ಉಡುಪಿ: ಸೌರಭ ಸಪ್ತಮಿ ಯಕ್ಷಗಾನ ಸಪ್ತಾಹ 5ನೇ ದಿನ ಕಾರ್ಯಕ್ರಮ ಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ ಇದರ ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಲಕ್ಷ್ಮೀ ನಾರಾಯಣ ತುಂಗ ಅವರ ಅಧ್ಯಕ್ಷತೆಯಲ್ಲಿ ಶ್ರೀ ವೀರ ಮಾರುತಿ ರಂಗಸ್ಥಳದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಪ್ರಧಾನ ಪ್ರಾಯೋಜಕರು ವೀರಮಾರುತಿ ಸೌಂಡ್ಸ್ ನ ಪುಂಡಲೀಕ ಕಾಮತ್ ಅವರನ್ನು ಗೌರವಿಸಲಾಯಿತು
ಸಪ್ತಾಹಕ್ಕೆ ಸಂಪೂರ್ಣ ಸಹಕರಿಸಿದ ಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ ಇದರ ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀ ನಾರಾಯಣ ತುಂಗರನ್ನು ಸನ್ಮಾನಿಸಲಾಯಿತು. ಇಂದಿನ ಕಾರ್ಯಕ್ರಮದ ಪೋಷಕರು ವಿಶೇಶ್ವರ ಹೊಳ್ಳ ಕಾರ್ಕಡ ಇವರನ್ನು ಗೌರವಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ ಗುರುನರಸಿಂಹ ದೇವಸ್ಥಾನದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಲಕ್ಷ್ಮೀ ನಾರಾಯಣ ತುಂಗರು ಮಾತನಾಡಿ, ಯಕ್ಷ ಸೌರಭ ಯಕ್ಷಗಾನ ಸಂಘ ಬಹಳ ಸೊಗಸಾಗಿ ಸಪ್ತಾಹವನ್ನು ಆಯೋಜಿಸಿದ್ದಾರೆ ಈ ಸಪ್ತಾಹ ಅತ್ಯಂತ ಯಶಸ್ವಿಯಾಗುತ್ತಿರುಹುದು ದೇವಸ್ಥಾನದ ಆಡಳಿತ ಮಂಡಳಿ ಮತ್ತು ಸುತ್ತಮುತ್ತಲಿನ ಯಕ್ಷನಾಗಾಭಿಮಾನಿಗಳಿಗೆ ಬಹಳಷ್ಟು ಸಂತಸ ತಂದಿದೆ ಮುಂದಿನ ದಿನಗಳಲ್ಲಿ ಹೆಚ್ಚಿನ ಸಹಕಾರ ನೀಡುಹುದಾಗಿ ಪ್ರೇರಣೆಯ ಮಾತುಗಳನ್ನಾಡಿದರು.
ವಿಸ್ತಾರ ನ್ಯೂಸ್ ಟಿವಿ ವಾಹಿನಿಯ ಜಿಲ್ಲಾ ವರದಿಗಾರ ಅಶ್ವಥ್ ಆಚಾರ್ಯ ಮಾತನಾಡಿ, ಯಕ್ಷಗಾನ ಸಂಸ್ಕಾರ ನೀಡುವ ಕಲೆ ಪ್ರತಿಯೊಬ್ಬರೂ ಅವರವರ ಮಕ್ಕಳಿಗೆ ಯಕ್ಷಗಾನವನ್ನು ಮೌಲ್ಯ ಶಿಕ್ಷಣವಾಗಿ ನೀಡಬೇಕು ಎಂದು ತಿಳಿಸಿದರು. ಸಪ್ತಾಹವನ್ನು ಆಯೋಜಿಸಿದ ಯಕ್ಷಸೌರಭ ಸಂಘಕ್ಕೆ ಧನ್ಯವಾದ ತಿಳಿಸಿದರು.
ಯಡಾಡಿ ಮತ್ಯಾಡಿ ಯಕ್ಷಗಾನ ಸಂಘದ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ದಶಮಾನಪೂರ್ವ ಸೌರಭದ ಈ ಕಾರ್ಯಕ್ರಮ ಉಡುಪಿ ಜಿಲ್ಲೆಯ ಎಲ್ಲಾ ಯಕ್ಷಗಾನ ಸಂಘಗಳಿಗೆ ಮಾದರಿಯಾಗಿದೆ ಎಂದರು.
ಸೌರಭದ ಹಿರಿಯ ಕಲಾವಿದರು ಗೋಪಾಲಕೃಷ್ಣ ಪೈ, ರಾಮಾಂಜನೇಯ ಸೌಹಾರ್ದ ಸಹಕಾರಿಯ ಉಪಾಧ್ಯಕ್ಷ ಮಹಾಬಲ ಕುಂದರ್ ಉಪಸ್ಥಿತರಿದ್ದರು
ಸಂಘದ ಸದಸ್ಯ ರಾಜೇಶ್ ಕರ್ಕೇರ ನಿರೂಪಿಸಿದರು. ಪ್ರಶಾಂತ್ ಕೊಳಂಬೆ ಸ್ವಾಗತಿಸಿದರು. ವಿಘ್ನಶ್ ದೇವಾಡಿಗ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಪ್ರಸಾದ್ ಮೊಗೇಬೆಟ್ಟು ನಿರ್ದೇಶನದಲ್ಲಿ “ಶಶಿಪ್ರಭಾ ಪರಿಣಯ ”ಯಕ್ಷಗಾನ ಪ್ರದರ್ಶನಗೊಂಡಿತು.