ಉಡುಪಿ: ಉಡುಪಿ ರೋಟರಿ ಕ್ಲಬ್‌ನ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ ಮತ್ತು ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ಎಂಜಿಎಮ್ ಕಾಲೇಜಿನ ರವೀಂದ್ರ ಮಂಟಪದಲ್ಲಿ ನಡೆಯಿತು.
ಭಾವೀ ಜಿಲ್ಲಾ ಗವರ್ನರ್ ಬಿ.ಎಂ.ಭಟ್ ರೋಟರಿ ಉಡುಪಿಯ ನೂತನ ಅಧ್ಯಕ್ಷ ಗುರುರಾಜ್ ಭಟ್.ಟಿ ಅವರಿಗೆ ಕೊರಳ ಪಟ್ಟಿ ಮತ್ತು ಪಿನ್ ತೊಡಿಸುವುದರ ಮೂಲಕ ಅಧಿಕಾರ ಹಸ್ತಾಂತರಿಸಿ ಮಾತನಾಡಿ, ರೋಟರಿ ಸಂಸ್ಥೆಗಳು ನಿರಂತರ ಸೇವಾ ಚಟುವಟಿಕೆಗಳ ಮೂಲಕ ಜನರನ್ನು ತಲುಪಬೇಕಲ್ಲದೇ ರೋಟರಿ ಸದಸ್ಯರನ್ನು ಉಳಿಸಿ ಬೆಳೆಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ರೋಟರಿಯ ಇಂಟರಾಕ್ಟ್ ಕ್ಲಬ್ ನ ಶಾಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕುಕ್ಕಿಕಟ್ಟೆಯ ಶ್ರೀ ಕೃಷ್ಣ ಬಾಲನಿಕೇತನದ ಮಾತಾಜಿ ಶಕುಂತಲರವರಿಗೆ ಗೃಹ ನಿರ್ಮಾಣಕ್ಕೆ ಸಹಾಯಧನ ನೀಡಲಾಯಿತು.
ಸಹಾಯಕ ಗವರ್ನರ್ ರೋ. ಜಗನ್ನಾಥ್ ಕೋಟೆ ಯವರು ರೋ. ಹರಿಪ್ರಸಾದ್ ಸಂಪಾದಕತ್ವದ ಕ್ಲಬ್ಬಿನ ವಿಶೇಷ ಸಂಚಿಕೆ ಕಾಂಚ್ ನ್ನು ಬಿಡುಗಡೆ ಮಾಡಿ ಶುಭಹಾರೈಸಿದರು. ವಲಯ ಸೇನಾನಿ ಹೇಮಂತ ಯು.ಕಾಂತ್ ಮಲ್ಪೆ ಸರಕಾರಿ ಪ್ರೌಡಶಾಲೆ ವಿದ್ಯಾರ್ಥಿಗಳಿಗೆ ಸಮವಸ್ತ್ರ ಬೆಲ್ಟ್ ಗೆ ಸಹಾಯಧನ ವಿತರಿಸಿ ಶುಭ ಹಾರೈಸಿದರು.

ನಿರ್ಗಮನ ಅಧ್ಯಕ್ಷೆ ದೀಪಾ ಭಂಡಾರಿ ಸ್ವಾಗತಿಸಿದರು. ಕಾರ್ಯದರ್ಶಿ ಶುಭಾ ಬಾಸ್ರಿ ಗತವರ್ಷದ ಕಾರ್ಯಕ್ರಮದ ವರದಿ ವಾಚಿಸಿದರು. ರೋಟರಾಕ್ಟ ಕ್ಲಬ್ ಉಡುಪಿಯ ಸಾಧನೆ ಬಗ್ಗೆ ಅಭಿನಂದಿಸಲಾಯ್ತು. ಕಳೆದ ವರ್ಷದ ವಲಯ ಸೇನಾನಿ ಚಂದ್ರಶೇಖರ ಅಡಿಗರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಪ್ರಕಾಶ್ ಕಾಮತ್, ಡಾ ಸುದರ್ಶನ್ ಭಟ್, ನಾರಾಯಣ ಬಿ.ಕೆ, ಪದ್ಮಿನಿ ಭಟ್, ಜನಾರ್ದನ ಭಟ್, ಮಾಲತಿ ತಂತ್ರಿ, ಬೇರೆ ಬೇರೆ ರೋಟರಿ ಕ್ಲಬ್‌ಗಳ ಅಧ್ಯಕ್ಷರು, ಜಿಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರುಗಳು, ಉಡುಪಿ ರೋಟರಿಯ ಪಧಾದಿಕಾರಿಗಳು ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು.
ರಾಮಚಂದ್ರ ಉಪಾಧ್ಯಾಯ ಮತ್ತು ವಿದ್ಯಾ ಶೆಣೈ ಕಾರ್ಯಕ್ರಮ ನಿರೂಪಿಸಿ, ನೂತನ ಕಾರ್ಯದರ್ಶಿ ವೈಷ್ಣವಿ ಆಚಾರ್ಯ ವಂದಿಸಿದರು.












