ಕುಂದಾಪುರ: ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಶ್ರೀ ವಿನಾಯಕ ಚತುರ್ಥಿ ಹಾಗೂ ಅಷ್ಟೋತ್ತರ ಸಹಸ್ರ ನಾಲಿಕೇರ ಗಣಯಾಗವು ಸೆ.7ರಂದು ಸಂಪ್ರದಾಯದಂತೆ ಜರಗಲಿದೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸೆ.6ರಂದು ಪೂರ್ವಾಹ್ನ ಗಂಟೆ 10 ಗಂಟೆಗೆ ಉಪ್ಪಿನಂಗಡಿ, ರಾಮಕುಂಜ ಪುತ್ತೂರು ಶ್ರೀ ಗುರುಸಾರ್ವಭೌಮ ಮಹಿಳಾ ಭಜನ ಮಂಡಳಿ ಇವರಿಂದ ಭಜನೆ, ಮಧ್ಯಾಹ್ನ ಗಂಟೆ 3ರಿಂದ 5ರ ತನಕ ಕುಂಭಾಶಿ ಆನೆಗುಡ್ಡೆ ಶ್ರೀ ವಿಶ್ವೇಶ್ವರ ಮಹಿಳಾ ಭಜನ ಮಂಡಳಿಯವರಿಂದ ಭಜನೆ ಹಾಗೂ ಸಂಜೆ ಗಂಟೆ 5ರಿಂದ ಮಂಗಳೂರಿನ ಕೋಡಿಕಲ್ ಸರಯೂ ಬಾಲ ಯಕ್ಷವೃಂದ ಇವರಿಂದ ಯಕ್ಷಗಾನ “ಗಣೇಶ ಮಹಿಮೆ’ ಪ್ರದರ್ಶನಗೊಳ್ಳಲಿದೆ.
ಸೆ.7ರಂದು ಸಂಜೆ ಗಂಟೆ 4ರಿಂದ 6ರ ತನಕ ಹಿಂದೂಸ್ತಾನಿ ಗಾಯಕ ಪ್ರದೀಪ್ ಕುಕ್ಕುಡೆ ಮತ್ತು ಬಳಗ (ಸಪ್ತಸ್ವರ ಸಂಗೀತ ಬಳಗ) ಕುಕ್ಕುಡೆ ಇವರಿಂದ “ದಾಸ ಸಾಹಿತ್ಯ ಹಾಗೂ ಸುಗಮ ಸಂಗೀತ’ ಹಾಗೂ ಸಂಜೆ ಗಂಟೆ 6ರಿಂದ 8ರ ತನಕ ಯಕ್ಷತರಂಗ ವ್ಯವಸಾಯಿ ಯಕ್ಷ ತಂಡ ಕೋಟ ಇವರಿಂದ ಯಕ್ಷಗಾನ “ಕೃಷ್ಣಾರ್ಜುನ’ ಮತ್ತು ರಾತ್ರಿ ಗಂಟೆ 10ಕ್ಕೆ ಶ್ರೀ ದಶಾವತಾರ ಸೇವೆಯಾಟ (ವಿವಿಧ ಕಲಾವಿದರ ಕೂಡುವಿಕೆಯಿಂದ) ಇವರಿಂದ ಯಕ್ಷಗಾನ ಬಯಲಾಟ “ದಕ್ಷ ಯಜ್ಞ’ ಪ್ರದರ್ಶನಗೊಳ್ಳಲಿದೆ ಎಂದು ದೇಗುಲದ ಆಡಳಿತ ಧರ್ಮದರ್ಶಿ ಕೆ. ಶ್ರೀರಮಣ ಉಪಾಧ್ಯಾಯರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.