ಉಡುಪಿ: ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಸೀತಾನದಿ ಉಕ್ಕಿಹರಿಯುತ್ತಿದ್ದು, ರಭಸವಾಗಿ ಹರಿದು ಬರುವ ನೀರಿನ ಜೊತೆ ಕಸ, ತ್ಯಾಜ್ಯ, ಮರದ ದಿಮ್ಮಿಗಳು ತೇಲಿ ಬರುತ್ತಿವೆ.
ಬ್ರಹ್ಮಾವರ ತಾಲೂಕಿನ ಚಾಂತಾರು ಗ್ರಾಮದ ಹೇರೂರು ಉಗ್ಗೇಲುಬೆಟ್ಟು ಎಂಬಲ್ಲಿರುವ ಕಿಂಡಿ ಅಣೆಕಟ್ಟಿಗೆ ಬಾರಿ ಗಾತ್ರದ ಮರದ ದಿಮ್ಮಿಗಳು ಸಿಲುಕಿತ್ತು. ಹರಿದು ಬರುವ ನೀರಿನಲ್ಲಿ, ದೊಡ್ಡ ಪ್ರಮಾಣದ ಮರದ ದಿಮ್ಮಿಗಳು ಬಂದು ಅಣೆಕಟ್ಟು ಪ್ರದೇಶದಲ್ಲಿ ಸಿಲುಕುವುದು ಸಾಮಾನ್ಯ. ಇದೀಗ ಅಣೆಕಟ್ಟಿಗೆ ಸಿಲುಕಿದ ಮರಗಳನ್ನು ಪಂಚಾಯತ್ ಅಧಿಕಾರಿಗಳು ಸದಸ್ಯರ ನೆರವಿನೊಂದಿಗೆ ತೆರವು ಮಾಡಿದ್ದಾರೆ. ಅಧಿಕಾರಿಗಳ ಈ ಕಾರ್ಯಾಚರಣೆಯಲ್ಲಿ ಸ್ಥಳೀಯ ನಿವಾಸಿಗಳು ಕೈಜೋಡಿಸಿದ್ದಾರೆ.