ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ವಿವಿಧ ಸ್ಪರ್ಧೆ ಆಯೋಜನೆ

ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸ.ಪ್ರ.ದ.ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಮತ್ತು ಲಯನ್ಸ್ ಕ್ಲಬ್ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‌ಚಂದ್ ರವರ ಜನ್ಮ ದಿನಾಚರಣೆಯ ಅಂಗವಾಗಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮವು ಕ್ರೀಡಾ ವಸತಿ ನಿಲಯದ ಕ್ರೀಡಾಪಟುಗಳು ಹಾಗೂ ಕ್ರೀಡಾಂಗಣದಲ್ಲಿ ಕ್ರೀಡಾಭ್ಯಾಸ ಮಾಡುವ ಕ್ರೀಡಾಪಟುಗಳೊಂದಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸುವ ನಗರದ ಅಜ್ಜರಕಾಡು ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಯಿತು.

ಉಡುಪಿ ಶಾಸಕ ಯಶ್‌ಪಾಲ್ ಎ ಸುವರ್ಣ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಉಡುಪಿಯ ಅಧ್ಯಕ್ಷ ಲೂಯಿಸ್ ಲೋಬೋ, ಕಾರ್ಯದರ್ಶಿ ಪ್ರಸಾದ್ ನಾಯಕ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಕ್ರೀಡಾಪಟುಗಳಿಗಾಗಿ 800 ಮೀ ಹಾಗೂ 1500 ಮೀ. ಓಟ, ಸಂಗೀತ ಕುರ್ಚಿ ಹಾಗೂ ಹಗ್ಗ ಜಗ್ಗಾಟ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.

ಬಾಲಕಿಯರ ವಿಭಾಗ : 800 ಮೀ. ಓಟ ಸ್ಪರ್ಧೆಯಲ್ಲಿ ಸ್ಪೂರ್ತಿ (ಡಿವೈಇಎಸ್) ಪ್ರಥಮ ಸ್ಥಾನ, ವೈಷ್ಣವಿ (ಡಿವೈಇಎಸ್) ದ್ವಿತೀಯ ಸ್ಥಾನ ಹಾಗೂ ಧನ್ವಿ ಎಸ್ (ಯುನೈಟೆಡ್ ಅಥ್ಲೆಟಿಕ್ಸ್ ಗ್ರೂಪ್) ತೃತೀಯ ಸ್ಥಾನ. 1500 ಮೀ. ಓಟ ಸ್ಪರ್ಧೆಯಲ್ಲಿ ವರ್ಷಾ (ಉಡುಪಿ ಟ್ರಾö್ಯಕ್ & ಫೀಲ್ಡ್) ಪ್ರಥಮ ಸ್ಥಾನ, ಸುಜಾತಾ (ಡಿವೈಇಎಸ್) ದ್ವಿತೀಯ ಸ್ಥಾನ ಹಾಗೂ ಅನನ್ಯಾ ಬಿ.ವಿ (ಡಿವೈಇಎಸ್) ತೃತೀಯ ಸ್ಥಾನ. ಸಂಗೀತ ಕುರ್ಚಿ ಸ್ಪರ್ಧೆಯಲ್ಲಿ ಜ್ಯೋತಿ ಸಿ (ಡಿವೈಇಎಸ್) ಪ್ರಥಮ ಸ್ಥಾನ, ಧನ್ವಿ ಎಸ್ (ಯುನೈಟೆಡ್ ಅಥ್ಲೆಟಿಕ್ಸ್ ಗ್ರೂಪ್) ದ್ವಿತೀಯ ಸ್ಥಾನ, ಪ್ರಗತಿ ಎಸ್ ಬಿ(ಡಿವೈಇಎಸ್) ತೃತೀಯ ಸ್ಥಾನ ಪಡೆದರು. ಬಾಲಕಿಯರ ಹಗ್ಗ-ಜಗ್ಗಾಟ ಸ್ಪರ್ಧೆಯಲ್ಲಿ ಡಿವೈಇಎಸ್ ಸೀನಿಯರ್ ಮತ್ತು ಜೂನಿಯರ್ ತಂಡಗಳು ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದರು.

ಬಾಲಕರ ವಿಭಾಗ : 800 ಮೀ. ಓಟ ಸ್ಪರ್ಧೆಯಲ್ಲಿ ವಿಕಾಸ್ ಕುಮಾರ್ ಗುಪ್ತ (ಉಡುಪಿ ಟ್ರಾö್ಯಕ್ & ಫೀಲ್ಡ್) ಪ್ರಥಮ ಸ್ಥಾನ, ಆಕಾಶ್ ಕಾರ್ವಿ (ಡಿವೈಇಎಸ್) ದ್ವಿತೀಯ ಸ್ಥಾನ, ಹರೀಶ್ ನಾಗರಾಜ್ (ಡಿವೈಇಎಸ್) ತೃತೀಯ ಸ್ಥಾನ, 1500 ಮೀ. ಓಟ ಸ್ಪರ್ಧೆಯಲ್ಲಿ ನಾಗರಾಜ (ಡಿವೈಇಎಸ್) ಪ್ರಥಮ ಸ್ಥಾನ, ಪ್ರಜ್ವಲ್ ಗೋಣ Â(ಡಿವೈಇಎಸ್) ದ್ವಿತೀಯ ಸ್ಥಾನ, ರಾಘವೇಂದ್ರ(ಡಿವೈಇಎಸ್) ತೃತೀಯ ಸ್ಥಾನ. ಹಗ್ಗ-ಜಗ್ಗಾಟ ಸ್ಪರ್ಧೆಯಲ್ಲಿ ಡಿವೈಇಎಸ್ ತಂಡವು ಪ್ರಥಮ ಸ್ಥಾನ ಹಾಗೂ ಉಡುಪಿ ಟ್ರಾö್ಯಕ್ & ಫೀಲ್ಡ್ ತಂಡವು ದ್ವಿತೀಯ ಸ್ಥಾನ ಪಡೆದವು. ವಿಜೇತರಿಗೆ ಪ್ರಶಸ್ತಿಪತ್ರ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಯಿತು.