ಉಡುಪಿ: ರೋಟರಿ ಕ್ಲಬ್ ಮಣಿಪಾಲ, ರೋಟರಿ ಫೌಂಡೇಶನ್ ಜಿಲ್ಲಾ ನಿಧಿಯಿಂದ ಉಡುಪಿ ಸರಕಾರಿ ಮಹಿಳಾ ಹೈಸ್ಕೂಲ್ ಗೆ 5 ಲಕ್ಷಕ್ಕೂ ಹೆಚ್ಚಿನ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ಶೌಚಾಲಯದ ಉದ್ಘಾಟನೆಯನ್ನು ರೋಟರಿ ಜಿಲ್ಲೆ 3182 ರ ಜಿಲ್ಲಾ ಗವರ್ನರ್ ಬಿ ಸಿ ಗೀತಾ ರವರು ರಿಬ್ಬನ್ ಕಟ್ ಮಾಡಿ ಉದ್ಘಾಟಿಸಿದರು.
ಸಮಾಜಸೇವೆಯ ಮೂಲ ಉದ್ದೇಶದಿಂದ ರೋಟರಿ ಸಂಸ್ಥೆ ಮಹಿಳಾ ಶಿಕ್ಷಣಕ್ಕೆ ಪ್ರೋತ್ಸಾಹ ರೂಪದಲ್ಲಿ ವಿದ್ಯಾರ್ಥಿನಿಯರಿಗೆ ಶೌಚಾಲಯ ನಿರ್ಮಿಸಿಕೊಟ್ಟಿದೆ. ಅದನ್ನು ಸೂಕ್ತರೀತಿಯಲ್ಲಿ ಬಳಸಿ ಅದರ ಸ್ವಚ್ಛತೆ ಕಾಪಾಡಿ ಮುಂದಿನ ವಿದ್ಯಾರ್ಥಿಗಳಿಗೆ ದಾರಿದೀಪಗಳಾಗಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಶಾಸಕರಾದ ಯಶಪಾಲ್ ಸುವರ್ಣ, ರೋಟರಿ ನಿಕಟಪೂರ್ವ ಜಿಲ್ಲಾ ಗವರ್ನರ್ ಡಾ.ಗೌರಿ, ಶಿಕ್ಷಣ ಇಲಾಖೆಯ (DDPI) ಉಪನಿರ್ದೇಶಕ ರಾದ ಗಣಪತಿ, DIAT ಉಪ ಪ್ರಾಂಶುಪಾಲರು ಡಾ.ಅಶೋಕ್ ಕಾಮತ್, ಬಿಇಒ ಡಾ.ಯಲ್ಲಮ್ಮ, ಮಹಿಳಾ ಕಾಲೇಜಿನ ಪ್ರಿನ್ಸಿಪಾಲ ಡಾ.ಸುಮಾ, ಮಹಿಳಾ ಹೈಸ್ಕೂಲ್ ಮುಖ್ಯ ಉಪಧ್ಯಾಯನಿ ಇಂದಿರಾ, ZUARI ಆಗ್ರೀ ಕೆಮಿಕಲ್ ಸೀನಿಯರ್ ಮ್ಯಾನೇಜರ್ ಅನಂತ ಪ್ರಭು ಗೋವಾ, ರೋಟರಿ ನಿರ್ದೇಶಕ ಅಮಿತ್ ಅರವಿಂದ್ ನಾಯಕ್, ರೋಟರಿ ನಿರ್ದೇಶಕ ರೇಣು ಜಯರಾಂ, ಡಾ.ಗಿರಿಜಾ, ಪ್ರೇಮಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರೋಟರಿ ಕ್ಲಬ್ ಮಣಿಪಾಲ್ ಅಧ್ಯಕ್ಷರಾದ ಶ್ರೀಪತಿ ಸ್ವಾಗತಿಸಿದರು, ಕಾರ್ಯದರ್ಶಿ ಡಾ.ಶ್ರೀಕಾಂತ್ ಪ್ರಭು ವಂದನಾರ್ಪಣೆಗೈದರು, ರೋಟರಿ ಪದಾಧಿಕಾರಿಗಳು, ಸದಸ್ಯರು, ಶಾಲಾ ಶಿಕ್ಷಕರು, ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.