ಕುಂದಾಪುರ:ಆನಗಳ್ಳಿ ಆಸೇೂಡರ ಮನೆಯ ಹೇಮಲತಾ ರಾಜೀವ್ ಶೆಟ್ಟಿಯವರು (85) ಫೆ.12 ರಂದು ಸ್ವಗೃಹ ಆಸೇೂಡಿನಲ್ಲಿ ನಿಧನರಾದರು.
ಕೊಕ್ಕರ್ಣೆ ಬಂಡ್ಸಾಲೆ ಮನೆ ರಾಜೀವ್ ಶೆಟ್ಟಿ ನಿವೃತ್ತ ಶಿಕ್ಷಣ ಅಧಿಕಾರಿ ಕುಂದಾಪುರ ಇವರ ಪತ್ನಿ.ಇಬ್ಬರು ಪುತ್ರರು ಓರ್ವ ಪುತ್ರಿಯರನ್ನು ಅಗಲಿದ್ದಾರೆ.
ಮೃತರ ಸ್ವಗೃಹಕ್ಕೆ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ;ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬೈಂದೂರು ಮಾಜಿ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಹಾಗೂ ಸ್ಥಳೀಯ ಅನೇಕ ಮಂದಿ ಗಣ್ಯರು ಆಗಮಿಸಿ ಸಂತಾಪ ಸೂಚಿಸಿದರು.












