ಉಡುಪಿ: ಮೈಂಡ್ ಕ್ರಿಯೇಟಿವ್ ಸ್ಕೂಲ್ AISECT ಗ್ರೂಪ್ ಆಫ್ ಯುನಿವರ್ಸಿಟೀಸ್ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದು, ಗ್ರಾಫಿಕ್ಸ್, ಅನಿಮೇಷನ್, ಇಂಟೀರಿಯರ್ ಡಿಸೈನಿಂಗ್, ಫ್ಯಾಷನ್ ಡಿಸೈನಿಂಗ್, ವೆಬ್ ಡಿಸೈನಿಂಗ್ ಮತ್ತು ಡೆವಲಪ್ಮೆಂಟ್ ಇತ್ಯಾದಿ 3 ತಿಂಗಳಿನಿಂದ ಒಂದೂವರೆ ವರ್ಷದ ಕೋರ್ಸ್‌ಗಳನ್ನು ನಡೆಸುತ್ತಿದೆ. ಇದರೊಂದಿಗೆ ಶೇ. 100ರಷ್ಟು ಉದ್ಯೋಗ ಅವಕಾಶವನ್ನು ಒದಗಿಸಲಾಗಿಸುತ್ತಿದೆ.

SCOPE GLOBAL UNIVERSITY ನಿಂದ ಕೌಶಲ್ಯ ಮತ್ತು ಡಿಪ್ಲೊಮಾ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಉದ್ಯೋಗ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ “ರೋಜ್‌ಗರ್ ಮಂತ್ರ” ಎಂಬ ಉದ್ಯೋಗ ಪೋರ್ಟಲ್ ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಈ ವರ್ಷ ಒಳಾಂಗಣ ವಿನ್ಯಾಸ, ಫ್ಯಾಷನ್ ವಿನ್ಯಾಸ ಮತ್ತು ಚಿಲ್ಲರೆ ವ್ಯಾಪಾರದಲ್ಲಿ ಕೈಗಾರಿಕಾ ಆಧಾರಿತ B.VOC ಪದವಿ ಕೋರ್ಸ್‌ಗಳಿಗೆ ಮುಕ್ತ ಪ್ರವೇಶವಿದೆ. ಪದವಿ ಕೋರ್ಸ್‌ಗಳನ್ನು ಕೈಗಾರಿಕೆಗಳ ಸಹಯೋಗದೊಂದಿಗೆ ನಡೆಸಲಾಗುತ್ತಿದ್ದು, ಇದರಿಂದ ವಿದ್ಯಾರ್ಥಿಗಳು ತರಗತಿ ಕೊಠಡಿ ಬೋಧನೆ ಮತ್ತು ಕೈಗಾರಿಕೆಗಳಿಂದ ಕೆಲಸದ ಅನುಭವವನ್ನು ಪಡೆಯಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.













