ಸುರತ್ಕಲ್: ಉದ್ಯಮಿ ಹೇಮಂತ್ ಕುಮಾರ್(56) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ನಿಧನರಾದರು.
ಸುರತ್ಕಲ್’ನ ಕಡಂಬೋಡಿ ನಿವಾಸಿಯಾಗಿದ್ದ ಇವರು ಸುರತ್ಕಲ್ ಬ್ಲಾಕ್ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಹಾಲಿ ಬ್ಲಾಕ್ ಕಾಂಗ್ರೆಸ್ ಉಪಾ ಧ್ಯಕ್ಷ, ಜಿಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದರು.
ಉಪ್ಪಿನಂಗಡಿಯಲ್ಲಿ ಎಲೆಕ್ನಿಕಲ್ ಡಿಪ್ಲೋಮವರೆಗೆ ಶಿಕ್ಷಣ ಪೂರೈಸಿ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಎಲೆಕ್ಟಿಕಲ್ ಉದ್ಯಮ ನಡೆಸಿದ್ದರು. ಕೆಎಸ್‌ಐ ಮಾಜಿ ಕೋಶಾಧಿಕಾರಿ, ಕೆಐಎ ಆಡಳಿತ ಸಮಿತಿ ಸದಸ್ಯರಾಗಿದ್ದರು. ಅವರು ಅವಿವಾಹಿತರಾಗಿದ್ದು ತಾಯಿ, ಮೂವರು ಸಹೋದರರು, ಇಬ್ಬರು ಸಹೋದರಿ ಇದ್ದಾರೆ. ವಿನಯ್ ಕುಮಾರ್ ಸೊರಕೆ, ಮೊಯಿದೀನ್ ಬಾವಾ, ಇನಾಯತ್ ಆಲಿ, ಕೆಎಐನ ಅಧ್ಯಕ್ಷ ಅರುಣ್ ಪಡಿಯಾರ್,ಮಾಜಿ ಅಧ್ಯಕ್ಷ ಹೆನ್ರಿ ಬ್ರಿಟ್ಟೋ ಅಂತಿಮ ದರ್ಶನ ಪಡೆದರು.