ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ತರಬೇತಿ ಮತ್ತು ನಿಯೋಜನೆ ಘಟಕದ ಮುಖ್ಯಸ್ಥ ಹಾಗೂ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ (ಎಐಇಟಿ) ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಹಿರಿಯ ಸಹಾಯಕ ಪ್ರಾಧ್ಯಾಪಕ ಸುಶಾಂತ್ ಅನಿಲ್ ಲೋಬೊ ‘ಡಿಸೈನ್ ಆ್ಯಂಡ್ ಇಂಪ್ಲಿಮೆಂಟೇಷನ್ ಆಫ್ ಎಂಇಎಂಎಸ್ ಪೀಜೋಎಲೆಕ್ಟ್ರಿಕ್ ವೈಬ್ರೇಷನ್ ಸೆನ್ಸಾರ್’ (ಎಂಇಎಂಎಸ್ ಪಿಜೋಎಲೆಕ್ಟ್ರಿಕ್ ಕಂಪನ ಸಂವೇದಕಗಳ ವಿನ್ಯಾಸ ಮತ್ತು ಅನುಷ್ಠಾನ) ವಿಷಯ ಕುರಿತು ಮಂಡಿಸಿದ ಪ್ರೌಢ ಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಪಿಎಚ್‌ಡಿ ಪದವಿ ಮಾನ್ಯ ಮಾಡಿದೆ.
(ಎಐಇಟಿ)ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಡಿ.ವಿ. ಮಂಜುನಾಥ ಮಾರ್ಗದರ್ಶನ ನೀಡಿದ್ದರು. ಚಿಕ್ಕಮಗಳೂರಿನ ಆ್ಯಂಟನಿ ಲೋಬೊ ಮತ್ತು ಲಿಲ್ಲಿ ಲೋಬೊ ದಂಪತಿಯ ಪುತ್ರ ಸುಶಾಂತ ಅನಿಲ್ ಲೋಬೊ ಎಐಇಟಿ ಹಳೆ ವಿದ್ಯಾರ್ಥಿ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಉಚಿತ ಬೃಹತ್ ಉದ್ಯೋಗ ಮೇಳ ‘ಆಳ್ವಾಸ್ ಪ್ರಗತಿ’ಯ ಯಶಸ್ವಿ ಆಯೋಜನೆಯಲ್ಲಿ ಹಲವು ವರ್ಷಗಳಿಂದ ಲೋಬೊ ತೊಡಗಿಸಿಕೊಂಡಿದ್ದಾರೆ.