ಬೆಳ್ತಂಗಡಿ: ACCE(I) ಬೆಳ್ತಂಗಡಿ ಸೆಂಟರ್ ನ ವತಿಯಿಂದ ಭಾರತರತ್ನ ಸರ್ ಎಂ.ವಿ. ಯವರ 164 ನೇ ಹುಟ್ಟುಹಬ್ಬದ ಪ್ರಯುಕ್ತ ಇಂಜಿನಿಯರ್ಸ್ ಡೇ ಮತ್ತು ಕರ್ನಾಟಕ ಪ್ರೊಫೆಷನಲ್ ಸಿವಿಲ್ ಇಂಜಿನಿಯರ್ಸ್ ಆಕ್ಟ್ ಜಾರಿಯಾದ ಸಂತೋಷಕ್ಕೆ ಸಂಭ್ರಮಾಚರಣೆ ಸಂಭ್ರಮ 2024,ಉಜಿರೆಯ ಒಷಿಯನ್ ಪರ್ಲ್ ಸಭಾಂಗಣದಲ್ಲಿ ನಡೆಯಿತು.
ಈ ಸಂಭ್ರಮದಲ್ಲಿ ಕರ್ನಾಟಕ ಪ್ರೊಫೆಷನಲ್ ಸಿವಿಲ್ ಇಂಜಿನಿಯರ್ಸ್ ಆಕ್ಟ್ ಜಾರಿಯಾಗಲು ನಿರಂತರ ಶ್ರಮವಹಿಸಿದ ಇಂಜಿನಿಯರುಗಳಾದ ಶ್ರೀಕಾಂತ್ ಚನಲ್, ಅಜಿತ್ ಕುಮಾರ್, ಡಾ.ಅಶ್ವತ್, ಡಾ.ಎಮ್ ಆರ್ ಕಲಗಲ್ ಮತ್ತು ವಿಧಾನ ಪರಿಷತ್ ಸದಸ್ಯರಾದ ಕೆ ಪ್ರತಾಪ್ ಸಿಂಹ ನಾಯಕ್ ರವರನ್ನು ಗೌರವಿಸಲಾಯಿತು.
ಈ ಸಂಧರ್ಭದಲ್ಲಿ ಮುಲ್ಕಿ ಇಂಜಿನಿಯರ್ಸ್ ಅಸೋಸಿಯೇಷನ್ KPCEA-SC ಯ ಸದಸ್ಯತ್ವ ಶುಲ್ಕದ ಚೆಕ್ ಅನ್ನು KPCEA SC ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಸಂಘದ ಅಧ್ಯಕ್ಷರು Er. ಮುಲ್ಕಿ ಜೀವನ್ ಕೆ ಶೆಟ್ಟಿ ಹಸ್ತಾಂತರಿಸಿದರು. ಸಂಘದ ಖಜಾಂಚಿ Er.ವರುಣ್ . ಉಪಸ್ಥಿತರಿದ್ದರು.