ಹಿರಿಯಡಕದಲ್ಲಿ “ಯುಸಿ ಸಿಟಿ” ವಸತಿ ಲೇಔಟ್ ನ ಉದ್ಘಾಟನೆ

ಉಡುಪಿ: ಹಿರಿಯಡಕ ರಾಷ್ಟ್ರೀಯ ಹೆದ್ದಾರಿ 169 ಎ ಪದವಿ ಕಾಲೇಜಿನ ಮುಂಭಾಗದಲ್ಲಿ ನಿರ್ಮಾಣಗೊಂಡಿರುವ “ಯುಸಿ ಸಿಟಿ” ವಸತಿ ಲೇಔಟ್ ನ ಉದ್ಘಾಟನೆ ಕಾರ್ಯಕ್ರಮ ಇಂದು ನಡೆಯಿತು.

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ,ಬೊಮ್ಮರಬೆಟ್ಟು ಗ್ರಾ.ಪಂ‌ ಅಧ್ಯಕ್ಷೆ ಜಯಂತಿ ಶೆಟ್ಟಿ, ಉಪಾಧ್ಯಕ್ಷ ಹರೀಶ್ ಸಾಲಿಯಾನ್, ಇನ್ಫ್ರಾ ಪ್ರಾಜೆಕ್ಟ್ ಪ್ರೈವೇಟ್ ಲಿಮಿಟೆಡ್ ನ ಮ್ಯಾನೇಜಿಂಗ್ ಡೈರೆಕ್ಟರ್ ಅಬ್ದುಲ್ ಕಲಾಂ ಆಜಾದ್, ಫೆಡರೇಶನ್ ಆಫ್ ಕರ್ನಾಟಕ ಸ್ಟೇಟ್ ಬಸ್ ಆಪರೇಟರ್ಸ್ ಅಸೋಸಿಯೇಷನ್ ನ ಕುಯಿಲಾಡಿ ಸುರೇಶ್ ನಾಯಕ್, ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ ನ್ಯಾಷನಲ್ ಇನ್ಫ್ರಾಬಿಲ್ಡ್ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಇಬ್ರಾಹಿಂ ಷರೀಫ್, ಮಾಂಡೋವಿ ಬಿಲ್ಡರ್ಸ್ & ಡೆವಲಪರ್ಸ್ ನ ಮಾಲೀಕ ಡಾ. ಜೆರ್ರಿ ವಿನ್ಸೆಂಟ್ ಡಯಾಸ, ಹಿರಿಯಡ್ಕ‌ ನಟರಾಜ್, ಎಫ್‌ಕೆಸಿಸಿಐ ಉಡುಪಿ ಜಿಲ್ಲಾಧ್ಯಕ್ಷ ಅಂಡಾರು ದೇವಿಪ್ರಸಾದ್ ಶೆಟ್ಟಿ, BNI ಮಂಗಳೂರು ಕಾರ್ಯನಿರ್ವಾಹಕ ನಿರ್ದೇಶಕ‌ ಗಣೇಶ ಎನ್ ಶರ್ಮ ,ಮೈಂಡ್ ತೆರಪಿ ಸಂಸ್ಥೆಯ ಸಂಸ್ಥಾಪಕಿ ತನುಜಾ ಮಾಬೆನ್ ಮುಖ್ಯ ಅತಿಥಿಗಳಾಗಿ‌‌ ಭಾಗವಹಿಸಿದ್ದರು .


ಈ ಸಂದರ್ಭದಲ್ಲಿ ಸಂಸ್ಥೆಯ ಪಾಲುದಾರರಾದ ಮೊಹಮ್ಮದ್ ಅಶ್ರಫ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು .