ಶಿರಾಡಿ ಘಾಟ್ ರಸ್ತೆಯಲ್ಲಿ ಮತ್ತೆ ಭಾರೀ ಭೂಕುಸಿತ: ವಾಹನ ಸಂಚಾರ ಸ್ಥಗಿತ, ಈ ಮಾರ್ಗದಲ್ಲಿ ಸಂಚರಿಸಿ..!

ಹಾಸನ: ಭಾರಿ ಮಳೆ ಸುರಿಯುತ್ತಿರುವ ಹಿನ್ನಲೆ, ಶಿರಾಡಿ ಘಾಟ್ ರಸ್ತೆಯಲ್ಲಿ ಗುಡ್ಡ ಕುಸಿತವಾಗಿದ್ದು, ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿಘಾಟ್​ನಲ್ಲಿ ಘಟನೆ ನಡೆದಿದೆ. ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಗುಡ್ಡ ಕುಸಿತವಾಗಿದೆ.
ಜಿಲ್ಲೆಯ ಸಕಲೇಶಪುರ ತಾಲೂಕಿನ ದೊಡ್ಡತಪ್ಲುನಲ್ಲಿ ಗುಡ್ಡ ಕುಸಿದು ಮಣ್ಣಿನಡಿ ಕೆಲವು ವಾಹನಗಳು ಸಿಲುಕಿವೆ. ಗುಡ್ಡ ಕುಸಿತದ ರಭಸಕ್ಕೆ ಕಂಟೇನರ್ ಪಲ್ಟಿಯಾಗಿದ್ದು, ಮತ್ತೊಂದು ಬೃಹತ್ ಕಂಟೇನರ್ ಮಣ್ಣಿನಡಿ ಸಿಲುಕಿದೆ. ಸಂಜೆ ವೇಳೆ ಮಳೆ ಹೆಚ್ಚಾಗಿರುವುದರಿಂದ ಗುಡ್ಡ ಕುಸಿದಿದ್ದು, ಶಿರಾಡಿಘಾಟ್ ರಸ್ತೆಯಲ್ಲಿ ಮತ್ತೆ ವಾಹನ ಸಂಚಾರ ಬಂದ್ ಆಗಿದೆ.
ಸಂಚರಿಸುವ ಮಾರ್ಗ:
ಮಂಗಳೂರು – ಬೆಂಗಳೂರು ಸಂಚಾರಕ್ಕೆ ಇದೀಗ ಶಿರಾಡಿ ಸಂಪೂರ್ಣ ಬಂದ್ ಆಗಿದೆ. ಆದ್ದರಿಂದ ತುರ್ತು ತೆರಳುವವರು ಸಂಪಾಜೆ – ಮಡಿಕೇರಿಯಾಗಿ ಅಥವಾ ಬೆಳ್ತಂಗಡಿ – ಚಾರ್ಮಾಡಿ ಘಾಟ್ ರಸ್ತೆಯ ಮೂಲಕ ತೆರಳಬಹುದು ಎಂದು ಮಾಹಿತಿ ಲಭ್ಯವಾಗಿದೆ.