ಕರ್ಣಾಟಕ ಬ್ಯಾಂಕ್ ನಿಂದ ಜಿಲ್ಲಾಡಳಿತಕ್ಕೆ ₹ 22 ಲಕ್ಷ ಮೌಲ್ಯದ ಆಂಬ್ಯುಲೆನ್ಸ್ ಹಸ್ತಾಂತರ

ಉಡುಪಿ: ಕರ್ಣಾಟಕ ಬ್ಯಾಂಕ್ ವತಿಯಿಂದ ಜಿಲ್ಲಾಡಳಿತದ ಉಪಯೋಗಕ್ಕಾಗಿ ₹ 22 ಲಕ್ಷ ಮೌಲ್ಯದ ಸುಸಜ್ಜಿತ ಆಂಬ್ಯುಲೆನ್ಸ್ ಅನ್ನು ಹಸ್ತಾಂತರ ಮಾಡಲಾಯಿತು.

ಬ್ಯಾಂಕ್ ನ ಮುಖ್ಯ ಪ್ರಬಂಧಕ ಮಂಜುನಾಥ್ ಭಟ್ ಅವರು ಸೋಮವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರಿಗೆ ಹಸ್ತಾಂತರಿಸಿದರು.

ಕಾರ್ಯಕ್ರಮದಲ್ಲಿ ಡಿಎಚ್ ಒ ಡಾ. ಸುಧೀರ್ ಚಂದ್ರ ಸೂಡಾ, ಡಾ. ಪ್ರಶಾಂತ್ ಭಟ್, ಡಾ. ಪ್ರೇಮಾನಂದ, ಕರ್ಣಾಟಕ ಬ್ಯಾಂಕ್ ನ ಕೇಂದ್ರ ಕಚೇರಿಯ ಮುಖ್ಯ ವ್ಯವಹಾರ ಅಧಿಕಾರಿ ಗೋಕುಲ್ ದಾಸ್ ಪೈ, ಉಡುಪಿ ವಿಭಾಗದ ಎಜಿಎಂ ಗೋಪಾಲಕೃಷ್ಣ ಸಾಮಗ, ಶ್ರೀನಿವಾಸ್, ದೇಶ್ ಪಾಂಡೆ ಮತ್ತಿತರರು ಉಪಸ್ಥಿತರಿದ್ದರು.