ಉಡುಪಿ: ಮಣಿಪಾಲದ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ನಡೆದಿದ್ದ ಲೈಂಗಿಕ, ಮಾನಸಿಕ ದೌರ್ಜನ್ಯದ ಹಿಂದೆ ಲವ್ ಜಿಹಾದ್ ನ ನೆರಳಿದೆ ಎಂದು ಸಂಘಟನೆಗಳು ಆರೋಪಿಸಿವೆ.
ಈ ಸಂಬಂಧ ಹಿಂದೂ ಸಂಘಟನೆಗಳು ಉಡುಪಿ ಎಸ್ ಪಿ ಡಾ. ಅರುಣ್ ಕುಮಾರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು. ಹಿಂದೂ ವೈದ್ಯ ವಿದ್ಯಾರ್ಥಿನಿಯನ್ನು ಮುಸ್ಲಿಂ ಯುವಕ ಪ್ರೀತಿಸುವ ನೆಪದಲ್ಲಿ ದೌರ್ಜನ್ಯ ನಡೆಸಿದ್ದಾನೆ. ಈ ಕುರಿತು ಸಮಗ್ರ ತನಿಖೆ ನಡೆಯಬೇಕು. ಇದರ ಹಿಂದೆ ಲವ್ ಜಿಹಾದ್ ಇದೆ. ಇದರಿಂದಾಗಿ ಹಿಂದೂ ಹೆಣ್ಣುಮಕ್ಕಳಿಗೆ ಸುರಕ್ಷತೆ ಇಲ್ಲ ಎಂಬ ಭಾವನೆ ಬರತೊಡಗಿದೆ.
ಅನ್ಯ ರಾಜ್ಯದ ಮುಸ್ಲಿಂ ಯುವಕ ಈ ಕೃತ್ಯ ನಡೆಸಿದ್ದು ಇದನ್ನು ಪೊಲೀಸರು ಸಮಗ್ರ ತನಿಖೆಗೆ ಒಳಪಡಿಸಬೇಕು. ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ನೀಡುವ ಮೂಲಕ ಮುಂದಿನ ದಿನಗಳಲ್ಲಿ ಇದು ಪುನರಾವರ್ತನೆ ಆಗದಂತೆ ನೋಡಿಕೊಳ್ಳಬೇಕು ಎಂದು ಹಿಂದೂ ಸಂಘಟನೆ ದುರ್ಗವಾಹಿನಿ ಒತ್ತಾಯಿಸಿದೆ.
ಬೈಟ್ : ಪೂರ್ಣಿಮಾ ಸುರೇಶ್ , ದುರ್ಗಾವಾಹಿನಿ