ಉಡುಪಿ: ಮಲ್ಪೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿ ದಾಖಲಾದ ಪ್ರಕರಣದಲ್ಲಿ ಬಂಧಿತರ ಪೋಟೊವನ್ನು ತರಾತುರಿಯಲ್ಲಿ ಮಾಧ್ಯಮಕ್ಕೆ ಬಿಡುಗಡೆ ಮಾಡಿದ ಉಡುಪಿ ಎಸ್ಪಿ ಅವರು ಮಣಿಪಾಲದಲ್ಲಿ ಕಾರಿಗೆ ಗುದ್ದಿ ಪೋಲಿಸರಿಂದ ಪರಾರಿಯಾಗಲು ಯತ್ನಿಸಿದ ಪ್ರಕರಣದಲ್ಲಿ ಬಂಧಿತರಾದ ಇಸಾಕ್‌ನ ಗೆಳತಿ, ಆಕೆಯ ತಾಯಿಯ ಪೋಟೊವನ್ನು ಮಾಧ್ಯಮಕ್ಕೆ ಯಾಕೆ ಬಿಡುಗಡೆ ಮಾಡಿಲ್ಲ ಎಂದು ಹೈಕೋರ್ಟ್ ವಕೀಲ, ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ ಪ್ರಶ್ನಿಸಿದ್ದಾರೆ.
ಎಲ್ಲಾ ಪ್ರಕರಣದಲ್ಲಿಯೂ ಆರೋಪಿಗಳ ಪೋಟೊವನ್ನು ಮಾಧ್ಯಮಕ್ಕೆ ನೀಡದೇ, ಉದ್ದೇಶಪೂರ್ವಕವಾಗಿ ಅಮಾಯಕ ಮೀನುಗಾರ ಮಹಿಳೆಯವರ ಪೋಟೊವನ್ನು ಮಾಧ್ಯಮಕ್ಕೆ ನೀಡಿರುವುದು ಪಕ್ಷಪಾತ
ಬಂಧನಕ್ಕೆ ಒಳಗಾದ ಮೀನುಗಾರ ಮಹಿಳೆಯರ ಪೈಕಿ ಒಬ್ಬರ ಪತಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಮತ್ತೊಬ್ಬರು ದಲಿತ ಮಹಿಳೆ. ಆಕೆಯ ಪೋಟೊ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ಆಕೆಗೆ ಶಾಲೆಗೆ ಹೋಗುತ್ತಿರುವ ಮಕ್ಕಳಿದ್ದು, ಆ ಮಕ್ಕಳ ಮಾನಸಿಕ ಸ್ಥಿತಿ ಏನಾಗಬೇಡ
ಘಟನೆ ನಡೆದ ದಿನ ಎರಡೂ ಕಡೆಯವರನ್ನು ಠಾಣೆಗೆ ಕರೆಸಿ ಪೋಲಿಸ್ ಅಧಿಕಾರಿಗಳ ಸಮಕ್ಷಮದಲ್ಲಿ ರಾಜಿ ಮಾಡಲಾಗಿತ್ತು. ಎರಡು ಕಡೆಯವರೂ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರು. ಹಾಗೂ ಠಾಣಾಧಿಕಾರಿಗಳು ಎರಡೂ ಕಡೆಯವರಿಂದ ತಪ್ಪೊಪ್ಪಿಗೆ ಹಿಂಬರಹ ಬರೆಸಿಕೊಂಡು ಪ್ರಕರಣ ಇತ್ಯರ್ಥಗೊಳಿಸಿದ್ದರು. ಸಂತ್ರಸ್ತ ಮಹಿಳೆಯೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ತನಗೆ ಪ್ರಕರಣ ದಾಖಲಾಗುತ್ತದೆ ಎಂದು ಅರಿವಿಲ್ಲ. ಪೋಲಿಸರು ತಿಳಿಸಿದಲ್ಲಿ ಹೆಬ್ಬೆಟ್ಟು ಒತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಮೀನುಗಾರರ ಮಹಿಳೆಯರಿಗೆ ನಮ್ಮ ಮೇಲೆ ದ್ವೇಷ ಇಲ್ಲ, ನನಗೆ ಅವರ ಮೇಲೆ ದ್ವೇಷ ಇಲ್ಲ. ಕೊರೊನಾ ಸಮಯದಲ್ಲೂ ನಮಗೆ ಮೀನುಗಾರರು ಸಹಾಯ ಮಾಡಿರುತ್ತಾರೆ ಎಂದಿರುವುದು ಮಾಧ್ಯಮಗಳಲ್ಲಿ ಪ್ರಸಾರವಾಗಿದೆ.
ಆದರೆ ಘಟನೆಯ ವಿಡಿಯೋ ಚಿತ್ರೀಕರಣವನ್ನು ವೈಭವೀಕರಿಸಿದ ನಂತರ ಪೊಲೀಸ್ ಇಲಾಖೆ ಮುಂದುವರೆದು ಅಮಾಯಕ ಮೀನುಗಾರರ ಮೇಲೆ ಅಟ್ರಾಸಿಟಿ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲಿಸಿ ಬಂಧಿಸಿರುವುದು ಸರಿಯಲ್ಲ. ಠಾಣೆಯಲ್ಲಿ ರಾಜಿಯಾದ ಪ್ರಕರಣವನ್ನು ಮಲ್ಪೆ ಠಾಣೆಯ ಲೋಕೆಶ್ ಹಾಗು ಲಕ್ಷ್ಮಣ್ ಎಂಬವರೇ ವಿಡಿಯೋವನ್ನು ವೈರಲ್ ಮಾಡಿದ್ದಾರೆ ಎಂದು ಪ್ರತಿಭಟನಕಾರರು ಎಪ್ಪಿ ಅವರ ಗಮನಕ್ಕೆ ತಂದಿದ್ದಾರೆ. ಆದರೆ ಅವರನ್ನು ಅಮಾನತು ಮಾಡುವ ಬದಲು, ಬೀಟ್ ಕಾನ್‌ಸ್ಟೇಬಲ್‌ರನ್ನು ಅಮಾನತು ಮಾಡಿರುವುದು ಸರಿಯೇ ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












