ಸೌದಿ ಅರೇಬಿಯಾದಲ್ಲಿ ಭೀಕರ ರಸ್ತೆ ಅಪಘಾತ: ಉಳ್ಳಾಲದ ತಾಯಿ, ಮಗು ಸ್ಥಳದಲ್ಲೇ ಮೃತ್ಯು.

ಉಳ್ಳಾಲ: ಸೌದಿ ಅರೇಬಿಯಾದ ದಮಾಮ್‌ ಬಳಿ ಶುಕ್ರವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಉಳ್ಳಾಲ ನಿವಾಸಿಯಾಗಿದ್ದ ತಾಯಿ ಹಾಗೂ ಮಗು ಸ್ಥಳದಲ್ಲೇ ಮೃತಪಟ್ಟಿದೆ. ಮೃತರನ್ನು ಹೈದರ್‌ಉಳ್ಳಾಲ್‌ ಅವರ ಪುತ್ರಿ ಸಫಾ ಫಾತಿಮಾ (30) ಹಾಗೂ ಆಕೆಯ ಎರಡೂವರೆ ವರ್ಷದ ಮಗ ಲಯನ್‌ ಎಂದು ಗುರುತಿಸಲಾಗಿದೆ.

ಮದೀನದಿಂದ ಕಾರಿನಲ್ಲಿ ಸಫಾ ಅವರು ಪತಿ ಮಲಪುರಂ ಆರಿ ಕೋಡ್‌ ಸ್ವದೇಶಿ ಸುಹೈಲ್‌ (35) ಮತ್ತು ಸಹೋದರ ಮುಹವಿಯ (23) ಜತೆಗೆ ದಮಾವನಲ್ಲಿರುವ ಹೈದರ್‌ ಅವರ ಮನೆಗೆ ತೆರಳುತ್ತಿದ್ದರು.

ಕಾರು ಚಲಾಯಿಸುತ್ತಿದ್ದ ಮುಹವಿಯ ನಿದ್ದೆಗೆ ಜಾರಿದ್ದೇ ಅಪಘಾತಕ್ಕೆ ಕಾರಣವಾಗಿದೆ. ಸುಹೈಲ್‌, ಮಕ್ಕಳಾದ ಅಬ್ದುಲ್‌ ಮಲಿಕ್‌ (7), ಅಬ್ದುಲ್‌ ರಹಿಮಾನ್‌ (6), ಅಹ್ಮದ್‌ (5), ಮುಹವಿಯ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.