ಸರಕಾರದ ಸುತ್ತೋಲೆ, ಕಾಯ್ದೆಗೆ ಆಗುವ ತಿದ್ದುಪಡಿ ಬಗ್ಗೆ ಅರಿತುಕೊಳ್ಳಿ: ಜಯಕರ ಶೆಟ್ಟಿ ಇಂದ್ರಾಳಿ

ಉಡುಪಿ: ಪ್ರತಿಯೊಂದು ಸಹಕಾರಿ ಸಂಸ್ಥೆಗೆ ಅದರದ್ದೇ ಆದ ಬೈಲಾ ಇದೆ. ಅದನ್ನು ಓದಿ ಅದರ ವಿಚಾರ ತಿಳಿದುಕೊಳ್ಳಬೇಕು. ಸರಕಾರದಿಂದ ಬರುವ ಸುತ್ತೋಲೆ, ಕಾಲಕಾಲಕ್ಕೆ ಆಗುವ ತಿದ್ದುಪಡಿ ಅರಿತು ಆಡಳಿತ ಮಂಡಳಿಯ ಸಭೆಯಲ್ಲಿ ಇಡಬೇಕು. ಅದು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜವಾಬ್ದಾರಿ ಎಂದು ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ. ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಉಡುಪಿ ದ.ಕ. ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಮಹಾಮಂಡಳಿ ದಕ್ಷಿಣ ಕನ್ನಡ ಮತ್ತು ಸಹಕಾರ ಇಲಾಖೆ, ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಮೀನುಗಾರಿಕಾ ಸಹಕಾರ ಸಂಘಗಳ ಪದಾಧಿಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಳಿಗೆ ನಗರದ ದಿ ಓಷ್ಯನ್ ಪರ್ಲ್ ಹೋಟೆಲ್ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ ಒಂದು ದಿನದ ರಾಜ್ಯಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು‌.

ಮೈಕ್ರೋ ಫೈನಾನ್ಸ್ ಕಾಯಿದೆಯಡಿ ಬಾರದ ಸಹಕಾರ ಸಂಘಗಳು ಸಹಕಾರ ನ್ಯಾಯಾಲಯ ವ್ಯವಸ್ಥೆ ಮೂಲಕ ತ್ವರಿತವಾಗಿ ಸಾಲ, ಬಾಕಿ ವಸೂಲಿಗೆ ಅವಕಾಶವಿದೆ ಎಂದರು.

ದಕ ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಮಹಾಮಂಡಳಿ ವ್ಯವಸ್ಥಾಪಕ ನಿರ್ದೇಶಕ ದರ್ಶನ್, ಉಡುಪಿ ಜಿಲ್ಲಾ ಲೆಕ್ಕ ಪರಿಶೋಧನಾ ಇಲಾಖೆ ಉಪನಿರ್ದೇಶಕ ರೇಣುಕಾ ಜಿ., ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಹರೀಶ್ ಕಿಣಿ ಅಲೆವೂರು, ದಕ ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಮಹಾಮಂಡಳಿ ನಿರ್ದೇಶಕರಾದ ಚಿದಾನಂದ, ಜಯರಾಜ್ ಮೆಂಡನ್, ದಕ್ಷಿಣ ಕನ್ನಡ ಮೀನುಗಾರಿಕಾ ಇಲಾಖೆ ಜಂಟಿ ನಿರ್ದೇಶಕ ವಿವೇಕ್ ಆರ್., ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಸಂಶೋಧನೆ ಮತ್ತು ಮೌಲ್ವೀಕರಣ ವಿಭಾಗ ನಿರ್ದೇಶಕ ಎನ್.ಎಂ.ಶಿವಕುಮಾರ್ ಉಪಸ್ಥಿತರಿದ್ದರು.