ಉಡುಪಿ: ತಾ 31.08.2024ರಂದು ಅಸೋಸಿಯೇಷನ್ ಆಫ್ ಸರ್ಜನ್ಸ್ ಆಫ್ ಇಂಡಿಯಾ ಇದರ ಉಡುಪಿ ಶಾಖೆ, ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಶಾಖೆ, ಲಯನ್ಸ್ ಕ್ಲಬ್ ನ ಉಡುಪಿ ಶಾಖೆ ಹಾಗೂ ರಾಜೀವ್ ಗಾಂಧಿ ಹೆಲ್ತ್ ಯೂನಿವರ್ಸಿಟಿ ಇವರಿಂದ ಜಂಟಿಯಾಗಿ ಉಡುಪಿಯ ಖಾಸಗಿ ಆಸ್ಪತ್ರೆಗಳ ವೈದ್ಯೇತರ ಸಿಬ್ಬಂದಿಗಳಿಗೆ ತುರ್ತು ಚಿಕಿತ್ಸೆಯ ಸಮಯದಲ್ಲಿ ಪ್ರಾಣ ಉಳಿಸುವ ಬೇಸಿಕ್ ಲೈಫ್ ಸಪೋರ್ಟ ಇದರ ತರಬೇತಿ ಕಾರ್ಯಗಾರವನ್ನು ಉಡುಪಿಯ ಐಎಂಎ ಭವನದಲ್ಲಿ ನಡೆಸಲಾಯಿತು.
ಕಿಮ್ಸ್ ಹುಬ್ಬಳ್ಳಿ ಇದರ ತಜ್ಞ ವೈದ್ಯರಾದ ಡಾ.ಎಸ್ ವೈ ಮುಲ್ಕಿ ಪಾಟೀಲ್ ಹಾಗೂ ಡಾ. ಮಂಜುನಾಥ್ ನೇಕಾರ್ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ಸುಮಾರು ನೂರು ಜನಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಈ ತರಬೇತಿಯನ್ನು ನೀಡಲಾಯಿತು.
ಅಸೋಸಿಯೇಷನ್ ಆಫ್ ಸರ್ಜನ್ ಆಫ್ ಇಂಡಿಯಾ ಇವರು ಶಿಬಿರಾರ್ಥಿಗಳಿಗೆ ತರಬೇತಿಗೆ ಬೇಕಾದ ಉಪಕರಣಗಳನ್ನು ವ್ಯವಸ್ಥೆ ಮಾಡಿದ್ದರು. ಇದರ ನಿಯೋಜಿತ ರಾಜ್ಯಾಧ್ಯಕ್ಷ ಡಾ. ರಾಜಗೋಪಾಲ್ ಶೆಣೈ, ಉಡುಪಿ ಶಾಖೆಯ ಅಧ್ಯಕ್ಷರಾದ ಡಾ ವಿಶ್ವೇಶ್ವರ, ಕಾರ್ಯದರ್ಶಿ ಡಾ| ಜಿತಿನ್ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ್ಯೆ ಡಾ. ರಾಜಲಕ್ಷ್ಮಿ , ಕಾರ್ಯದರ್ಶಿ ಡಾ ಅರ್ಚನಾ ಭಕ್ತ ,ಲಯನ್ಸ ಕ್ಲಬ್ ನ ಅಧ್ಯಕ್ಷೆ ಶ್ರೀಮತಿ ಶಕೀಲಾ ಸಚಿನ್ ಹಾಗೂ ಹಿರಿಯ ವೈದ್ಯರಾದ ಡಾಕ್ಟರ್ ವೈ ಸುದರ್ಶನ್ ರಾವ್, ಡಾ| ಅಶೋಕ್ ಕುಮಾರ್ ಓಕುಡೆ, ಡಾ. ಕೇಶವ ನಾಯಕ್, ಡಾ. ಶರತ್ ಚಂದ್ರ ಉಪಸ್ಥಿತರಿದ್ದರು.