ಉಡುಪಿ: ರಾಜ್ಯ ಮತ್ತು ದೇಶದಾದ್ಯಂತ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜನ್ಮ ಜಯಂತಿಯನ್ನು ಆಚರಿಸಲಾಗುತ್ತಿದೆ. ಈ ಮೊದಲೇ ನಾವು ಹೇಳಿದಂತೆ ವಿಧಾನಸೌಧದ ಎದುರು ಬ್ರಹ್ಮಶ್ರೀ ನಾರಾಯಣ ಗುರುಗಳ ಪುತ್ಥಳಿಯನ್ನು ಸ್ಥಾಪಿಸಬೇಕು ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಒತ್ತಾಯ ಮಾಡಿದ್ದಾರೆ.
ನಾರಾಯಣ ಗುರುಗಳು ಕೇರಳದಲ್ಲಿ ಹುಟ್ಟಿ ಅಲ್ಲೇ ಹೋರಾಟಗಳನ್ನು ಮಾಡಿ ದೇಶಾದ್ಯಂತ ಮಠ ಮಂದಿರಗಳನ್ನು ಸ್ಥಾಪನೆ ಮಾಡಲು ಕಾರಣಕರ್ತರಾದವರು. ಒಂದೇ ದೇವರು ಒಂದೇ ಕುಲ ಎಂಬ ತತ್ವ ಸಾರಿ ನಮಗೆಲ್ಲಾ ಆದರ್ಶಪ್ರಾಯರಾದವರು. ಇನ್ನು ಮುಂದಾದರೂ ಅವರ ಪುತ್ಥಳಿ ಸ್ಥಾಪಿಸುವ ಮೂಲಕ ಅವರ ಗೌರವವನ್ನು ಎತ್ತಿ ಹಿಡಿಯಬೇಕು ಮತ್ತು ವಿಶ್ವದೆಲ್ಲೆಡೆ ಅದು ಪಸರಿಸುವಂತೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.