ಹೆಬ್ರಿ ಚಾಣಕ್ಯ ಟ್ಯೂಟೋರಿಯಲ್ ಕಾಲೇಜಿನಲ್ಲಿ ನಲಿಕಲಿ, ಬೇಸಿಗೆ ರಜಾ ಶಿಬಿರ

ಹೆಬ್ರಿ: ರಜಾ ಸಮಯದಲ್ಲಿ ತಮ್ಮ ಮಕ್ಕಳು ಮೊಬೈಲ್ ಟಿವಿಯಿಂದ ವ್ಯರ್ಥ ಕಾಲಹರಣ ಮಾಡುವ ಬದಲು ಬದುಕು ಶಿಕ್ಷಣ ಜೊತೆ ಮನರಂಜನೆ ನೀಡುವ ವೈವಿಧ್ಯಯಯ ಬೇಸಗೆ ಶಿಬಿರಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಮಕ್ಕಳ ಪ್ರತಿಭೆ ಗಳು ಹೊರಬರಲು ಸಾಧ್ಯ ಎಂದು ಭಾರತೀಯ ಮಾನವ ಹಕ್ಕುಗಳ ಮಂಡಳಿಯ ರಾಜ್ಯಾಧ್ಯಕ್ಷ ಪ್ರಸಾದ್ ರೈ ಹೇಳಿದರು.

ಅವರು ಚಾಣಕ್ಯ ಏಜ್ಯುಕೇಶನ್ ಮತ್ತು ಕಲ್ಚರಲ್ ಆಕಾಡೆಮಿ ಆಶ್ರಯದಲ್ಲಿ ಹೆಬ್ರಿ ಎಸ್.ಆರ್.ಸ್ಕೂಲ್ ಬಳಿಯ ಗುರುಕೃಪಾ ಬಿಲ್ಡಿಂಗ್‌ನಲ್ಲಿರುವ ಚಾಣಕ್ಯ ಟ್ಯೂಟೋರಿಯಲ್ ಕಾಲೇಜಿನಲ್ಲಿ ನಡೆಯುತ್ತಿರುವ ಚಾಣಕ್ಯ ನಲಿಕಲಿ ವೈವಿಧ್ಯಮಯ ಬೇಸಿಗೆ ರಜಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಮಕ್ಕಳ ಮನಗಿದ್ದ ಚಾಣಕ್ಯ:
ಗ್ರಾಮೀಣ ಸೊಗಡಿನೊಂದಿಗೆ ವೈವಿಧ್ಯಮಯ ಬೇಸಿಗೆ ಶಿಬಿರವನ್ನು ಕಳೆದ ಹತ್ತು ವರ್ಷಗಳಿಂದ ಮಾಡುತ್ತಾ ಬರುತ್ತಿರುವ ಚಾಣಕ್ಯ ಸಂಸ್ಥೆ ಮಕ್ಕಳ ಮನಗೆದ್ದಿದೆ ಎಂದು ಎಸ್.ಆರ್.ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಚ್. ನಾಗರಾಜ್ ಶೆಟ್ಟಿ ಹೇಳಿದರು.

ಮಕ್ಕಳನ್ನು ಸಮಾಜಮುಖಿಯಾಗಿ ಬೆಳೆಸಿ:
ಶಿಕ್ಷಣವೆಂದರೆ ಬರಿ ಅಂಕ ಗಳಿಗೆ ಅಷ್ಟೇ ಅಲ್ಲ. ಸಮಾಜಮುಖಿಯಾಗಿ ಎಲ್ಲರೊಂದಿಗೆ ಬೆರೆತು ಬದುಕುವುದು ಹೇಗೆ ಅನ್ನೋದನ್ನ ಕಲಿಸುವ ಕೆಲಸ ಇಂದಿನ ಪೋಷಕರಿಂದ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರತಿ ವರ್ಷ ವಿನೂತನವಾಗಿ ಬೇಸಿಗೆ ಶಿಬಿರವನ್ನು ಆಯೋಜಿ ಸಿ ಒಂದೇ ಸೂರಿನಡಿ ವಿವಿಧ ತರಬೇತಿ ನೀಡಿ ಮಕ್ಕಳನ್ನು ಸಮಾಜಮುಖಿಯಾಗಿಸುವ ಚಾಣಕ್ಯ ಸಂಸ್ಥೆಯ ಪರಿಶ್ರಮ ಶ್ಲಾಘನೀಯ ಎಂದು ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಚ್.ನವೀನ್ ಅಡ್ಯಂತಾಯ ಹೇಳಿದರು.

Oplus_131072

ಮಕ್ಕಳ ಕೈಗೆ ಮೊಬೈಲ್ ಕೊಡಬೇಡಿ:
ಮನೆ ಮನಸನ್ನು ಕೆಡಿಸುವ ಟಿವಿ ಹಾಗೂ ದಾರಿ ತಪ್ಪಿಸುವ ಮೊಬೈಲನ್ನು ಯಾವ ಕಾರಣಕ್ಕೂ ಪೋಷಕರು ತಮ್ಮ ಮಕ್ಕಳಿಗೆ ಕೊಡಬೇಡಿ. ಬದಲಾಗಿ ಕ್ರೀಯಾಶೀಲತೆಯೊಂದಿಗೆ ಬದುಕು ಶಿಕ್ಷಣ ನೀಡುವ ಇಂತಹ ಶಿಬಿರಗಳಿಗೆ ಸೇರಿಸಬೇಕು ಎಂದು ನಿವೃತ್ತ ಮುಖ್ಯ ಶಿಕ್ಷಕ ಹರಿದಾಸ್ ಹೆಗ್ಡೆ ಹೇಳಿದರು.

Oplus_131072

ಸಮಾರಂಭದ ಅಧ್ಯಕ್ಷತೆಯನ್ನು ಚಾಣಕ್ಯ ಸಂಸ್ಥೆಯ ಪ್ರಾಂಶುಪಾಲೆ ವೀಣಾ ಯು.ಶೆಟ್ಟಿ ವಹಿಸಿದ್ದರು. ಸಮಾರಂಭದಲ್ಲಿ ಬ್ರಹ್ಮಾವರ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಽಕಾರಿ ನಿತ್ಯಾನಂದ ಶೆಟ್ಟಿ, ಹೆಬ್ರಿ ಜೇಸಿಐ ಅಧ್ಯಕ್ಷೆ ಸೋನಿ ಪಿ.ಶೆಟ್ಟಿ , ನಿತ್ಯಾನಂದ ಭಟ್, ಆಶಾ ಹೆಬ್ಬಾರ್, ಶೀಲಾ ಮೊದಲಾದವರು ಉಪಸ್ಥಿತರಿದ್ದರು. ಚಾಣಕ್ಯ ಸಂಸ್ಥೆಯ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಸ್ವಾಗತಿಸಿ, ಮುದ್ರಾಡಿ ಪ್ರೌಢಶಾಲೆಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಕಾರ್ಯಕ್ರಮ ನಿರೂಪಿಸಿ, ಹೆಬ್ರಿ ಪ್ರೌಢಶಾಲೆಯ ಶಿಕ್ಷಕ ಪ್ರವೀಣ್ ಶೆಟ್ಟಿ ವಂದಿಸಿದರು.