ಶ್ರೀ ಶಕ್ತಿ ಮಹಾಗಣಪತಿ ಶ್ರೀ ಮಹಾಕಾಳಿ, ಶ್ರೀ ಮಂತ್ರದೇವತೆ, ಶ್ರೀ ದೇವಿ ಕಲ್ಕುಡ, ಪುಣ್ಯ ಕ್ಷೇತ್ರದಲ್ಲಿ ತಾ 07/02/2025 ಬೆಳಿಗ್ಗೆ ಮಹಾಕಾಳಿ ಅಮ್ಮನವರಿಗೆ ಸೀಮಂತ ಭಕ್ಷೆ ಸೇವೆ ಹಾಗೂ ಮಹಾಕಾಳಿ ದರ್ಶನ ಸೇವೆ ಹಾಗೂ ಮಹಾಗಣಪತಿ ಹಾಗೂ ಮಹಾಕಾಳಿ ಅಮ್ಮನವರಿಗೆ ರಂಗ ಪೂಜೆ ಕ್ಷೇತ್ರದ ಧರ್ಮದರ್ಶಿ ಭೋಜ ಪಾತ್ರಿ ಕುತ್ಯಾರು ಇವರ ಧಾರ್ಮಿಕ ವಿಧಿ ವಿಧಾನದೊಂದಿಗೆ ನಡೆಯಿತು.

ಕ್ಷೇತ್ರದ ಆಡಳಿತ ಸಮಿತಿ ಸದಸ್ಯರಾದ ಶಿವರಾಜ್ ಪಾತ್ರಿ, ಚಂದ್ರಶೇಖರ್ ಮೂಲ್ಯ ನ್ಯಾಯವಾದಿ ಜಗದೀಶ್ ಮೂಲ್ಯ ಕುತ್ಯಾರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.












