ಮಣಿಪಾಲ: ಮಣಿಪಾಲ ಶಿವಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಮುನಿಯಾಲ್ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ವಿಶ್ವ ಬಂಜೆತನ ಜಾಗೃತಿ ಮಾಸವಾಗಿ ಜೂನ್ 24 ರಿಂದ 29 ರವರೆಗೆ ಬೆಳಿಗ್ಗೆ 9 ರಿಂದ ಸಂಜೆ 4 ರವರೆಗೆ ಸುಪ್ರಜಾ ಬಂಜೆತನ ಚಿಕಿತ್ಸಾ ಶಿಬಿರ – ವಂಶವಾಹಿನಿ ಕಲ್ಪವನ್ನು ಆಯೋಜಿಸಲಾಗಿದೆ.
ಈ ಶಿಬಿರದಲ್ಲಿ ಉಚಿತ ಭಾಷಣ ಹಾಗೂ ರಿಯಾಯಿತಿ ದರದಲ್ಲಿ ಚಿಕಿತ್ಸೆ ಲಭ್ಯವಿದೆ ಬಂಜೆತನ (ಗರ್ಭಧಾರಣೆಗೆ ಅಸಮರ್ಥತೆ), ದ್ವಿತೀಯ ಬಂಜೆತನ, ದಂಪತಿ ಗರ್ಭದರಿಸಲು ಯೋಚಿಸುತ್ತಿದ್ದರೆ, ವಿಫಲವಾದ ಐವಿಎಫ್, ಐಯುಐ ರೋಗಿಗಳು, ಪಿಸಿಓಡಿ, ಮುಟ್ಟಿನ ಅಸ್ವಸ್ಥತೆಗಳಂತಹ ಸ್ತ್ರೀರೋಗ ಅಸ್ವಸ್ಥತೆಗಳು, ರಕ್ತಸ್ರಾವ, ಅಲ್ಪರಕ್ತಸ್ರಾವ, ದೀರ್ಘ ಕಾಲ ರಕ್ತಸ್ರಾವ, ಮುಟ್ಟಿನ ಸಮಯದಲ್ಲಿ ಹೊಟ್ಟೆ ನೋವು, ಅಸಹಜ ಬಿಳಿ ಸ್ರವಿಸುವಿಕೆ (ದುರ್ವಾಸನೆ ಹಳದಿ/ಹಸಿರು ಸ್ರಾವ) ಅಂಡೋತ್ಪತ್ತಿ ಇಲ್ಲದ ಋತುಚಕ್ರ (ಅನೋವ್ಯುಲೇಟರಿ ಸೈಕಲ್ಸ್) ಕಡಿಮೆಯಾದ ಅಂಡಾಶಯದ ಮೀಸಲು, ಗರ್ಭಾಶಯದ ಫೈಬ್ರಾಯ್ಡ್, ಎಂಡೋಮೆಟ್ರಿಯೋಸಿಸ್, ಅಡೆನೋ ಮೈಯೋಸಿಸ್, ಶ್ರೋಣಿಯ ಉರಿಯೂತ ಕಾಯಿಲೆಯಿಂದ ಬಳಲುತ್ತಿರುವ ದಂಪತಿ ಈ ಶಿಬಿರದ ಪ್ರಯೋಜನ ಪಡೆಯಬಹುದು ಶಿಬಿರದ ಮಾಹಿತಿಗಾಗಿ 8123403233 ಸಂಪರ್ಕಿಸಲು ಸಂಸ್ಥೆಯ ಪ್ರಕಟಣೆ ತಿಳಿಸಿದೆ.