ಹೆಬ್ರಿಯಲ್ಲಿ ಯಕ್ಷಗಾನ ಭಾಗವತಿಗೆ ತರಗತಿ ಉದ್ಘಾಟನೆ.

ಹೆಬ್ರಿ: ಭಾರತೀಯ ರಂಗಕಲೆಗಳಲ್ಲಿ ಯಕ್ಷಗಾನ ಸಮಷ್ಟಿಕಲೆ ಇದೊಂದು ಆರಾಧನಾ ಕಲೆ. ಭಾಷೆಯಲ್ಲಿ ಹಿಡಿತವಿರುವ ಯಕ್ಷಗಾನ ಕಲೆ ಉಳಿಸಿ ಬೆಳಿಸುವ ಕೆಲಸ ಪ್ರತಿಯೊಬ್ಬರಿಂದಲೂ ಆಗಬೇಕು. ಈ ನಿಟ್ಟಿನಲ್ಲಿ ಚಾಣಕ್ಯಸಂಸ್ಥೆ ಕಳೆದ 10 ವರ್ಷಗಳಿಂದ ಕಲಾ ಪ್ರಕಾರಗಳೆಲ್ಲವನ್ನು ತರಬೇತಿ ನಿಡುವುದರ ಜತೆಗೆ ದಶಮಾನೋತ್ಸವದ ಸಂಭ್ರಮದ ಅಂಗವಾಗಿ ಯಕ್ಷಗಾನ ತರಬೇತಿಯ ಜೊತೆ ಭಾಗವತಿಗೆ ತರಗತಿ ಆರಂಭಿಸಿರುವುದು ಶ್ಲಾಘನೀಯ ಎಂದು ಯಕ್ಷಗಾನ ಗುರು ಸುಬ್ರಹ್ಮಣ್ಯ ಪ್ರಸಾದ್ ಹೇಳಿದರು.

ಅವರು ಹೆಬ್ರಿ ಎಸ್.ಆರ್.ಬಳಿ ಇರುವ ಚಾಣಕ್ಯ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಆರಂಭಗೊಂಡ ಯಕ್ಷಗಾನ ಭಾಗವತಿಗೆ ತರಗತಿಯನ್ನು ಭಾಗವತಿಗೆಯ ಮೂಲಕ ಚಾಲನೆ ನೀಡಿ ಮಾತನಾಡಿದರು.

ಸಮಾರಂಭವನ್ನು ದಿನೇಶ್ ಶೆಟ್ಟಿ ಹುತ್ತುರ್ಕೆ ಉದ್ಘಾಟಿಸಿ ಶುಭ ಹಾರೈಸಿದರು. ಇದೇ ಸಮಯದಲ್ಲಿ ಇತ್ತೀಚಿಗೆ ನಿಧರಾದ ಯಕ್ಷಗಾನ ಕಲಾವಿದ ಕುಂಬಳೆ ಶ್ರೀಧರ್ ರಾವ್ ಅವರಿಗೆ ಸಂತಾಪ ಸೂಚಿಸಲಾಯಿತು.

ಸಮಾರಂಭದಲ್ಲಿ ಮಾಳೂರು ಸರಕಾರಿ ಪ. ಪೂ. ಕಾಲೇಜಿನ ನಿವೃತ್ತ ಉಪ ಪ್ರಾಂಶುಪಾಲ ಗೋಪಾಲಕೃಷ್ಣ ಶೆಟ್ಟಿ, ಪ್ರವೀಣ್ ಸೂಡ, ಚಾಣಕ್ಯ ಸಂಸ್ಥೆಯ ಗೌರವ ಸಲಹೆಗಾರ ನಿತ್ಯಾನಂದ ಭಟ್‌, ಸವಿತಾ ಕೆ., ಸುಮಿತ್ರಾ ಮೊದಲಾದವರು ಉಪಸ್ಥಿತರಿದ್ದರು. ಉದಯಕುಮಾರ್ ಶೆಟ್ಟಿ ಸ್ವಾಗತಿಸಿ, ನಿರೂಪಿಸಿ, ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನ ಪ್ರಾಂಶುಪಾಲೆ ವೀಣಾ.ಯು ಶೆಟ್ಟಿ ವಂದಿಸಿದರು.