ಕಳತ್ತೂರು:ಕಲಿಯುಗದಲ್ಲಿ ಬಹು ಕಾರ್ಣಿಕದಿಂದ ಮೆರೆಯುವ ಬ್ರಹ್ಮ ಬೈದೆರ್ಕಳರು ಇದುವರೆಗೂ ಹತ್ತು ಸಮಸ್ತರು ಯಾವುದೇ ಕಾರ್ಯಕ್ರಮದ ವಿಚಾರದಲ್ಲಿ ಸಾನಿಧ್ಯದಲ್ಲಿ ಮಾಡಿದ ಪ್ರಾರ್ಥನೆಗೆ ಒಲಿದು ಬಂದು ಕಾರ್ಯಕ್ರಮವನ್ನು ಅದ್ಭುತವೆಂಬತೆ ಯಶಸ್ಸು ಮಾಡಿಸಿಕೊಟ್ಟ ಶಕ್ತಿಗಳು.
ಅಂದಿನ ಮುಷ್ಠಿ ಕಾಣಿಕೆ ಸಮರ್ಪಣ ಕಾರ್ಯಕ್ರಮ ಮೊದಲ ಹಂತದದಲ್ಲಿ ಸಮಸ್ತ ಗ್ರಾಮಸ್ಥರ ಸಾವಿರ ಸಂಖ್ಯೆಯ ಕೂಡುವಿಕೇಯೊಂದಿಗೆ ಯಶಸ್ಸು ಕಂಡರೆ ಇಂದು ವಿಜ್ಞಾಪಣಾ ಪತ್ರ ಬಿಡುಗಡೆ ಕಾರ್ಯಕ್ರಮವು ಗಣ್ಯರ, ದಾನಿಗಳ ಗುತ್ತು ಬರ್ಕೆ ನಟ್ಟಿಲ್ ಗರಡಿಮನೆ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ದಾನ ಧರ್ಮದ ಸಹಕಾರದ ಭರವಸೆ ಮಾತ್ರವಲ್ಲದೆ ಇಂದಿನ ದಿನ ಹಲವು ಭಕ್ತರಿಂದ ಸಾನಿಧ್ಯ ಅಭಿವೃದ್ಧಿಯ ಸುಮಾರು ರೂ 40 ಲಕ್ಷ ಖರ್ಚಿನ ವೆಚ್ಚವನ್ನು ಭರಿಸುವ ಧೃಡ ಸಂಕಲ್ಪದ ಧೈರ್ಯದ ಮಾತುಗಳಿಂದ ಜೀರ್ಣೋದ್ದಾರ ಸಮಿತಿಗೆ ಆನೆಬಲ ಬಂದಂತಾಗಿದೆ.
ವಿಜ್ಞಾಪಣಾ ಪತ್ರ ಬಿಡುಗಡೆ ಕಾರ್ಯಕ್ರಮವು ಬ್ರಹ್ಮ ಬೈದೆರ್ಕಳರ ಸಾನಿಧ್ಯದಲ್ಲಿ ಪೂಜೆ ಹಾಗೂ ಪ್ರಾರ್ಥನೆಯೊಂದಿಗೆ ಪ್ರಾರಂಭ ಮಾಡಲಾಯಿತು.ಧಾರ್ಮಿಕ ಸಭಾ ಕಾರ್ಯಕ್ರಮ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಜಯ ಕೃಷ್ಣ ಆಳ್ವ ಪಾದೂರು ಗುತ್ತು ಇವರ ಅಧ್ಯಕ್ಷತೆಯಲ್ಲಿ ಜರಗಿತು.
ಜೊತೆ ಕಾರ್ಯದರ್ಶಿ ಸುಕೇಶ್ ಪೂಜಾರಿ ವಳದೂರು ಸ್ವಾಗತಿಸಿದರು.ಗುರುರಾಜ್ ಪೂಜಾರಿ ಹೆಜಮಾಡಿ ಪಾತ್ರಿಗಳು ಅರ್ಚಕರು ಇವರು ಪ್ರಾಸ್ತವಿಕ ಭಾಷಣ ಮಾಡಿದರು
ಕಾಪು ಕ್ಷೇತ್ರದ ಜನಪ್ರಿಯ ಶಾಸಕರು ಕಾರ್ಯಕ್ರಮ ಉದ್ಘಾಟಿಸಿದರು.ಕರ್ನಾಟಕ ಸರಕಾರದ ಮಾಜಿ ಸಚಿವರು, ಕ್ಷೇತ್ರದ ಮಾಜಿ ಶಾಸಕರಾದ ವಿನಯ್ ಕುಮಾರ್ ಸೊರಕೆ ವಿಜ್ಞಾಪಣಾ ಪತ್ರ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ
ಜೀರ್ಣೋದ್ದಾರ ಸಮಿತಿಯ ಗೌರವ ಅಧ್ಯಕ್ಷರುಗಳಾದ
ಜಗದೀಶ್ ಶೆಟ್ಟಿ ನಡಿಗುತ್ತು ರವೀಂದ್ರ ಜಿ ಶೆಟ್ಟಿ ಬರೆಬೆಟ್ಟು ಗುತ್ತು
ಶ್ರೀ ಕರುಣಾಕರ ಪೂಜಾರಿ ನಟ್ಟಿಲ್ ಜೀರ್ಣೋದ್ದಾರ ಸಮಿತಿಯ ಗೌರವ ಸಲಹೆಗಾರರಾದ ಸುಧಾಕರ್ ಡಿ ಅಮೀನ್ ಪಾಂಗಳ
ಅರುಣಾಕರ್ ಡಿ ಶೆಟ್ಟಿ ಪ್ರಸಾದ್ ಶೆಟ್ಟಿ ವಳದೂರು ಅಧ್ಯಕ್ಷರು ಮಜೂರು ಗ್ರಾಮ ಪಂಚಾಯತ್ ಜನಾರ್ಧನ ಆಚಾರ್ಯ ಅಧ್ಯಕ್ಷರು ಕುತ್ಯಾರ್ ಗ್ರಾಮ ಪಂಚಾಯತ್ ಗೋಪಾಲ ಪೂಜಾರಿ ಅಧ್ಯಕ್ಷರು ಬ್ರಹ್ಮ ಶ್ರೀ ನಾರಾಯಣ ಗುರು ಮಂದಿರ (ರಿ) ಶಿರ್ವ
ಸಂತೋಷ ಕುಮಾರ್ ಬೈರಂಪಳ್ಳಿ ಟ್ರಸ್ತಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಿಲ್ ರಂಗನಾಥ ಶೆಟ್ಟಿ ಬರೆಬೆಟ್ಟು ಗುತ್ತು ಪ್ರಧಾನ ಕಾರ್ಯದರ್ಶಿ ಜೀರ್ಣೋದ್ದಾರ ಸಮಿತಿ ವಿಶ್ವನಾಥ ಅಮೀನ್ ಅರ್ಚಕರು, ಗರಡಿಮನೆ ಕಳತ್ತೂರು,ಸಮಿತಿಯ ಉಪಾಧ್ಯಕ್ಷರಾದ ಪ್ರಕಾಶ್ ಪಾಲಮೆ ಧನ್ಯವಾದ ಸಮರ್ಪಣೆ ಮಾಡಿದರು.
ಜೊತೆ ಕಾರ್ಯದರ್ಶಿ ಅತಿಥ್ ಸುವರ್ಣ ಕಾರ್ಯಕ್ರಮ ನಿರೂಪಣೆ ಮಾಡಿದರು.ಬಂದಂತಹ ಭಕ್ತರಿಗೆ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.












