ಸುಳ್ಯ: ವಿದ್ಯುತ್ ಕಂಬ ಹತ್ತಿ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ಶಾಕ್ ತಗಲಿ ವಿದ್ಯುತ್ ಕಂಬದಲ್ಲೇ ಕಾರ್ಮಿಕನೋರ್ವ ಸಾವನ್ನಪ್ಪಿದ ಘಟನೆ ಜೂನ್ 17ರಂದು ಸುಳ್ಯದ ಅಲೆಕ್ಕಾಡಿ ಬಳಿಯ ಪಾರ್ಲ ಎಂಬಲ್ಲಿ ನಡೆದಿದೆ.
ಬೆಳ್ತಂಗಡಿ ನಿವಾಸಿ ಪ್ರಕಾಶ (29) ಮೃತ ದುರ್ದೈವಿ.
ಕಡಬ ಮೂಲದ ಸಂಸ್ಥೆಯ ವತಿಯಿಂದ ಸುಳ್ಯ, ಮುರುಳ್ಯದ ಅಲೆಕ್ಕಾಡಿಯ ಪಾರ್ಲ ಎಂಬಲ್ಲಿ ಕಾರ್ಮಿಕರು ಮೆಸ್ಕಾಂ ಪಂಜ ಸೆಕ್ಷನ್ ವ್ಯಾಪ್ತಿಯ ವಿದ್ಯುತ್ ಲೈನ್ ದುರಸ್ತಿ ಕಾರ್ಯ ಮಾಡುತ್ತಿದ್ದರು. ಈ ವೇಳೆ ಕಂಬ ಹತ್ತಿ ಕೆಲಸ ಮಾಡುತ್ತಿದ್ದಾಗ ಕಿರುಚಿದ್ದಾನೆ. ಬಳಿಕ ಕಾರ್ಮಿಕರು ಬಂದು ನೋಡಿದಾಗ ಅವರು ಕಂಬದಲ್ಲೇ ಸಿಲುಕಿಕೊಂಡಿರುವುದು ಕಂಡುಬಂದಿದೆ.
ಪ್ರಕಾಶ್ ವಿದ್ಯುತ್ ಹರಿದು ಅಥವಾ ಬೇರೆ ಯಾವುದೋ ಕಾರಣದಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.