ಉಡುಪಿ: ಕಾಶ್ಮೀರದಲ್ಲಿ ಹಿಂದುಗಳ ಮೇಲೆ ಉಗ್ರರ ಆಕ್ರಮಣ ಆತಂಕಕಾರಿಯಾಗಿದ್ದು, ಸರಕಾರ ಕೂಡಲೇ ಎಚ್ಚೆತ್ತುಕೊಂಡು ದುಷ್ಕೃತ್ಯಗಳ ಮೂಲಬೇರನ್ನು ಕಿತ್ತೆಸೆಯಬೇಕು ಎಂದು ಉಡುಪಿ ಪರ್ಯಾಯ ಪುತ್ತಿಗೆ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಹಿಂದೂಗಳ ಮೇಲಿನ ದಾಳಿಯಿಂದ ಸನಾತನ ಧರ್ಮದ ಅಸ್ತಿತ್ವ ಭಾರತದಲ್ಲಿ ನಾಶವಾಗುವ ಆತಂಕದಲ್ಲಿದೆ. ದೇಶದಲ್ಲಿ ಕಾಣದ ಕೈಗಳು ಸಕ್ರಿಯವಾಗಿ ಕೆಲಸ ಮಾಡುತ್ತಿವೆ. ಹಿಂದುಗಳನ್ನು ನಾಶ ಮಾಡುವುದೇ ಇವರ ಹುನ್ನಾರ ಎಂಬುದು ಇದರಿಂದ ಸ್ಪಷ್ಟವಾಗಿದೆ. ಇದು ಭಯೋತ್ಪಾದನೆ ಅಲ್ಲ ಜಾಗತಿಕ ಷಡ್ಯಂತ್ರ ಎಂದರು.
ಕೇರಳ, ಪಶ್ಚಿಮ ಬಂಗಾಳ, ಕಾಶ್ಮೀರದ ಘಟನೆಯಲ್ಲಿ ಮಾಸ್ಟರ್ ಪ್ಲಾನ್ ವರ್ಕ್ ಮಾಡುತ್ತಿದೆ. ಹೀಗಾಗಿ ಉಗ್ರವಾದಿ ಸಮಸ್ಯೆಯನ್ನು ಪೂರ್ಣ ನಿರ್ಮೂಲನೆ ಮಾಡಬೇಕು. ಕೇಂದ್ರ ಸರ್ಕಾರ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.












