ಬ್ರಹ್ಮಾವರ :ರೋಟರಾಕ್ಟ್ ಕ್ಲಬ್ ಬ್ರಹ್ಮಾವರದ ಆಶ್ರಯದಲ್ಲಿ ಸ್ವಾತಂತ್ರೋತ್ಸವದ ಅಂಗವಾಗಿ ಇಂಟರಾಕ್ಟ್ ಕ್ಲಬ್‌ಗಳಿಗೆ ಕಾರ್ಯಕ್ರಮ ವೈವಿಧ್ಯ ಸ್ಪರ್ಧೆ ‘ಚಿಲುಮೆ-2024’ ಬ್ರಹ್ಮಾವರದ ನಿರ್ಮಲ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ನಿಯೋಜಿತ ರೋಟರಿ ಗವರ್ನರ್ ಬಿ.ಎಂ.ಭಟ್ ಉದ್ಘಾಟಿಸಿ ಮಾತನಾಡಿ ಯುವ ಜನತೆಗೆ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಈ ಕಾರ್ಯಕ್ರಮ ಉತ್ತಮ ಅವಕಾಶ ಕಲ್ಪಿಸಿದೆ ಎಂದರು. ಅತಿಥಿಗಳಾಗಿ ಕಾರ್ಯಕ್ರಮ ಪ್ರಾಯೋಜಕರಾದ ರೋಟರಿ ಕ್ಲಬ್ ಬ್ರಹ್ಮಾವರದ ಅಧ್ಯಕ್ಷರಾದ ಶ್ರೀಧರ್ ವಿ. ಶೆಟ್ಟಿ, ವಲಯಸೇನಾನಿ ದಿನೇಶ್ ನಾಯಿರಿ, ರೋಟರಿ ಯುವ ಸೇವಾ ನಿರ್ದೇಶಕರಾದ ಉದಯಕುಮಾರ್ ಶೆಟ್ಟಿ, ಇಂಟರಾಕ್ಟ್ ಸಭಾಪತಿ ಸುಂದರಾಮ ಶೆಟ್ಟಿ, ರೋಟರಾಕ್ಟ್ ಸಭಾಪತಿ ಜಗದೀಶ್ ಕೆಮ್ಮಣ್ಣು, ನಿರ್ಮಲ ಶಾಲೆಯ ಅಧ್ಯಾಪಕರಾದ ಐರಿನ್ ಪಿರೇರಾ, ಸಂಯೋಜಕಿ ರುಬಿನ ಮಾರ್ಸಿಲಿನ ರೊಡ್ರಿಗಸ್, ಜಿಲ್ಲಾ ರೋಟರಾಕ್ಟ್ ಸಾಂಸ್ಕೃತಿಕ ಪ್ರತಿನಿಧಿ ಜಯಲಕ್ಷ್ಮೀ ಉಪಸ್ಥಿತರಿದ್ದರು.ರೋಟರಾಕ್ಟ್ ಕ್ಲಬ್ ಬ್ರಹ್ಮಾವರದ ಅಧ್ಯಕ್ಷರಾದ ಅಮೃತಾ ಸ್ವಾಗತಿಸಿದರು.
ವೇದಿಕೆಯಲ್ಲಿ ಕಾರ್ಯಕ್ರಮ ಸಂಯೋಜಕರಾದ ಆಶಿಶ್ ಅಂದ್ರಾದೆ ಉಪಸ್ಥಿತರಿದ್ದರು. ಸಿಂಚನ ಪ್ರಾರ್ಥನೆ ನೆರವೇರಿಸಿದರು. ಮಧುಸೂದನ್ ಮತ್ತು ಸುಧಾ ಭಟ್ ಕಾರ್ಯಕ್ರಮ ನಿರೂಪಿಸಿದರು. ಕಾರ್ತಿಕ್ ಬಾಸ್ರಿ ಸಹಕರಿಸಿದರು.
ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾದ ಬ್ರಹ್ಮಾವರ ರೋಟರಿ ವೆಲ್ ಫೇರ್ ಟ್ರಸ್ಟಿನ ಅಧ್ಯಕ್ಷರಾದ ಅರುಣ್ ಕುಮಾರ್ ಶೆಟ್ಟಿ, ರೋಟರಾಕ್ಟ್ ಮಾಜಿ ಸಭಾಪತಿ ಜಗದೀಶ್ ಶೆಟ್ಟಿ ವಿಜೇತರಿಗೆ ಬಹುಮಾನ ವಿತರಿಸಿದರು. ವೇದಿಕೆಯಲ್ಲಿ ನಿರ್ಮಲ ಆಂಗ್ಲ ಮಾಧ್ಯಮ ಶಾಲೆಯ ಇಂಟರಾಕ್ಟ್ ಸಂಯೋಜಕರಾದ ರಮೇಶ್ ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ಪ್ರಥಮ – ನಿರ್ಮಲ ಆಂಗ್ಲ ಮಾಧ್ಯಮ ಶಾಲೆ ಬ್ರಹ್ಮಾವರ, ದ್ವಿತೀಯ – ಸರಕಾರಿ ಪ್ರೌಢ ಶಾಲೆ, ಬ್ರಹ್ಮಾವರ, ತೃತೀಯ – ಶ್ರೀನಿಕೇತನ ಪ್ರೌಢಶಾಲೆ, ಮಟಪಾಡಿ, ಶಾಲಾ ತಂಡಗಳಿಗೆ ನಗದು ಬಹುಮಾನ ಹಾಗೂ ಟ್ರೋಫಿಯನ್ನು ಹಸ್ತಾಂತರಿಸಲಾಯಿತು.