ಉಡುಪಿ : ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ನಾಗಾಲಯದಲ್ಲಿರುವ ಷಟ್ ಶಿರ ಸುಬ್ರಮಣ್ಯ ಸ್ವಾಮಿಯ ಪ್ರತಿಷ್ಠ ವರ್ಧಂತಿ ಮಹೋತ್ಸವವೂ ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇದಮೂರ್ತಿ ಆನಂದ್ ಭಟ್ ಹೇರೂರು ನೇತೃತ್ವದಲ್ಲಿ ಭಕ್ತರ ಸಮಕ್ಷಮದಲ್ಲಿ ಸಂಪನ್ನಗೊಂಡಿತು.
ಆ ಪ್ರಯುಕ್ತ ಧಾರ್ಮಿಕ ವಿಧಿಗಳಾಗಿ ಪಂಚವಂಶತೆ ಕಲಶ ಆರಾಧನೆ ಪ್ರಧಾನ ಹೋಮ ಶ್ರೀ ಸುಬ್ರಮಣ್ಯ ಸಹಸ್ರನಾಮ ಪಾಯಸ ಹೋಮ ಪವಮಾನ ಸೂಕ್ತ ಹೋಮ ಕಲಶ ಅಭಿಷೇಕ ಬ್ರಾಹ್ಮಣರಾಧನೆ ಬ್ರಾಹ್ಮಣ ಸುವಾಸಿನಿಯರ ಆರಾಧನೆ ಕನ್ನಿಕರಾಧನೆ ಪ್ರಸನ್ನ ಪೂಜೆ ಮಹಾ ಅನ್ನಸಂತರ್ಪಣೆ ಹಾಗೂ ಸಂಜೆ ರಂಗ ಪೂಜಾ ಮಹೋತ್ಸವ ನೆರವೇರಿತು ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ.