋಡಲು ಬಯಸುತ್ತೇವೆ ಎಂದು ಇಲ್ಲಿನ ನರ್ಸ್ ಒಬ್ಬರು ಹೇಳಿದ್ದಾರೆ.