ಉಡುಪಿ: ದೊಡ್ಡನ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ನಾಗಾಲಯದ ನಾಗರಾಜ ನಾಗರಾಣಿಯರ ಸನ್ನಿಧಾನದಲ್ಲಿ ಇದೇ ತಿಂಗಳ ತಾರೀಕು 9ರ ಶುಕ್ರವಾರದಂದು ನಾಗರ ಪಂಚಮಿ ಯು ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಅರ್ಚಕ ಅನೀಶ್ ಆಚಾರ್ಯ ಅವರ ನೇತೃತ್ವದಲ್ಲಿ ನೆರವೇರಲಿರುವುದು..
ಆ ಪ್ರಯುಕ್ತ ಸನ್ನಿಧಾನದಲ್ಲಿ ವಿಶೇಷ ಪೂಜೆ ತನು ತಂಬಿಲ ಸೇವೆ ಪಂಚಾಮೃತ ಅಭಿಷೇಕ ಪ್ರಸನ್ನ ಪೂಜೆ ನೆರವೇರಲಿರುವುದು ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ ತಿಳಿಸಿರುತ್ತಾರೆ